Home ಸಿನಿ ಪವರ್ 'ಕುರುಕ್ಷೇತ್ರ', 'ಪೈಲ್ವಾನ್​' ಒಟ್ಟಿಗೇ ರಿಲೀಸ್ ಆದ್ರೆ ಯಾರಿಗೆ ಲಾಭ? ಯಾರಿಗೆ ನಷ್ಟ?

‘ಕುರುಕ್ಷೇತ್ರ’, ‘ಪೈಲ್ವಾನ್​’ ಒಟ್ಟಿಗೇ ರಿಲೀಸ್ ಆದ್ರೆ ಯಾರಿಗೆ ಲಾಭ? ಯಾರಿಗೆ ನಷ್ಟ?

ಕನ್ನಡಿಗರ ಮನೆಮಗ ‘ಮಾಣಿಕ್ಯ’, ಸ್ಯಾಂಡಲ್​​ವುಡ್​ನ ಪ್ರೀತಿಯ ‘ರನ್ನ’ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅಭಿಮಾನಿಗಳ ಮನದಲ್ಲಿ ಮನೆ ಮಾಡಿರೋ ‘ಯಜಮಾನ’, ಚಂದನವನದ ‘ಐರಾವತ’ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಇಬ್ಬರು ಕನ್ನಡದ ಹೆಮ್ಮೆಯ ನಟರು ಆತ್ಮೀಯ ಗೆಳೆಯರು.ಇಬ್ಬರ ನಡುವೆ ಅದೇನೋ ಸಣ್ಣ ಭಿನ್ನಾಭಿಪ್ರಾಯ ಇದೆಯಷ್ಟೇ.. ಆದರೆ ಗೆಳೆತನ ಎಂದೂ ಚಿರವಲ್ಲವೇ..?
ಅದೇನೇ ಇರಲಿ ಕಿಚ್ಚ ಮತ್ತು ದಚ್ಚು ಕನ್ನಡದ ಆಸ್ತಿ. ಇಬ್ಬರ ಚಿತ್ರಗಳೂ ಕನ್ನಡ ಚಿತ್ರೋದ್ಯಮಕ್ಕೆ ಹೆಚ್ಚು ಲಾಭ ತಂದು ಕೊಡಬಲ್ಲ ಸಿನಿಮಾಗಳೇ. ಬಾಕ್ಸ್ಆಫೀಸಲ್ಲಿ ಇಬ್ಬರ ಸಿನಿಮಾಗಳೂ ಸಖತ್ ಸೌಂಡ್ ಮಾಡುತ್ತವೆ. ಸುದೀಪ್, ದರ್ಶನ್ ಸಿನಿಮಾಗಳು ಅಂದ್ರೆ ಅಭಿಮಾನಿಗಳಿಗೆ ಹಬ್ಬ.
ಬಾದ್ ಷಾ ಸುದೀಪ್ ಅಭಿನಯದ ‘ಪೈಲ್ವಾನ್’, ದರ್ಶನ್ ಅಭಿನಯದ ‘ಕುರುಕ್ಷೇತ್ರ’ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವರ್ಷದ ಅತಿ ದೊಡ್ಡ ಸಿನಿಮಾಗಳಲ್ಲಿ ಈ ಎರಡು ಚಿತ್ರಗಳು ಮುಖ್ಯವಾದವು. ಪೈಲ್ವಾನ್ ಆಗಿ ಸುದೀಪ್ ಅಖಾಡದಲ್ಲಿದ್ದಾರೆ… ಕುರುಕ್ಷೇತ್ರದ ದುರ್ಯೋಧನನಾಗಿ ದರ್ಶನ್ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಈ ಎರಡೂ ಸಿನಿಮಗಳೂ ಕೋಟಿ ಕೋಟಿ ಬಾಚಿಕೊಳ್ಳುವಲ್ಲಿ ಅನುಮಾನವೇ ಇಲ್ಲ.
ಈ ಎರಡು ಸಿನಿಮಾಗಳು ಮನರಂಜನೆ ವಿಷಯದಲ್ಲಾಗಿರಬಹುದು, ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲೇ ಆಗಿರಬಹುದು. ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಅದರಲ್ಲಿ ಕಿಂಚಿತ್ತು ಸಂಶಯ ಇಲ್ಲ. ಬಟ್, ಎರಡೂ ಸಿನಿಮಾ ಪೈಪೋಟಿಗೆ ಇಳಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅನ್ನೋದ್ರಲ್ಲಿ ನೋ ಡೌಟು..
ಹೌದು, ದರ್ಶನ್ ಅವರ ಕುರುಕ್ಷೇತ್ರ, ಸುದೀಪ್ ಅವರ ಪೈಲ್ವಾನ್ ಒಟ್ಟೊಟ್ಟಿಗೆ ರಿಲೀಸ್ ಆಗುತ್ತವೆ ಅನ್ನೋ ಮಾತು ಗಾಂಧಿನಗರದಲ್ಲಿ ಸಖತ್ ಸದ್ದು ಮಾಡುತ್ತಿದೆ. ವರಮಾಲಕ್ಷ್ಮೀ ಹಬ್ಬದಂದೇ ಈ ಎರಡೂ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುತ್ತವೆ ಎನ್ನಲಾಗಿದೆ.
ಒಂದು ವೇಳೆ ಇದು ನಿಜವಾದರೆ ಎಲ್ಲಾ ರೀತಿಯಲ್ಲೂ ನಷ್ಟವೇ. ಮೊದಲನೆಯದಾಗಿ ಫ್ಯಾನ್ಸ್ ವಾರ್ ಹೆಚ್ಚುತ್ತೆ. ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಈ ಸಿನಿಮಾಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಬಿಡ್ತಾರೆ.ಈ ಎರಡೂ ಸಿನಿಮಾಗಳು ಬೇರೆ ಬೇರೆ ಟೈಮ್​ನಲ್ಲಿ ರಿಲೀಸ್ ಆದ್ರೆ ಒಬ್ಬರ ಫ್ಯಾನ್ಸ್ ಇನ್ನೊಬ್ಬರ ಸಿನಿಮಾವನ್ನು ನೋಡ್ತಾರೆ. ಆದ್ರೆ,ಒಂದೇ ದಿನ ರಿಲೀಸ್ ಆದ್ರೆ ಇಬ್ಬರ ಅಭಿಮಾನಿಗಳು ಜಿದ್ದಿಗೆ ಬೀಳೋ ಚಾನ್ಸೇ ಜಾಸ್ತಿ.
ಬಾಕ್ಸ್ ಆಫೀಸ್ ಕಲೆಕ್ಷನ್, ಥಿಯೇಟರ್, ಕಟೌಟ್ ಹಾಕೋದು ಎಲ್ಲಾ ವಿಚಾರದಲ್ಲೂ ಪ್ರತಿಷ್ಠೆ ಕಾಡುತ್ತೆ. ಆಗ ಎರಡೂ ಸಿನಿಮಾಗಳಿಗೂ ಪೆಟ್ಟೇ..
ಪೈಲ್ವಾನ್ 8 ಭಾಷೆಗಳಲ್ಲಿ, ಕುರುಕ್ಷೇತ್ರ 5 ಭಾಷೆಗಳಲ್ಲಿ ತೆರೆಗೆ ಬರಲು ರೆಡಿಯಾಗ್ತಾ ಇವೆ. ಹೀಗಾಗಿ ಥಿಯೇಟರ್ ಸಮಸ್ಯೆ ಎದುರಾಗುತ್ತೆ. ಒಟ್ಟೊಟ್ಟಿಗೆ ಎರಡೂ ಸಿನಿಮಾಗಳು ರಿಲೀಸ್ ಆದ್ರೆ ನಿರೀಕ್ಷಿಸಿದ ಥಿಯೇಟರ್ ಗಳು ಸಿಗೋದು ಕಷ್ಟವೇ ಸರಿ, ಹೀಗೆ ಪೈಲ್ವಾನ್ ,ಕುರುಕ್ಷೇತ್ರ ಒಟ್ಟೊಟ್ಟಿಗೆ ತೆರೆಗೆ ಬಂದ್ರೆ ಎಲ್ಲಾ ರೀತಿಯಲ್ಲೂ ಲಾಭಕ್ಕಿಂತ ನಷ್ಟವೇ ಹೆಚ್ಚು.
ಒಟ್ನಲ್ಲಿ ಕುರುಕ್ಷೇತ್ರ, ಪೈಲ್ವಾನ್ ಎರಡೂ ಹೈ ಬಜೆಟ್, ಹೈ ವೋಲ್ಟೇಜ್ ಸಿನಿಮಾಗಳೇ. ಇಬ್ಬರೂ ಸ್ಟಾರ್ ನಟರೇ. ಎರಡೂ ಸಿನಿಮಾಗಳ ಮೇಲೂ ನಿರೀಕ್ಷೆ ಬೆಟ್ಟದಷ್ಟಿದೆ. ಆದ್ದರಿಂದ ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತೋ, ಯಾವ್ದು ತದನಂತರ ರಿಲೀಸ್ ಆಗುತ್ತೋ ಅನ್ನೋದು ಮುಖ್ಯವಲ್ಲ. ಆದ್ರೆ, ಒಟ್ಟಿಗೆ ಮಾತ್ರ ರಿಲೀಸ್ ಆಗಬಾರದು ಅನ್ನೋದು ಅಭಿಮಾನಿಗಳ, ಚಿತ್ರರಸಿಕರ, ಸಿನಿವಿಮರ್ಶಕರ ಅಭಿಪ್ರಾಯ ಕೂಡ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments