ನಾಳೆ ಪಂಚಭಾಷೆಗಳಲ್ಲಿ ‘ಪೈಲ್ವಾನ್’ ನಿಜರೂಪ ದರ್ಶನ..!

0
200

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್’. ಕನ್ನಡ ಚಿತ್ರರಂಗದ ಮತ್ತೊಂದು ಹೈವೋಲ್ಟೇಜ್ ಆ್ಯಕ್ಷನ್ ಎಂಟ್ರಟ್ರೈನರ್. ಸುದೀಪ್​, ಕುಸ್ತಿ ಪೈಲ್ವಾನ್​ ಮತ್ತು ಬಾಕ್ಸರ್ ಅವತಾರದಲ್ಲಿ ಬಣ್ಣ ಹಚ್ಚಿರೋ ಚಿತ್ರ.
ಹಾಲಿವುಡ್​​, ಬಾಲಿವುಡ್​ ತಂತ್ರಜ್ಞರು, ಕಲಾವಿದರ ಸಮಾಗಮದ ಸಿನಿಮಾ. ದೊಡ್ಡ ಕ್ಯಾನ್ವಾಸ್​​ನಲ್ಲಿ ನಿರ್ಮಾಣವಾಗ್ತಿರೋ ಸೌತ್ ಸಿನಿದುನಿಯಾದ ಬಿಗ್ ಸಿನಿಮಾ ಇದಾಗಿದೆ. ಈಗಾಗಲೇ ಪೈಲ್ವಾನ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಸೂಪರ್ ಹಿಟ್ ಹೆಬ್ಬುಲಿ ಕಾಂಬಿನೇಷನ್​ನಲ್ಲಿ ಬರ್ತಿರೋ ತಾಜಾ ಸಿನಿಮಾ ಪೈಲ್ವಾನ್. ಎಸ್​​. ಕೃಷ್ಣ ನಿರ್ಮಿಸಿ, ನಿರ್ದೇಶನ ಮಾಡ್ತಿರೋ ಈ ಪವರ್​ಫುಲ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೈಲ್ವಾನ್​ ಆಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ.
ಮೇಕಿಂಗ್ ಹಂತದಲ್ಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಪೈಲ್ವಾನ್ ಟೀಮ್​, ಸಂಕ್ರಾಂತಿ ಸಂಭ್ರಮದಲ್ಲಿ ಟೀಸರ್ ರಿವೀಲ್ ಮಾಡಿ ಪ್ರಮೋಷನ್​ಗೆ ಕಿಕ್​ ಸ್ಟಾರ್ಟ್ ಕೊಟ್ಟಿತ್ತು. ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಈಗ ಕೇವಲ ಟೀಸರ್ ಮೂಲಕವೇ ರೋಮಾಂಚನ ಹುಟ್ಟಿಸಿದೆ.ಇದರಿಂದ ಕನ್ನಡದ ಮತ್ತೊಂದು ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ.
ಪೈಲ್ವಾನ್ ಟೀಸರ್ ಆದ ಮೇಲೆ ನಿರ್ದೇಶಕ ಕಾಮ್ ನಿರ್ಮಾಪಕ ಕೃಷ್ಣ ಅಭಿಮಾನಿಗಳಿಗೆ ಒಂದೊಂದೇ ಸ್ವೀಟ್ ನ್ಯೂಸ್ ಕೊಡ್ತಾ ಇದ್ದಾರೆ . ಕಿಚ್ಚನ ನಾನಾ ಬಗೆಯ ಪೋಸ್ಟರ್​ಗಳನ್ನು ಈ ಹಿಂದೆ ರಿಲೀಸ್ ಮಾಡಿದ್ದಾರೆ.
ಪೈಲ್ವಾನ್ ಅಖಾಡದಲ್ಲಿ ತೊಡೆ ತಟ್ಟಿರೋ ಟೀಸರ್ ಈಗಾಗಲೇ ದೊಡ್ಡ ಮಟ್ಟದದಲ್ಲಿ ಸಂಚಲನ ಸೃಷ್ಟಿ ಮಾಡಿದೆ . ಹಾಗೆಯೇ ಚಿತ್ರದಲ್ಲಿ ಕಿಚ್ಚನ ಇನ್ನೊಂದು ಶೇಡ್ ಪಾತ್ರ ಅಂದ್ರೆ ಅದು ಬಾಕ್ಸರ್ ಪಾತ್ರ . ಈಗ ಬಾಕ್ಸರ್ ಪಾತ್ರದ ಖಡಕ್ ಪೋಸ್ಟರ್ ಲುಕ್ ರಿಲೀಸ್ ಮಾಡಲಿದ್ದಾರೆ. ನಾಳೆ 4-06-19) ಸಂಜೆ 4 ಗಂಟೆಗೆ ಈ ಪೋಸ್ಟರ್ ರಿಲೀಸ್ ಆಗಲಿದೆ.
5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಆ 5 ಭಾಷೆಗಳಲ್ಲೂ ಈ ಪೋಸ್ಟರ್ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಸುದೀಪ್. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮಿಳಿನಲ್ಲಿ ವಿಜಯ್ ಸೇತುಪತಿ, ಮಲೆಯಾಳಂನಲ್ಲಿ ಮೋಹನ್ ಲಾಲ್, ಹಿಂದಿಯಲ್ಲಿ ಸುನೀಲ್ ಶೆಟ್ಟಿ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here