ಅಖಾಡದಲ್ಲಿ ಗೆದ್ದ `ಪೈಲ್ವಾನ್’

0
758

ಸ್ಯಾಂಡಲ್​ವುಡ್​ ಬಾದ್​ಶಾ ಕಿಚ್ಚ ಸುದೀಪ್​ ಅಭಿನಯದ ‘ಪೈಲ್ವಾನ್’ ವಿಶ್ವದಾದ್ಯಂತ ಇಂದು ರಿಲೀಸ್​ ಆಗಿದ್ದು, ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಇಂದು ಬೆಳಗ್ಗೆಯಿಂದಲೇ ಥಿಯೇಟರ್​ನಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದ್ದು, ಅಭಿನಯದ ಚಕ್ರವರ್ತಿಯನ್ನು ಪೈಲ್ವಾನ್​ ಅವತಾರದಲ್ಲಿ ನೋಡಿ ಅಭಿಮಾನಿಗಳು ಖುಷ್​ ಆಗಿದ್ದಾರೆ. ಚಿತ್ರದಲ್ಲಿ ಆಕ್ಷನ್​, ಕಾಮಿಡಿ, ಸೆಂಟಿಮೆಂಟ್​, ರೊಮ್ಯಾನ್ಸ್​ ಭರ್ಜರಿಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ಇನ್ನು ಬಾಲಿವುಡ್​ ನಟ, ನಮ್ಮ ಕರ್ನಾಟಕದವರೇ ಆದ ಸುನಿಲ್​ ಶೆಟ್ಟಿ ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್​ ಸಿನಿಮಾದಲ್ಲಿ ಕಾಣಿಸಕೊಂಡಿದ್ದು, ಸುನಿಲ್​ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರು ಗುಡ್​ ಮಾರ್ಕ್ಸ್​ ಕೊಟ್ಟಿದ್ದಾರೆ. ರಿಲೀಸ್​ಗೂ ಮುನ್ನವೇ ಪೈಲ್ವಾನ್​ ಸಾಕಷ್ಟು ಸುದ್ದಿಯಾಗಿತ್ತು. ಸುದೀಪ್​ ಪೈಲ್ವಾನ್​ನಾಗಿ ಅಖಾಡದಲ್ಲಿ ಹೋರಾಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಜೊತೆಗೆ ಚಿತ್ರವು ಬಹುಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಹಾಡುಗಳಿಗೆ, ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್​ ವ್ಯಕ್ತವಾಗಿತ್ತು. ಇದೀಗ ಅಭಿಮಾನಿಗಳ ಕಾತರಕ್ಕೆ ತೆರೆ ಬಿದ್ದಿದ್ದು, ತೆರೆ ಮೇಲೆ ಪೈಲ್ವಾನ್​ನ್ನು ನೋಡಿ ಪ್ರೇಕ್ಷಕರು ಫುಲ್​ ಫಿದಾ ಆಗಿದ್ದಾರೆ.

LEAVE A REPLY

Please enter your comment!
Please enter your name here