ಬಾಕ್ಸ್​​ ಆಫೀಸಲ್ಲಿ ‘ಪೈಲ್ವಾನ್​’ ಕಿಚ್ಚನ ಪವರ್​ ಫುಲ್ ಪಂಚ್ ..!

0
659

ಅಭಿನಯ ಚಕ್ರವರ್ತಿ, ಬಾದ್​ ಷಾ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್​’ ಸಿನಿಮಾದ ಅಬ್ಬರ ಜೋರಾಗಿದೆ. ಡೈರೆಕ್ಟರ್ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್​ ನ ಎರಡನೇ ಸಿನಿಮಾ ಪೈಲ್ವಾನ್. ‘ಹೆಬ್ಬುಲಿ’ ಖ್ಯಾತಿಯ ಈ ಜೋಡಿಯ ‘ಪೈಲ್ವಾನ್’ ಬಾಕ್ಸ್ ಆಫೀಸಲ್ಲಿ ಸೌಂಡು ಮಾಡ್ತಿದೆ. ನಿನ್ನೆ ರಿಲೀಸ್ ಆದ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್ ಆಗುವುದು ಕನ್ಫರ್ಮ್ ಆಗಿದೆ.
ಪಂಚ ಭಾಷೆಗಳಲ್ಲಿ ರಿಲೀಸ್ ಆಗಿರುವ ‘ಪೈಲ್ವಾನ್​’ ಕೆಜಿಎಫ್ ನಂತರ ಸ್ಯಾಂಡಲ್​ವುಡ್​ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸಿದ ಮತ್ತೊಂದು ಸೂಪರ್ ಮೂವಿ. ಸಿನಿಮಾಕ್ಕೆ ಎಲ್ಲಾ ಕಡೆಯಿಂದಲೂ ಪಾಸಿಟೀವ್ ರೆಸ್ಪಾನ್ಸ್ ಬರ್ತಿದೆ. ಅಭಿಮಾನಿಗಳಿಗಂತೂ ಸಿನಿಮಾ ಹಬ್ಬ… ಕೂತಲ್ಲಿಂದ ಕದಲದಂತೆ, ಎಲ್ಲಿಯೂ ಬೋರ್ ಹೊಡೆಸದೇ ತನ್ನೊಡನೆ ಕರೆದುಕೊಂಡು ಹೋಗುತ್ತಿರುವ ‘ಪೈಲ್ವಾನ್​’ 100 ಡೇಸ್​ ಪಕ್ಕಾ ಆಗಿದೆ.
ಮೊದಲ ದಿನವಾದ ನಿನ್ನೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಪೈಲ್ವಾನ್ ಅಬ್ಬರ ಶುರುವಿಟ್ಟಿದ್ದು, ಇಂದು ಹಿಂದಿಯಲ್ಲಿ ರಿಲೀಸ್ ಆಗಿದೆ.
ಇನ್ನು ನಿನ್ನೆಯ ಬಾಕ್ಸ್ ಆಫೀಸ್​ ಕಲೆಕ್ಷನ್ ಕೂಡ ಜೋರಾಗಿದೆ. ನಾಲ್ಕು ಭಾಷೆಗಳಿಂದ ಒಟ್ಟಾರೆಯಾಗಿ ಸುಮಾರು 15 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದ್ದು, ವೀಕೆಂಡ್​ನಲ್ಲಿ ದಿನದ ಕಲೆಕ್ಷನ್ 2-3 ಪಟ್ಟಾದ್ರೂ ಹೆಚ್ಚಾಗುತ್ತೆ. ‘ಪೈಲ್ವಾನ್​’ ನ ಕಿಚ್ಚನ ಪವರ್​ ಫುಲ್ ಪಂಚ್​ಗೆ ಬಾಕ್ಸ್ ಆಫೀಸ್​ ರೆಕಾರ್ಡ್​ಗಳೆಲ್ಲಾ ಪುಡಿ ಪುಡಿ ಆಗೋದ್ರಲ್ಲಿ ಅನುಮಾವೇ ಇಲ್ಲ.

LEAVE A REPLY

Please enter your comment!
Please enter your name here