Home ಸಿನಿ ಪವರ್ ಒಂದೇ ದಿನ ಮೂರು ಗಿಫ್ಟ್​ ಕೊಟ್ರು 'ಪೈಲ್ವಾನ್​' ಕಿಚ್ಚ..!

ಒಂದೇ ದಿನ ಮೂರು ಗಿಫ್ಟ್​ ಕೊಟ್ರು ‘ಪೈಲ್ವಾನ್​’ ಕಿಚ್ಚ..!

ಅಭಿನಯ ಚಕ್ರವರ್ತಿ ಸುದೀಪ್ ಸಿನಿಮಾಗಳು ಅಂದ್ರೆ ಅಭಿಮಾನಿಗಳಲ್ಲಿ ಪುಳಕ ಜಾಸ್ತಿ. ಈಗಾಗಲೇ ಹತ್ತಾರು ವಿಭಿನ್ನ ರೋಲ್​ಗಳಲ್ಲಿ ನಟಿಸಿರೋ ಕಿಚ್ಚ ಇದೀಗ ಮೊದಲ ಬಾರಿಗೆ ಕುಸ್ತಿ ಪೈಲ್ವಾನ್ ಗೆಟಪ್​ನಲ್ಲಿ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ.
‘ಹೆಬ್ಬುಲಿ’ ಕೃಷ್ಣ, ಸುದೀಪ್ ಕಾಂಬಿನೇಷನ್​​ನ ಈ ಸಿನಿಮಾ ಟೀಸರ್​​ನಿಂದಲೇ ದೊಡ್ಡ ಧಮಾಕವನ್ನೇ ಸೃಷ್ಟಿಸಿದೆ. ಮಾಡ್ರನ್ ಕಥೆಗೆ ಕುಸ್ತಿಯ ಪಕ್ಕಾ ದೇಸಿ ಟಚ್ ನೀಡಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ.
ಪೈಲ್ವಾನ್‌ ಸಿನಿಮಾದ ಹಾಡುಗಳು ಯಾವಾಗ ಬಿಡುಗಡೆ ಆಗಲಿವೆ ಎಂಬ ಪ್ರಶ್ನೆಯು ಎಲ್ಲರಲ್ಲೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಜುಲೈ 27ಕ್ಕೆ ಪೈಲ್ವಾನ್‌ ಸಿನಿಮಾದ ಆಡಿಯೋ ಲಾಂಚ್ ಆಗಲಿದೆ. ಅದರಲ್ಲೂ ಕೋಟೆನಾಡು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಮಾಡಲು ನಿರ್ದೇಶಕ ಕೃಷ್ಣ ನಿರ್ಧರಿಸಿದ್ದಾರೆ. ಇದು ಕಿಚ್ಚನ ಅಭಿಮಾನಿಗಳಿಗೆ ಸಿಕ್ಕ ಮೊದಲ ಗಿಫ್ಟ್
ಇನ್ನು ಎರಡನೇ ಗಿಫ್ಟ್ ಆಗಿ ಚಿತ್ರತಂಡ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಚಿತ್ರದ ಬಗ್ಗೆ ತುಂಬಾನೇ ನಿರೀಕ್ಷೆ ಮೂಡಿಸಿದ್ದ ‘ಬಂದ ನೋಡು ಪೈಲ್ವಾನ್’ ಅನ್ನೋ ಥೀಮ್ ಸಾಂಗ್​ನ್ನು ನಾಳೆ ಸಂಜೆ 6.30ಕ್ಕೆ ಲಹರಿ ಮ್ಯೂಸಿಕ್​ನಲ್ಲಿ ರಿಲೀಸ್ ಮಾಡಲಿದೆ.
ಟೀಸರ್ ನಲ್ಲಿ ಬಂದ ಬಂದ ನೋಡೋ ಪೈಲ್ವಾನ್ ನ ಒಂದು ಕೇಳಿ ಥ್ರಿಲ್ ಆಗಿದ್ದ ಕಿಚ್ಚನ ಅಭಿಮಾನಿಗಳಿಗೆ ನಾಳೆ ರಿಲೀಸ್ ಆಗಲಿರುವ ಥಿಮ್ ಸಾಂಗ್ ಮತ್ತಷ್ಟು ಗುಂಗು ಹಿಡಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ಇದ್ರ ಜೊತೆಗೆ ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡಿದೆ . ನಿನ್ನೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡೋದಾಗಿ ಹೇಳಿದ್ದರು . ಏನು ಆ ಸರ್ಪ್ರೈಸ್ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಪೈಲ್ವಾನ್ ನ ನಯಾ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ದಿಲ್ ಗೆ ಮತ್ತಷ್ಟು ಖುಷಿ ಕೊಟ್ಟಿದ್ದಾರೆ ಅಭಿನಯ ಚಕ್ರವರ್ತಿ.
ಇನ್ನು ಪೋಸ್ಟರ್ ಜೊತೆಗೆ ಪೈಲ್ವಾನ್ ಚಿತ್ರ ನೇಪಾಳ ಹಾಗು ಭೂತಾನ್ ನಲ್ಲಿಯೂ ರಿಲೀಸ್ ಆಗಲಿದೆ ಅಂತ ಕಿಚ್ಚ ಹೇಳಿದ್ದಾರೆ . ಪೈಲ್ವಾನ್ ಬಗ್ಗೆ ಒಂದು ಸಿಹಿ ಸುದ್ದಿ ಸಿಕ್ಕರೆ ಸಾಕು ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಮೂರು ಸ್ವೀಟ್ ನ್ಯೂಸ್ ಕೇಳಿ ಲಡ್ಡು ಬಂದು ಬಾಯಿಗೆ ಬಿದ್ದಹಾಗೆ ಆಗಿದೆ .
ಸದ್ಯ ಚಿತ್ರದಲ್ಲಿ ಬಾಲಿವುಡ್​ನ ಖ್ಯಾತತಾರೆಯರೂ ನಟಿಸಿದ್ದು ಆಗಸ್ಟ್​ನಲ್ಲಿ ತೆರೆಗೆ ಬರಲಿದೆ ವಿಶೇಷ ಅಂದ್ರೆ ಕಿಚ್ಚ ತಮ್ಮ ಅಭಿಮಾನಿಗಳಿಗೆ ಒಂದೇ ದಿನ ಮೂರು ಗಿಫ್ಟ್ ನೀಡಿದ್ದಾರೆ . ಪೈಲ್ವಾನ್ ಟೀಮ್ ಕೊಟ್ಟ ಈ ಮೂರು ಗಿಫ್ಟ್ ಗಳಿಂದ ಅಭಿಮಾನಿಗಳು ಥ್ರಿಲ್ ಆಗಿ ಕುಣಿದಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments