‘ಪೈಲ್ವಾನ್​’ ಟಿಕೆಟ್ ಬುಕ್ಕಿಂಗ್ ಶುರು..!

0
305

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್​’ ಸಿನಿಮಾ ಸೆಪ್ಟೆಂಬರ್ 12ರಂದು ವಿಶ್ವದಾದ್ಯಂತ ರಿಲೀಸ್ ಆಗ್ತಿರೋ ಬಗ್ಗೆ ನಿಮ್ಗೆ ಗೊತ್ತೇ ಇದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಬಾದ್​ ಷಾ ಸುದೀಪ್ ‘ಪೈಲ್ವಾನ್’ ಆಗಿ ಅಬ್ಬರಿಸಲಿದ್ದಾರೆ.
‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಡೈರೆಕ್ಟರ್ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್​ನ ಈ ಸಿನಿಮಾದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಪೋಸ್ಟರ್, ಟೀಸರ್, ಟ್ರೇಲರ್, ಹಾಡುಗಳಿಂದ ಸದ್ದು ಮಾಡ್ತಿರೋ ‘ಪೈಲ್ವಾನ್’ ಎಂಟ್ರಿಗೆ ದಿನಗಣನೆ ಶುರುವಾಗಿದೆ. ಇದೀಗ ಬುಕ್​ ಮೈ ಶೋನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಸದ್ಯಕ್ಕೆ ಕನ್ನಡ ಮತ್ತು ತಮಿಳು ಭಾಷೆಯ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ. ಟಿಕೆಟ್​ ಜೋರಾಗಿ ಸೇಲಾಗ್ತಿದೆ. 

LEAVE A REPLY

Please enter your comment!
Please enter your name here