Monday, May 23, 2022
Powertv Logo
Homeಸಿನಿಮಾ'ಪೈಲ್ವಾನ್​​​​' ನಾಲ್ಕೇ ನಾಲ್ಕು ದಿನಗಳಲ್ಲಿ ಗಳಿಸಿದ್ದೆಷ್ಟು?

‘ಪೈಲ್ವಾನ್​​​​’ ನಾಲ್ಕೇ ನಾಲ್ಕು ದಿನಗಳಲ್ಲಿ ಗಳಿಸಿದ್ದೆಷ್ಟು?

‘ಪೈಲ್ವಾನ್​’ ಕಿಚ್ಚನ ‘ಪವರ್​’ಫುಲ್​ ಪಂಚ್​ಗೆ ಇಡೀ ಭಾರತೀಯ ಚಿತ್ರರಂಗ ಶಹಬ್ಬಾಶ್ ಎನ್ನುತ್ತಿದೆ. ಬಾಕ್ಸ್​ ಆಫೀಸ್​ನಲ್ಲಂತೂ ‘ಪೈಲ್ವಾನ್​’ನದ್ದೇ ದರ್ಬಾರು. ಎಲ್ಲಿ ನೋಡಿದ್ರೂ ‘ಪೈಲ್ವಾನ್​’ ಕಟೌಟ್​.. ಎಲ್ಲಿ ಕೇಳಿದ್ರೂ ಬರೀ ‘ಪೈಲ್ವಾನ್​’ನದ್ದೇ ಮಾತು..! ‘ಪೈಲ್ವಾನ್​’ ಅಖಾಡಕ್ಕೆ ಇಳಿದು ಕೇವಲ ನಾಲ್ಕೇ ನಾಲ್ಕು ದಿನ ಆಗಿದೆಯಷ್ಟೇ…ಇಷ್ಟರಲ್ಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು…ದಾಖಲೆ ಬರೆಯುವ ಎಲ್ಲಾ ಲಕ್ಷಣಗಳಿವೆ…

‘ಪೈಲ್ವಾನ್​’… ಇಡೀ ವಿಶ್ವದಲ್ಲಿ ಸದ್ದು ಮಾಡ್ತಿರೋ ಸ್ಯಾಂಡಲ್​ವುಡ್ ಸಿನಿಮಾ..! ‘ಪೈಲ್ವಾನ್​’ ಕಿಚ್ಚನ ಪವರ್​ಗೆ ಇಡೀ ಭಾರತೀಯ ಚಿತ್ರರಂಗವೇ ತಲೆಬಾಗಿದೆ..! ‘ಪೈಲ್ವಾನ್​’ ಪಂಚ್​ ನಿರೀಕ್ಷೆಗೂ ಮೀರಿದ್ದು, ಸುದೀಪ್ & ಟೀಮ್​ನ ಶ್ರಮಕ್ಕೆ ಸಿನಿಪ್ರಿಯರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ…ಒಮ್ಮೆ ಸಿನಿಮಾ ನೋಡಿದವ್ರು… ಕನಿಷ್ಠ ಇಬ್ಬರನ್ನಾದ್ರೂ ಥಿಯೇಟರ್​ಗೆ ಕರ್ಕೊಂಡು ಹೋಗಿ ‘ಪೈಲ್ವಾನ್​’ ದರ್ಶನ ಮಾಡ್ತಿಸ್ತಿದ್ದಾರೆ ಅಂದ್ರೆ ಲೆಕ್ಕಹಾಕಿ ಕಿಚ್ಚನ ‘ಪೈಲ್ವಾನ್’ ಅವತಾರ ಹೇಗಿರ್ಬೇಡ ಅಂತ..!

‘ಪೈಲ್ವಾನ್​’ ಕೇವಲ ಕುಸ್ತಿ ಪಟುವಲ್ಲ…ಕುಸ್ತಿ ಅಖಾಡದಿಂದ ಬಾಕ್ಸಿಂಗ್ ರಿಂಗ್​ ಗೆ ಜಿಗಿದು ಸಕ್ಸಸ್​ ಕಂಡ ಛಲದಂಕ ಮಲ್ಲ ಮಾತ್ರವಲ್ಲ..! ಪೈಲ್ವಾನ್​ ಒಬ್ಬ ಮಾನವೀಯತೆ ಸಾಕಾರಮೂರ್ತಿ, ಪೈಲ್ವಾನ್​ ಒಬ್ಬ ಒಳ್ಳೆಯ ಮಗ, ಶಿಷ್ಯ, ಪ್ರೇಮಿ.. ಒಳ್ಳೆಯ ತಂದೆ. ಸಂಬಂಧಗಳನ್ನು ಆರಾಧಿಸುವ, ಗೌರವಿಸುವ ವ್ಯಕ್ತಿ. ಸಿನಿಮಾದಲ್ಲಿ ಮನರಂಜನೆ ಇದೆ.. ಕುತೂಹಲವೂ ಇದೆ.. ಸಂಬಂಧಗಳ ಮಹತ್ವವೂ ಇದೆ.. ಒಂದೇ ಮಾತಲ್ಲಿ ಹೇಳ್ಬೇಕಂದ್ರೆ ಅಖಾಡದಲ್ಲಿ ಸೆಣೆಸುವ ‘ಪೈಲ್ವಾನ್​’ ಒಂದೊಳ್ಳೆ ಉದ್ದೇಶಕ್ಕಾಗಿ ಹೋರಾಡುತ್ತಾನೆ.. ಗೆಲ್ಲುತ್ತಾನೆ..!

 ಅಖಾಡದಲ್ಲಿ ಗೆದ್ದ ‘ಪೈಲ್ವಾನ್​’ ಜನಮನ ಗೆಲ್ಲುವಲ್ಲೂ ಯಶಸ್ವಿಯಾಗಿದ್ದಾನೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲೂ ‘ಪೈಲ್ವಾನ್​’ ಕಿಚ್ಚ ಸೈ ಎನಿಸಿಕೊಂಡಿದ್ದಾನೆ. ಅಭಿನಯ ಚಕ್ರವರ್ತಿ. ಬಾದ್​ ಷಾ ಕಿಚ್ಚ ಸುದೀಪ್​​ 4 ಶೇಡ್​ಗಳಲ್ಲೂ ಸಿನಿರಸಿಕರಿಗೆ ಇಷ್ಟವಾಗ್ತಾರೆ. ಕುಸ್ತಿ ಪಟುವಾಗಿ, ಪ್ರೇಮಿಯಾಗಿ, ತಂದೆಯಾಗಿ, ಬಾಕ್ಸರ್ ಆಗಿ ಸುದೀಪ್ ನಟನೆ ಅದ್ಭುತವಾಗಿದೆ. ,ಕಾಮಿಡಿಯನ್ ಅಪ್ಪಣ್ಣ ಭರವಸೆ ಮೂಡಿಸಿದ್ದಾರೆ. ಕಿಚ್ಚನ ಗುರುವಾಗಿ ಬಣ್ಣ ಹಚ್ಚಿದ ಸುನೀಲ್ ಶೆಟ್ಟಿ ‘ಪೈಲ್ವಾನ್​’ ಖದರ್ ಹೆಚ್ಚಿಸಿದ್ದಾರೆ.

 ಇನ್ನು ನಾಯಕಿ ಆಕಾಂಕ್ಷ ಸಿಂಗ್ ಹೃದಯ ಕದ್ದಿದ್ದಾರೆ.. ರಾಜನಾಗಿ, ಕುಸ್ತಿಪಟುವಾಗಿ ಸುಶಾಂತ್ ಸಿಂಗ್​​, ಬಾಕ್ಸಿಂಗ್ ಕೋಚ್ ಆಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಾಂಪಿಯನ್ ಬಾಕ್ಸರ್​ ಆಗಿ, ವಿಲನ್​ ರೋಲ್​ನಲ್ಲಿ ಕಬೀರ್ ದುಹಾನ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅರ್ಜುನ್​ ಜನ್ಯಾ ಸಂಗೀತ ಬಲ ಕೂಡ ‘ಪೈಲ್ವಾನ್​’ಗಿದೆ. ಒಟ್ನಲ್ಲಿ ಡೈರೆಕ್ಟರ್ ‘ಹೆಬ್ಬುಲಿ’ ಕೃಷ್ಣ & ಸುದೀಪ್​ ಟೀಮ್​ನ ಪ್ರತಿಯೊಬ್ಬರ ಶ್ರಮದಿಂದ ಇಂದು ಪೈಲ್ವಾನ್ ವಿಶ್ವದಾದ್ಯಂತ ಸೌಂಡು ಮಾಡ್ತಿದ್ದಾನೆ..!

ಹೇಳಿ ಕೇಳಿ ಸುದೀಪ್​ ಅವರಿಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆಯಲ್ಲೂ ದೊಡ್ಡ ಅಭಿಮಾನಿ ಬಳಗವಿದ್ದು, ಆ ಬಳಗವೀಗ ಮತ್ತಷ್ಟು ದೊಡ್ಡದಾಗಿದೆ. ಸುದೀಪ್ ಅಭಿನಯಕ್ಕೆ ಭಾರತೀಯ ಚಿತ್ರರಂಗ ಫಿದಾ ಆಗಿದೆ. ಫ್ಯಾನ್ಸ್ ಮಾತ್ರವಲ್ಲದೆ ಸಿನಿ ವಿಮರ್ಶಕರಿಗೂ ಪೈಲ್ವಾನ್ ಇಷ್ಟವಾಗಿದ್ದಾನೆ.

ಕಳೆದ ಗುರುವಾರ ರಿಲೀಸ್ ಆದ ‘ಪೈಲ್ವಾನ್​’ ಅಬ್ಬರಕ್ಕೆ ಬಾಕ್ಸ್​ ಆಫೀಸ್​ ದಾಖಲೆಗಳೆಲ್ಲಾ ಪುಡಿ ಪುಡಿ ಆಗುವುದರಲ್ಲಿ ಡೌಟಿಲ್ಲ. ಮೊದಲ ದಿನವೇ 15 ಕೋಟಿ ಬಾಚಿಕೊಂಡಿದ್ದ ಪೈಲ್ವಾನ್ ದಾಖಲೆ ಬರೆಯುತ್ತ ಸಾಗುತ್ತಿದ್ದಾನೆ.

‘ಪೈಲ್ವಾನ್​’ ಅಖಾಡಕ್ಕೆ ಇಳಿದು ನಾಲ್ಕು ದಿನ ಕಳೆದಾಗಿದೆ. ಸೆಟ್ಟೇರಿದಲ್ಲಿಂದೂ ಸುದ್ದಿಯಲ್ಲಿದ್ದ ‘ಪೈಲ್ವಾನ್​’ ಅಖಾಡಕ್ಕೆ ಇಳಿದ ಮೇಲೆ ಮತ್ತಷ್ಟು ಸದ್ದು ಮಾಡುತ್ತಿದ್ದು, ಬಾಕ್ಸ್​ ಆಫೀಸಲ್ಲೀಗ ನಂದೇ ಹವಾ ಅಂತಿರುವ ‘ಪೈಲ್ವಾನ್​’ , ನಾಲ್ಕೇ ನಾಲ್ಕು ದಿನಗಳಲ್ಲಿ ಹೆಚ್ಚು ಕಮ್ಮಿ 40 ಕೋಟಿ ಗಳಿಸಿದೆ.

ಒಟ್ನಲ್ಲಿ ಸ್ಯಾಂಡಲ್​ವುಡ್​​ನ ಬ್ರಾಂಡ್​ವ್ಯಾಲ್ಯುವನ್ನು ಹೆಚ್ಚಿಸಿರುವ ‘ಪೈಲ್ವಾನ್​’ ಬಾಕ್ಸ್​ ಆಫೀಸಲ್ಲಿ ಇನ್ನಷ್ಟು ದಿನ ತನ್ನ ಆರ್ಭಟವನ್ನು ಮುಂದುವರೆಸುವುದರಲ್ಲಿ ಡೌಟಿಲ್ಲ. ಹೀಗಾಗಿ ಬಾಕ್ಸ್​ಆಫೀಸ್​ನ ಈ ಹಿಂದಿನ ಎಲ್ಲಾ ಕಲೆಕ್ಷನ್​ಗಳನ್ನೂ ಬ್ರೇಕ್ ಮಾಡುವಲ್ಲಿ ‘ಪೈಲ್ವಾನ್​’ ಗೆಲ್ಲೋದು ಪಕ್ಕಾ ಎಂಬುದು ಸಿನಿ ವಿಮರ್ಶಕರು, ಅಭಿಮಾನಿಗಳ ಭವಿಷ್ಯ. 

18 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments