ನೇಪಾಳ, ಭೂತಾನ್​ನಲ್ಲೂ ‘ಪೈಲ್ವಾನ್’ ಹವಾ..!

0
239

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್​’ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕಿಚ್ಚನ ‘ಪೈಲ್ವಾನ್’ ಅವತಾರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈ ನಡುವೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಪೈಲ್ವಾನ್ ಹವಾ ಸೃಷ್ಠಿಯಾಗೋ ಸೂಚನೆ ಸಿಕ್ಕಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂನಲ್ಲಿ ಚಿತ್ರ ರಿಲೀಸ್ ಆಗಲಿದೆ. ಕನ್ನಡದಲ್ಲಿ ವಿತರಣೆ ಜವಬ್ದಾರಿಯನ್ನು ಕೆಆರ್​​ಜಿ ಸಂಸ್ಥೆ ಹೊತ್ತಿದೆ. ಉಳಿದ ಭಾಷೆಗಳ ಹೊಣೆಯನ್ನು ಜೀ ಸ್ಟುಡಿಯೋಸ್ ವಹಿಸಿಕೊಂಡಿದ್ದು, ಅದು ವಿದೇಶದಲ್ಲೂ ‘ಪೈಲ್ವಾನ್​’ಗೆ ಅಖಾಡ ರೆಡಿ ಮಾಡುತ್ತಿದೆ. ಮೊದಲಿಗೆ ನೇಪಾಳ, ಭೂತಾನ್​ನಲ್ಲಿ ಪೈಲ್ವಾನ್ ರಿಲೀಸ್ ಆಗಲಿದ್ದು, ಬಳಿಕ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ರಿಕಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here