Home ಸಿನಿ ಪವರ್ ಪೈಲ್ವಾನ್​-2 ಗುಟ್ಟು ಬಿಚ್ಚಿಟ್ಟ ಕಿಚ್ಚ-ಕಿಟ್ಟಪ್ಪ..!

ಪೈಲ್ವಾನ್​-2 ಗುಟ್ಟು ಬಿಚ್ಚಿಟ್ಟ ಕಿಚ್ಚ-ಕಿಟ್ಟಪ್ಪ..!

ಪೈಲ್ವಾನ್​ ..ಪೈಲ್ವಾನ್.. ಪೈಲ್ವಾನ್…ಸದ್ಯ ಸಿನಿ ಲೋಕದಲ್ಲಿ ಸದ್ದು ಮಾಡ್ತಿರೋ ಹೆಸರಿದು..! ಸೆಟ್ಟೇರಿದ್ದಲ್ಲಿಂದಲೂ ಸೌಂಡು ಮಾಡ್ತಿದ್ದ ಪೈಲ್ವಾನ್​ ಅಖಾಡಕ್ಕೆ ಇಳಿದ ಮೇಲೆ ಕೇಳ್ಬೇಕಾ..? ಅಬ್ಬರ ಸಿಕ್ಕಾಪಟ್ಟೆ ಜೋರಾಗಿಯೇ ಇದೆ..! ‘ಪೈಲ್ವಾನ್​’ ಕಿಚ್ಚನ ಪವರ್ ಫುಲ್ ಪಂಚ್​ಗೆ ಬಾಕ್ಸ್ ಆಫೀಸ್​ ದಾಖಲೆಗಳಲ್ಲಾ ಪುಡಿ ಪುಡಿ ಆಗ್ತಿವೆ.

‘ಹೆಬ್ಬುಲಿ’ ಕೃಷ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್​ನ ಮೆಗಾ ಮೂವಿ ಪೈಲ್ವಾನ್ ವಿಶ್ವದಾದ್ಯಂತ ಧೂಳೆಬ್ಬಿಸಿದೆ. ಸ್ಯಾಂಡಲ್​ವುಡ್ ಜೊತೆ ಜೊತೆಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮಾಲಿವುಡ್​ನಲ್ಲೂ ಪೈಲ್ವಾನ್​ನದ್ದೇ ಕಾರುಬಾರು..! ಬಾದ್​ ಷಾ ಸುದೀಪ್​ ಪೈಲ್ವಾನ್​ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ… ಚಿತ್ರ ವಿಮರ್ಶಕರು ಶಹಬ್ಬಾಷ್ ಅಂತಿದ್ದಾರೆ.

 ಪೈರಸಿ ಭೂತದ ಕಾಟದ ನಡುವೆಯೂ  ಅಖಾಡದಲ್ಲಿ ಗೆದ್ದ ‘ಪೈಲ್ವಾನ್​’ ಜನಮನ ಗೆಲ್ಲುವಲ್ಲೂ ಯಶಸ್ವಿಯಾಗಿದ್ದಾನೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲೂ ‘ಪೈಲ್ವಾನ್​’ ಕಿಚ್ಚ ಸೈ ಎನಿಸಿಕೊಂಡಿದ್ದಾನೆ. ಅಭಿನಯ ಚಕ್ರವರ್ತಿ. ಬಾದ್​ ಷಾ ಕಿಚ್ಚ ಸುದೀಪ್​​ 4 ಶೇಡ್​ಗಳಲ್ಲೂ ಸಿನಿರಸಿಕರಿಗೆ ಇಷ್ಟವಾಗ್ತಾರೆ. ಕುಸ್ತಿ ಪಟುವಾಗಿ, ಪ್ರೇಮಿಯಾಗಿ, ತಂದೆಯಾಗಿ, ಬಾಕ್ಸರ್ ಆಗಿ ಸುದೀಪ್ ನಟನೆ ಅದ್ಭುತವಾಗಿದೆ. ,ಕಾಮಿಡಿಯನ್ ಅಪ್ಪಣ್ಣ ಭರವಸೆ ಮೂಡಿಸಿದ್ದಾರೆ. ಕಿಚ್ಚನ ಗುರುವಾಗಿ ಬಣ್ಣ ಹಚ್ಚಿದ ಸುನೀಲ್ ಶೆಟ್ಟಿ ‘ಪೈಲ್ವಾನ್​’ ಖದರ್ ಹೆಚ್ಚಿಸಿದ್ದಾರೆ.

ಇನ್ನು ನಾಯಕಿ ಆಕಾಂಕ್ಷ ಸಿಂಗ್ ಹೃದಯ ಕದ್ದಿದ್ದಾರೆ.. ರಾಜನಾಗಿ, ಕುಸ್ತಿಪಟುವಾಗಿ ಸುಶಾಂತ್ ಸಿಂಗ್​​, ಬಾಕ್ಸಿಂಗ್ ಕೋಚ್ ಆಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಾಂಪಿಯನ್ ಬಾಕ್ಸರ್​ ಆಗಿ, ವಿಲನ್​ ರೋಲ್​ನಲ್ಲಿ ಕಬೀರ್ ದುಹಾನ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅರ್ಜುನ್​ ಜನ್ಯಾ ಸಂಗೀತ ಬಲ ಕೂಡ ಪೈಲ್ವಾನ್ ಗೆಲುವವಿಗೆ ಸಾಥ್ ನೀಡಿದೆ. ಹೀಗಾಗಿ ಎಲ್ಲೆಲ್ಲೂ ಪೈಲ್ವಾನ್​ ನದ್ದೇ ಸದ್ದು..

 ಈ ನಡುವೆ ಪೈಲ್ವಾನ್​-2 ಸೆಟ್ಟೇರುವ ಸೂಚನೆ ಬಂದಿದೆ..! ಈ ಗುಟ್ಟನ್ನು ರಟ್ಟು ಮಾಡಿರೋದು ಬೇರಾರು ಅಲ್ಲ.. ಸ್ವತಃ ಡೈರೆಕ್ಟರ್ ಕೃಷ್ಣ ಮತ್ತು ‘ಪೈಲ್ವಾನ್​’ ಸುದೀಪ್. ಪೈಲ್ವಾನ್​ ಸಕ್ಸಸ್​ ಖುಷಿಯಲ್ಲಿರೋ ಕಿಚ್ಚ-ಕಿಟ್ಟಪ್ಪ ಪೈಲ್ವಾನ್​ 2 ನಿರ್ಮಾಣ ಮಾಡೋ ಪ್ಲಾನ್ ಮಾಡಿದ್ದಾರೆ. ಟ್ವಿಟರ್​ನಲ್ಲಿ ಸ್ವತಃ ಈ ಬಗ್ಗೆ ನ್ಯೂಸ್​ ಕೊಟ್ಟಿದ್ದಾರೆ.

ಹೌದು, ಪೈಲ್ವಾನ್​​ -2 ಸೆಟ್ಟೇರಲಿದೆ. ಕೃಷ್ಣ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದು.. ಸುದೀಪ್ ಕೂಡ ಸಾಥ್ ನೀಡಿದ್ದಾರೆ. ಟ್ವೀಟ್ ಮೂಲಕ ಕಿಟ್ಟಪ್ಪ ಬಿಚ್ಚಿಟ್ಟ ಪೈಲ್ವಾನ್ 2 ಸುದ್ದಿಗೆ ಕಿಚ್ಚ ಸಾಥ್ ನೀಡಿದ್ದಾರೆ. ಈ ಪೈಲ್ವಾನ್ ಸಿನಿಮಾಕ್ಕಾಗಿಯೇ ಪ್ರತಿದಿನ ಬೆಳಗ್ಗೆ 4.30ಕ್ಕೆ ಏಳೋದು. ಗಂಟೆಗಟ್ಟಲೆ ವರ್ಕೌಟ್​ ಮಾಡೋದು. ರಾತ್ರಿ 8.30ಕ್ಕೆ ನಿದ್ರೆ ಮಾಡೋದು. ಇವೆಲ್ಲದ್ರ ನಡುವೆ ಮತ್ತೊಮ್ಮೆ ಬಾಕ್ಸರ್​ ಅಥವಾ ಕುಸ್ತಿ ಪಟುವಾಗಿ ಕಾಣಿಸಿಕೊಳ್ಳೋದಾ? ಏನೇ ಆಗಲಿ, ನನ್ನ ಗೆಳೆಯ ಕೃಷ್ಣ ಸೀಕ್ವೆಲ್ ಸಿನಿಮಾ ಮಾಡ್ತೀನಿ ಅಂದ್ರೆ ಯಾವಾಗ್ಲೂ ಜೊತೆಗಿರ್ತೀನಿ ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

 ಇದರೊಂದಿಗೆ ಸುದೀಪ್ ಪೈಲ್ವಾನ್​ 2ಗೆ ರೆಡಿ ಆಗ್ತಿರುವ ಸುಳಿವೂ ಸಿಕ್ಕಂತಾಗಿದೆ. ಡೈರೆಕ್ಟರ್ ಕೃಷ್ಣ ಮತ್ತು ಸುದೀಪ್ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಅಂತ ತಿಳಿದುಬಂದಿದ್ದು, ಪೈಲ್ವಾನ್​ 2 ಸೆಟ್ಟೇರುವುದು ಸುದೀಪ್, ಕೃಷ್ಣಾರ ಟ್ವೀಟ್​ನಿಂದ ಪಕ್ಕಾ ಆಗಿದೆ. ಹೆಬ್ಬುಲಿ ಸಿನಿಮಾ ಬಳಿಕ ಸುದೀಪ್ ಮತ್ತು ಕೃಷ್ಣ ಕಾಂಬಿನೇಷನ್​ನಲ್ಲಿ ಬಂದ ಸಿನಿಮಾ ಪೈಲ್ವಾನ್​ ಗೆದ್ದಿದ್ದು, ಮತ್ತೊಮ್ಮೆ ಈ ಸೂಪರ್ ಜೋಡಿ ಕಮಾಲ್ ಮಾಡಲು ರೆಡಿಯಾಗಿದೆ.

 ಸದ್ಯ ಸುದೀಪ್ ಕೋಟಿಗೊಬ್ಬ 3, ಬಾಲಿವುಡ್​​ನ ದಬಾಂಗ್ -3 ನಲ್ಲಿ ಬ್ಯುಸಿ ಇದ್ದಾರೆ. ಡೈರೆಕ್ಟರ್ ಕೃಷ್ಣ ಕೂಡ ಪೈಲ್ವಾನ್ ಬಳಿಕ ಮತ್ತೊಂದು ಹೊಸ ಪ್ರಾಜೆಕ್ಟ್​ನಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಸುದೀಪ್ ಮತ್ತು ಕೃಷ್ಣ ಕೈಯಲ್ಲಿರೋ ಪ್ರಾಜೆಕ್ಟ್​​​ ಕಂಪ್ಲೀಟ್ ಆದ್ಮೇಲೆ ಪೈಲ್ವಾನ್​ 2 ಸೆಟ್ಟೇರಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಪೈಲ್ವಾನ್ -2 ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments