13 ವರ್ಷಗಳ ಬಳಿಕ ಒಂದೇ ದಿನ ತೆರೆಗೆ ಬರ್ತಿದ್ದಾರೆ ಕಿಚ್ಚ-ದಚ್ಚು!

0
155

ಚಂದನವನದ ಪ್ರೀತಿ ‘ಚಂದು’, ಕನ್ನಡಿಗರ ಪ್ರೀತಿಯ ಮನೆಮಗ ‘ಮಾಣಿಕ್ಯ’ ಸುದೀಪ್. ಸ್ಯಾಂಡಲ್​ವುಡ್​ನ ‘ಚಕ್ರವರ್ತಿ’, ಕರುನಾಡ ಹೆಮ್ಮೆಯ ‘ಯಜಮಾನ’ ದರ್ಶನ್. ಈ ಇಬ್ಬರು ಸ್ಟಾರ್ ನಟರು ಕನ್ನಡ ಸಿನಿರಂಗದ ಕಣ್ಮಣಿಗಳು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡ್ತಿರೋ ಈ ಇಬ್ಬರು ಸ್ಟಾರ್​ ನಟರ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರ್ತಾ ಇವೆ.
ಅಭಿನಯ ಚಕ್ರವರ್ತಿ. ಬಾದ್​ ಷಾ ಕಿಚ್ಚ ಸುದೀಪ್ ಹಾಗೂ ಮಿಸ್ಟರ್ ‘ಐರಾವತ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ಒಟ್ಟೊಟ್ಟಿಗೆ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸಲಿದ್ದಾರೆ. ಬರುವ ಆಗಸ್ಟ್ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಿಗೆ ಸುಗ್ಗಿ ಸಂಭ್ರಮ..!
ಹೌದು, ‘ಪೈಲ್ವಾನ್​’ ಆಗಿ ಕಿಚ್ಚ ಸುದೀಪ್ ಹಾಗೂ ‘ಕುರುಕ್ಷೇತ್ರ’ದ ದುರ್ಯೋಧನನಾಗಿ ದರ್ಶನ್ ಒಟ್ಟಿಗೆ ತೆರೆಗೆ ಬರುತ್ತಿದ್ದಾರೆ. 13 ರ್ಷಗಳ ಬಳಿಕ ಸುದೀಪ್ ಮತ್ತು ದರ್ಶನ್ ಸಿನಿಮಾಗಳು ಒಟ್ಟಿಗೇ ರಿಲೀಸ್ ಆಗುತ್ತಿವೆ. 2006ರ ಫೆಬ್ರವರಿ 17ರಂದು ಸುದೀಪ್ ಅಭಿನಯದ ‘ಮೈ ಆಟೋಗ್ರಾಫ್​’ ಮತ್ತು ದರ್ಶನ್ ಅಭಿನಯದ ‘ಸುಂಟರಗಾಳಿ’ ರಿಲೀಸ್ ಆಗಿದ್ದವು. ಇದೀಗ ಮತ್ತೆ ಒಂದೇ ದಿನ ಇಬ್ಬರ ಸಿನಿಮಾಗಳು ರಿಲೀಸ್ ಆಗುತ್ತಿದೆ.
ಈಗಾಗಲೇ ‘ಕುರುಕ್ಷೇತ್ರ’ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್ 9ಕ್ಕೆ ಕುರುಕ್ಷೇತ್ರ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇದೀಗ ಕೇಳಿ ಬರ್ತಾ ಇರೋ ಸುದ್ದಿ ಪ್ರಕಾರ ಆಗಸ್ಟ್ 8ಕ್ಕೆ ‘ಪೈಲ್ವಾನ್’ ಪಂಚಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ವರಮಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ ಅಂತ ಡೈರೆಕ್ಟರ್ ಕೃಷ್ಣ ಹೇಳಿದ್ದರು. ಅದೇ ಲೆಕ್ಕಾಚಾರದಲ್ಲಿ ನೋಡಿದ್ರೂ ‘ಕುರುಕ್ಷೇತ್ರ’ದಂದೇ ‘ಪೈಲ್ವಾನ್’ ಅಖಾಡಕ್ಕೆ ಇಳಿಯೋದು ಪಕ್ಕಾ.
ಒಂದೇ ದಿನ ಕುರುಕ್ಷೇತ್ರ, ಪೈಲ್ವಾನ್ ರಿಲೀಸ್ ಆದ್ರೆ ಸ್ಟಾರ್ ವಾರ್ ಗೆ ವೇದಿಕೆ ಆಗುತ್ತೆ, ನಾನಾ-ನೀನಾ ಅನ್ನೋ ಫೈಟ್ ಶುರುವಾಗುತ್ತೆ ಅನ್ನೋ ಮಾತುಗಳು ಹರಿದಾಡುತ್ತಿವೆ. ಆದರೆ, ಸ್ಟಾರ್​ವಾರ್​​​​ಗಿಂತಾ ಮಿಗಿಲಾಗಿ ಥಿಯೇಟರ್ ಸಮಸ್ಯೆ ಕಾಡುತ್ತದೆ.
ದರ್ಶನ್ ಮತ್ತು ಸುದೀಪ್ ಇಬ್ಬರೂ ಸ್ಟಾರ್ ನಟರುಗಳಾಗಿರುವುದರಿಂದ ಥಿಯೇಟರ್​ಗಳ ಬೇಡಿಕೆ ಕೂಡ ಹೆಚ್ಚಿರುತ್ತದೆ. ಹೀಗಾಗಿ ಥಿಯೇಟರ್​ ಹಂಚಿಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸುವುದರಲ್ಲಿ ಡೌಟಿಲ್ಲ.
ಈ ಎರಡೂ ಸಿನಿಮಾಗಳು ಬೇರೆ ಬೇರೆ ಟೈಮ್​ನಲ್ಲಿ ರಿಲೀಸ್ ಆದ್ರೆ ಒಬ್ಬರ ಫ್ಯಾನ್ಸ್ ಇನ್ನೊಬ್ಬರ ಸಿನಿಮಾವನ್ನು ನೋಡ್ತಾರೆ. ಎರಡು ಸಿನಿಮಾಗಳು ಸ್ಯಾಂಡಲ್​ ವುಡ್​ ನ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸುವ ಸಿನಿಮಾಗಳಾಗಿದ್ದು, ಕನಿಷ್ಠ ಒಂದು ವಾರದ ಅಂತರದಲ್ಲಿ ರಿಲೀಸ್ ಆದ್ರೆ ಚೆನ್ನಾಗಿರುತ್ತೆ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಇದು ಅಗತ್ಯ ಅನ್ನೋದು ಅಭಿಮಾನಿಗಳ ಆಶಯ.

 

LEAVE A REPLY

Please enter your comment!
Please enter your name here