ಆಗಸ್ಟ್ 29ಕ್ಕೆ ‘ಪೈಲ್ವಾನ್’ ರಿಲೀಸ್​ ಆಗಲ್ಲ..!

0
126

‘ಹೆಬ್ಬುಲಿ’ ಖ್ಯಾತಿಯ ಡೈರೆಕ್ಟರ್ ಕೃಷ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪೈಲ್ವಾನ್’ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆಯಾಗಿದೆ.
ವರಮಹಾಲಕ್ಷ್ಮಿ ಹಬ್ಬದ ವೇಳೆ, ಅಂದ್ರೆ ಆಗಸ್ಟ್​ 9ಕ್ಕೆ ರಿಲೀಸ್ ಆಗುತ್ತದೆ ಎನ್ನಲಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಮತ್ತು ಸುದೀಪ್ ನಟನೆಯ ‘ಪೈಲ್ವಾನ್’ ಒಂದೇ ದಿನ ರಿಲೀಸ್ ಆಗಲಿದೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ. ಕುರುಕ್ಷೇತ್ರ ರಿಲೀಸ್ ಒಂದು ವಾರ ಹಿಂದೂಡಿಕೆಯಾಗಿದ್ದರೆ, ಪೈಲ್ವಾನ್ ರಿಲೀಸ್ ಡೇಟ್ ಆಗಸ್ಟ್ 29ಕ್ಕೆ ಮುಂದೂಡಿಕೆಯಾಗಿತ್ತು. ಇದೀಗ ಪೈಲ್ವಾನ್ 29ಕ್ಕೂ ರಿಲೀಸ್ ಆಗಲ್ಲ ಅನ್ನೋ ಸುದ್ದಿ ಬಂದಿದೆ..!
ಡೈರೆಕ್ಟರ್ ಕೃಷ್ಣ ಟ್ವೀಟ್ ಮೂಲಕ ಈ ನ್ಯೂಸ್ ಕೊಟ್ಟಿದ್ದಾರೆ. ಪೈಲ್ವಾನ್ ರಿಲೀಸ್​ ಡೇಟನ್ನು ಮುಂದೂಡಲಾಗುತ್ತಿದೆ. ಅಷ್ಟೇ ಅಲ್ಲದೆ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಕೂಡ ಮುಂದೂಡಲಾಗುವುದು. ಯಾವತ್ತು ಆಡಿಯೋ ಲಾಂಚ್ ಮತ್ತು ಮೂವಿ ರಿಲೀಸ್ ಮಾಡಲಾಗುತ್ತೆ ಅನ್ನೋದನ್ನು ಜುಲೈ 22ರ ಸಂಜೆ (ಇಂದು) 6.30ಕ್ಕೆ ಅನೌನ್ಸ್ ಮಾಡುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here