Home ಸಿನಿ ಪವರ್ ರಿಲೀಸ್​ಗೂ ಮುನ್ನವೇ 'ಪೈಲ್ವಾನ್' ರೆಕಾರ್ಡ್​..!

ರಿಲೀಸ್​ಗೂ ಮುನ್ನವೇ ‘ಪೈಲ್ವಾನ್’ ರೆಕಾರ್ಡ್​..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪೈಲ್ವಾನ್​’ ಅಖಾಡಕ್ಕೆ ಇಳಿಯುವ ಮುಂಚೆಯೇ ದಾಖಲೆ ಮಾಡಿದೆ..!
ಸುದೀಪ್ ಮತ್ತು ‘ಹೆಬ್ಬುಲಿ’ ಕೃಷ್ಣ ಕಾಂಬಿನೇಷನ್​​ನ ‘ಪೈಲ್ವಾನ್’ ಈಗಾಗಲೇ ಪೋಸ್ಟರ್​​ ಹಾಗೂ ಟೀಸರ್​ ಮೂಲಕ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಇಲ್ಲವೇ ಸುದೀಪ್ ಹುಟ್ಟುಹಬ್ಬ, ಗಣೇಶ ಚತುರ್ಥಿ ಟೈಮ್​ನಲ್ಲಿ ‘ಪೈಲ್ವಾನ್​’ ಅಖಾಡಕ್ಕೆ ಇಳಿಯುವುದು ಕನ್ಫರ್ಮ್.
ಅಭಿನಯ ಚಕ್ರವರ್ತಿ, ಕಿಚ್ಚ ಅನ್ನೋ ಸ್ಟಾರ್​​ನೇಮ್, ಬಿರುದುಗಳಿಂದ ಕರೆಯಲ್ಪಡುವ ಸುದೀಪ್ ಈ ಸಿನಿಮಾದಿಂದ ಬಾದ್​ ಷಾ ಸುದೀಪ್ ಎಂಬ ಹೊಸ ಬಿರುದಿನೊಂದಿಗೆ ಬರ್ತಿದ್ದಾರೆ. ಇಷ್ಟೆಲ್ಲಾ ವಿಷಯ ಈಗಾಗಲೇ ಎಲ್ರಿಗೂ ಗೊತ್ತೇ ಇದೆ. ಹೊಸ ವಿಷಯ ಅಂದ್ರೆ ಪೈಲ್ವಾನ್​’ ಅಖಾಡಕ್ಕೆ ಇಳಿಯುವ ಮೊದಲೇ ದಾಖಲೆ ಬರೆದಿದೆ.
ಹೌದು, ಪೈಲ್ವಾನ್​’ ಹಾಡುಗಳು ಲಹರಿ ಸಂಸ್ಥೆಗೆ ದುಬಾರಿ ಮೊತ್ತಕ್ಕೆ ಮಾರಾಟವಾಗಿದೆ ಅಂತ ತಿಳಿದುಬಂದಿದೆ. ಸಿನಿಮಾ ರಿಲೀಸ್ ಆಗ್ತಿರೋ ಎಲ್ಲಾ ಐದು ಭಾಷೆಗಳ ಹಾಡುಗಳು ಕೂಡ ಲಹರಿ ಸಂಸ್ಥೆಗೆ ಸೇಲಾಗಿದೆ ಎಂದು ತಿಳಿದು ಬಂದಿದ್ದು. ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಅನ್ನೋದು ತಿಳಿದುಬಂದಿಲ್ಲ.
ಇನ್ನು ಆಕಾಂಕ್ಷಾ ಸಿಂಗ್, ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮೊದಲಾದವರು ತಾರಗಣದಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಬಲ ತುಂಬಿದ್ದಾರೆ. ಚಿತ್ರದಲ್ಲಿ ಸುದೀಪ್ ಕುಸ್ತಿ ಪಟು ಹಾಗೂ ಬಾಕ್ಸರ್ ಆಗಿ ಎರಡು ಶೇಡ್​​​​​ಗಳಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments