Home ಸಿನಿ ಪವರ್ ವರಮಹಾಲಕ್ಷ್ಮಿ ಹಬ್ಬದಂದು ಅಖಾಡಕ್ಕೆ ಇಳೀತಿಲ್ಲ 'ಪೈಲ್ವಾನ್'..!

ವರಮಹಾಲಕ್ಷ್ಮಿ ಹಬ್ಬದಂದು ಅಖಾಡಕ್ಕೆ ಇಳೀತಿಲ್ಲ ‘ಪೈಲ್ವಾನ್’..!

ಅಭಿನಯ ಚಕ್ರವರ್ತಿ ‘ಕಿಚ್ಚ’ ಸುದೀಪ್ ಅವರನ್ನು ‘ಪೈಲ್ವಾನ್​’ ಗೆಟಪ್​ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಪೈಲ್ವಾನ್​’ ಅಖಾಡದಲ್ಲಿ ‘ಹೆಬ್ಬುಲಿ’ಯ ಘರ್ಜನೆಗೆ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡ್ತಾ ಇದೆ. ಆದರೆ, ಈ ನಡುವೆ ಚಿತ್ರತಂಡದಿಂದ ಒಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಇದು ಕಿಚ್ಚನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್..!

 ಚಂದನವನದ ‘ಮಹಾರಾಜ’ ‘ಪೈಲ್ವಾನ್’ ಅಖಾಡದಲ್ಲಿ ‘ಧಮ್​’ ತೋರಿಸಲು ರೆಡಿಯಾಗಿದ್ದು ಗೊತ್ತೇ ಇದೆ. ‘ಮಾಣಿಕ್ಯ’ನ ಹೊಸ ಅವತಾರ ನೋಡಿ ಫ್ಯಾನ್ಸ್ ಈಗಾಗಲೇ ಫಿದಾ ಆಗಿದ್ದಾರೆ. ‘ರನ್ನ’ ‘ಗೂಳಿ’ಯಂತೆ ಅಖಾಡದಲ್ಲಿ ಸೆಣಸುವುದನ್ನು ಕಣ್ತುಂಬಿಕೊಂಡು ‘ಹುಚ್ಚೆ’ದ್ದು ಸಂಭ್ರಮಿಸಿ ‘ಆಟೋಗ್ರಾಫ್’ಪಡೆಯಲು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮಂದಿ ಕೂಡ ವ್ಹೇಟ್ ಮಾಡ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಪೈಲ್ವಾನ್​ ರಿಲೀಸ್ ಆಗುತ್ತೆ ಎನ್ನಲಾಗಿತ್ತು. ಕಿಚ್ಚನ ಅಭಿಮಾನಿಗಳು ‘ಪೈಲ್ವಾನ್’ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಪೈಲ್ವಾನ್ ರಿಲೀಸ್​​ ಡೇಟ್ ಮುಂದಕ್ಕೆ ಹೋಗಿದೆ ಅನ್ನೋ ಸುದ್ದಿ ಬಂದಿದೆ..! ಇದು ಅಭಿಮಾನಿಗಳಿಗೆ ನಿಜಕ್ಕೂ ನಿರಾಸೆಯನ್ನುಂಟು ಮಾಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’, ಸುದೀಪ್ ಅಭಿನಯದ ಪೈಲ್ವಾನ್ ಒಂದೇ ದಿನ ರಿಲೀಸ್ ಆಗುತ್ತವೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಕುರುಕ್ಷೇತ್ರ ಆಗಸ್ಟ್ 9ಕ್ಕೆ ತೆರೆಕಾಣಲಿದ್ದು, ಅದೇ ದಿನ ಪೈಲ್ವಾನ್ ಅಖಾಡಕ್ಕೆ ಇಳಿದ್ರೆ ಲಾಭಕ್ಕಿಂತ ನಷ್ಟವೇ ಜಾಸ್ತಿ, ಬಾಕ್ಸ್​ ಆಫೀಸ್​ ಕ್ಲ್ಯಾಶ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಇದೀಗ ಪೈಲ್ವಾನ್ ಅಖಾಡಕ್ಕೆ ಇಳಿಯುವುದು ತಡವಾಗುತ್ತಿದೆ. ಕಿಚ್ಚನ  ಹೊಸ ಅವತಾರದ ದರ್ಶನ ಹೆಚ್ಚು ಕಮ್ಮಿ 1 ತಿಂಗಳು ಮುಂದೂಡಿಕೆಯಾಗಿದೆ. ಬಟ್, ಪೈಲ್ವಾನ್ ರಿಲೀಸ್ ಆಗ್ತಿರೋ ದಿನ ಮಾತ್ರ ತುಂಬಾ ವಿಶೇಷವಾದ ದಿನ.

ಪೈಲ್ವಾನ್ ಅಖಾಡಕ್ಕೆ ಇಳಿಯುವುದು ತಡವಾಗಿದೆ ಅನ್ನೋ ಬೇಜಾರು ಅಭಿಮಾನಿಗಳಿಗೆ ಇದ್ರೂ ‘ನಮ್ಮಣ್ಣ’ನ ಬರ್ತ್​ಡೇ ದಿನ ರಿಲೀಸ್ ಆಗ್ತಿದೆ ಅನ್ನೋದು ಖುಷಿ ವಿಚಾರವಾಗಿದೆ. ಕಿಚ್ಚನ ಹುಟ್ಟುಹಬ್ಬ ಸೆಪ್ಟೆಂಬರ್ 2ಕ್ಕೆ. ಇದೇ ಟೈಮ್​ನಲ್ಲಿ ಎರಡ್ಮೂರು ದಿನ ಮೊದಲು, ಅಂದ್ರೆ ಆಗಸ್ಟ್​ 29ಕ್ಕೆ ಪಂಚ ಭಾಷೆಗಳಲ್ಲಿ ಪೈಲ್ವಾನ್ ತೆರೆಗೆ ಬರಲಿದೆ.

ಇನ್ನೊಂದು ಸ್ಪೆಷಲ್ ಅಂದ್ರೆ ಈ ಬಾರಿ ಗಣೇಶ ಚತುರ್ಥಿಯಂದೇ ಸುದೀಪ್ ಹುಟ್ಟುಹಬ್ಬ. ಹೀಗಾಗಿ ಸಿನಿಮಾ ರಿಲೀಸ್ ಮುಂದೆ ಹೋದ್ರೂ ಅಭಿಮಾನಿಗಳಿಗೆ ಒಂಥರಾ ‘ಜಾಕ್​ಪಾಟ್​’ ಹೊಡೆದಂಗೇ ಆಗಿದೆ.

ಇನ್ನು  ಪೈಲ್ವಾನ್​  ಅನ್ನು 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದಾಗಿದ್ದು, ವಿಶ್ವದಾದ್ಯಂತ ಪೈಲ್ವಾನ್ ಅಬ್ಬರಿಸುವುದು ಕನ್ಫರ್ಮ್. ಈಗಾಗಲೇ ಪೋಸ್ಟರ್ ಹಾಗೂ ಟೀಸರ್​ನಿಂದ ಸೌಂಡು ಮಾಡ್ತಿರೋ ‘ಪೈಲ್ವಾನ್’ ಅಖಾಡಕ್ಕೆ ಇಳಿದ್ಮೇಲೆ ಧೂಳೆಬ್ಬಿಸೋದು ಕೂಡ ಗ್ಯಾರೆಂಟಿ.

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments