‘ಪೈಲ್ವಾನ್’ ರಿಲೀಸ್ ಡೇಟ್ ಫಿಕ್ಸ್..!

0
299

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್’ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸೆಪ್ಟೆಂಬರ್ 12ಕ್ಕೆ ‘ಪೈಲ್ವಾನ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಬಾದ್ ಷಾ ಕಿಚ್ಚ ಸುದೀಪ್ ಮೊದಲ ಬಾರಿಗೆ ಕುಸ್ತಿ ಪೈಲ್ವಾನನಾಗಿ ಅಬ್ಬರಿಸಿರೋ ಪವರ್​ಫುಲ್ ಸಿನಿಮಾ ಪೈಲ್ವಾನ್. ‘ಹೆಬ್ಬುಲಿ’ ಕೃಷ್ಣ ಡೈರೆಕ್ಷನ್​ನ ಸಿನಿಮಾ ಪವರ್​ ಫುಲ್ ಕಥೆ ಹಾಗೂ ಮೇಕಿಂಗ್​​ನಿಂದಾಗಿಯೇ ಈಗಾಗಲೇ ಸಕತ್ ಹೈಪ್ ಕ್ರಿಯೇಟ್ ಮಾಡಿದೆ. ಪೈಲ್ವಾನ್ ಸುದೀಪ್​​ರನ್ನು ಬಿಗ್ ಸ್ಕ್ರೀನ್​​​ನಲ್ಲಿ ಯಾವಾಗ ಕಣ್ತುಂಬಿಕೊಳ್ತೀವಿ ಅಂತಾ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಉಡುಗೊರೆಯಾಗಿ ಆಗಸ್ಟ್​​ 29ಕ್ಕೆ ಚಿತ್ರ ತೆರೆಗೆ ಬರುತ್ತೆ ಅಂತಾ ಹೇಳಲಾಗ್ತಿತ್ತು. ಅದಕ್ಕೂ ಮುಂಚೆ ಆಗಸ್ಟ್ 9ಕ್ಕೆ ‘ಪೈಲ್ವಾನ್’ ಅಖಾಡಕ್ಕಿಳಿಯುವ ಮಾತುಗಳೂ ಕೇಳಿಬಂದಿದ್ದವು.
ಆದ್ರೆ ರಿಲೀಸ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹೊರ ಹಾಕಿರಲಿಲ್ಲ. ಇದೀಗ ಪೈಲ್ವಾನ್ ರಿಲೀಸ್ ಡೇಟ್ ಪಕ್ಕಾ ಆಗಿದೆ. ಸೆಪ್ಟೆಂಬರ್ 12ಕ್ಕೆ ಚಿತ್ರ ತೆರೆಕಾಣುತ್ತಿದೆ.
ಇನ್ನು ‘ಪೈಲ್ವಾನ್’ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಕಿಚ್ಚಿನಿಗೆ ಜೋಡಿಯಾಗಿ ಆಕಾಂಕ್ಷ ಸಿಂಗ್​ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಸೇರಿದಂತೆ ಬಹು ದೊಡ್ಡ ತಾರಗಣವನ್ನು ‘ಪೈಲ್ವಾನ್’ ಹೊಂದಿದೆ.

LEAVE A REPLY

Please enter your comment!
Please enter your name here