‘ಪೈಲ್ವಾನ್​’ಗೆ 50ರ ಸಂಭ್ರಮ – ಅಭಿಮಾನಿಗಳಿಗೆ ಬಿಗ್ ಆಫರ್!

0
215

ಅಭಿನಯ ಚಕ್ರವರ್ತಿ, ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್​’ 50 ದಿನ ಪೂರೈಸಿದ ಸಂಭ್ರಮದಲ್ಲಿದೆ. ಪೈಲ್ವಾನ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ಪಂಚ ಭಾಷೆಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇದೇ ಖುಷಿಯಲ್ಲಿ ಡೈರೆಕ್ಟರ್, ಪ್ರೊಡ್ಯೂಸರ್ ಕೃಷ್ಣ ರಾಜ್ಯದ ಜನತೆಗೆ ಬಿಗ್ ಆಫರ್ ನೀಡಿದ್ದಾರೆ!


ಪೈಲ್ವಾನ್ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸಿರುವ ಕೃಷ್ಣ, ರಾಜ್ಯಾದ್ಯಂತ ಪೈಲ್ವಾನ್ ಚಿತ್ರಕ್ಕೆ ವಾರಪೂರ್ತಿ ಟಿಕೆಟ್ ಬೆಲೆ 50% ಮಾತ್ರ ಎಂದಿದ್ದಾರೆ. ಅಂದ್ರೆ ಇನ್ನೊಂದು ವಾರ ರಾಜ್ಯದಲ್ಲಿ ಅರ್ಧ ಟಿಕೆಟ್ ದರಕ್ಕೆ ಪೈಲ್ವಾನ್ ವೀಕ್ಷಣೆ ಮಾಡಬಹುದು.
ಪೈಲ್ವಾನ್ 50ರ ಸಂಭ್ರಮವನ್ನು ಕೃಷ್ಣ ಟ್ಟಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ”ಈ ಗೆಲುವು ನಿಮ್ಮಿಂದ! ನೀವೆಲ್ಲ ನಮ್ಮ ಸಂತೋಷಕ್ಕೆ ಮೆರುಗು ತಂದಿದ್ದೀರಿ. ಈ ಸಂತೋಷವನ್ನು ನಿಮ್ಮಜೊತೆ ಹಂಚಿಕೊಳ್ಳುವ ಆಸೆ ನಮಗೆ !!! ತೆರೆ ಮೇಲೆ ಪೈಲ್ವಾನ್ ಹೋರಾಡಿದ್ದು ಅವಕಾಶವಂಚಿತರಿಗಾಗಿ. ಈಗ ಅಂಥವರಿಗೂ ಸಿನೆಮಾ ನೋಡುವ ಅವಕಾಶ’. ರಾಜ್ಯಾದ್ಯಂತ ವಾರ ಪೂರ್ತಿ ಟಿಕೆಟ್ ಬೆಲೆ 50% ಮಾತ್ರ” ಅಂತ ಟ್ವೀಟ್ ಮಾಡಿದ್ದಾರೆ.

 

 

 

LEAVE A REPLY

Please enter your comment!
Please enter your name here