ಪೈಲ್ವಾನ್​​ ಸಿನಿಮಾ ಪೈರಸಿ ಆರೋಪಿ ಅರೆಸ್ಟ್ – ಆತ ಯಾರು? ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

0
721

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ಆರೋಪದಡಿ ಸೈಬರ್​ ಕ್ರೈಂ ಪೊಲೀಸರು ರಾಕೇಶ್ ಅಲಿಯಾಸ್​ ವಿರಾಟ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ರಾಕೇಶ್ ಪೈಲ್ವಾನ್​ ಸಿನಿಮಾ ರಿಲೀಸ್​ ಆದ ದಿನವೇ ಸಂಪೂರ್ಣ ಸಿನಿಮಾವನ್ನು ಪೈರಸಿ ಮಾಡಿ ತನ್ನ ಫೇಸ್​ಬುಕ್​​ನಲ್ಲಿ ಲಿಂಕ್​ ಹಾಕಿಕೊಂಡಿದ್ದ. ಅಲ್ಲದೇ ಯಾರಿಗಾದ್ರು ಸಿನಿಮಾ ಬೇಕಿದ್ರೆ ನಂಗೆ ಮೆಸೇಜ್​ ಮಾಡಿ ಅಂತ ಸ್ಟೇಟಸ್​ ಕೂಡ ಹಾಕಿಕೊಂಡಿದ್ದ ಎನ್ನಲಾಗಿದೆ.
ಪೈಲ್ವಾನ್ ರಿಲೀಸ್ ಆಗುತ್ತಿದ್ದಂತೆ ದರ್ಶನ್ ಮತ್ತು ಸುದೀಪ್ ಅಭಿಮಾನಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆದು ಬಿಟ್ಟಿತ್ತು. ಸಿಒನಿಮಾ ಪೈರಸಿ ಬಗ್ಗೆ ನಿರ್ಮಾಪಕಿ ಸ್ವಪ್ನ ಸೈಬರ್ ಕ್ರೈಂ ಪೊಲೀಸ್​​ರಿಗೆ ಕಂಪ್ಲೆಂಟ್ ಕೊಟ್ಟಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ರಾಕೇಶ್ ಅಲಿಯಾಸ್ ರಾಕೇಶ್ ವಿರಾಟ್​ ಬೆಂಗಳೂರಿನ ನೆಲಮಂಗಲ ಮೂಲದವನಾಗಿದ್ದು, ಸೋಂಪುರ ಹೋಬಳಿಯ ಇಮಚೇನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here