ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಉಡುಪಿಯ ವೈದ್ಯೆ..!

0
245

ಸಾಧಿಸಬೇಕೆಂಬ ಛಲವಿದ್ದಲ್ಲಿ ಸಾಧನೆ ಖಂಡಿತಾ ಸಾಧ್ಯ. ಏನೇ ಸಾಧನೆ ಮಾಡುವುದಿದ್ದರೂ ಮದುವೆಗೆ ಮೊದಲು ಎನ್ನುವ ಮಹಿಳೆಯರಿಗೆ ಇಲ್ಲೋರ್ವ ಮಹಿಳೆ ಅದು ಹಾಗಾಲ್ಲ, ಸಾಧನೆಗೆ ಮದುವೆ ಅಡ್ಡಿಯಲ್ಲ ಎಂದು ತಮ್ಮ ಸಾಧನೆಯ ಮೂಲಕವೇ ತಿಳಿಸಿಕೊಟ್ಟಿದ್ದಾರೆ.
ಅವರ ಹೆಸರು ಪದ್ಮಾ ಗಡಿಯಾರ್.. ಗೆ 21 ವರ್ಷ ವಯಸ್ಸಾದಾಗ ದೂರದ ಮುಂಬಯಿಯಿಂದ ಉತ್ತಮ ಸಂಬಂಧ ಬಂತು. ತಡಮಾಡೋದ್ಯಾಕೆ ಅಂತ ಅಪ್ಪ ಅಮ್ಮ ಮದುವೆ ಮಾಡಿಸಿಯೇ ಬಿಟ್ರು. ಬಾಲ್ಯದಲ್ಲಿ ಮಾಡೆಲಿಂಗ್ ಆಗ್ಬೇಕು ಅನ್ನೊ ಕನಸಿತ್ತು. ಆದರೆ, ಪೋಷಕರ ಆಸೆಗೆ ತಣ್ಣೀರು ಹಾಕೋ ಮನಸ್ಸು ಇರಲಿಲ್ಲ. ಮದುವೆನೂ ಆಯ್ತು ಎರಡು ಮಕ್ಕಳ ಅಮ್ಮನೂ ಆದ್ರು.
ಉಡುಪಿಯ ಉದ್ಯಮಿ ಅರುಣ್ ಶೆಣೈ ಮತ್ತು ಅರ್ಚನಾ ಶೆಣೈ ದಂಪತಿಗಳ ಮಗಳಾದ ಪದ್ಮಾ ಅವರು ಓದಿದ್ದು ಬೆಳೆದಿದ್ದು ಉಡುಪಿಯಲ್ಲೇ. ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ, ಮುಂಬಯಿ ಮೂಲದ ಡೆಂಟಿಸ್ಟ್ ಸನಯ್ ಗಡಿಯಾರ್ ಅವರೊಂದಿಗೆ ಮದುವೆಯಾಯ್ತು. ಮದುವೆಯ ನಂತರ ಈಕೆ ಗಂಡನೊಂದಿಗೆ ದಂತ ವೈದ್ಯೆಯಾಗಿ ಆಸ್ಟ್ರೇಲಿಯಾದ ಬ್ರಿಸ್ಟೇನ್ ನಲ್ಲಿ ತನ್ನ ವೃತ್ತಿಯನ್ನು ಆರಂಭಿಸ್ತಾರೆ.
ಆದರೆ ಇವರ ಸಾಧನೆಗೆ ಮದ್ವೆ, ಪತಿ, ಮಕ್ಕಳು ಎಂಬ ಸಂಸಾರದ ಜವಬ್ದಾರಿ ಅಡ್ಡಿಯಾಗಲಿಲ್ಲ. ಈಕೆಯ ಕನಸನ್ನು ಅರ್ಥ ಮಾಡಿಕೊಳ್ಳಬಲ್ಲ ಪತಿ ಸಿಕ್ಕಿದ್ರು. ಸಮಾ ಮತ್ತು ಶಯಾನಾಗೆ ತಾಯಿಯಾಗಿ ಸಂಸಾರ ನೌಕೆ ಸಾಗಿಸುತ್ತಿರುವಾಗ ಅಲ್ಲಿನ ದಂತ ವೈದ್ಯರುಗಳಿಗೆ ವ್ಯಕ್ತಿತ್ವ ವಿಕಸನದ ಕುರಿತು ತರಬೇತಿ ಕೂಡಾ ನೀಡ್ತಾ ಇದ್ರಂತೆ. ಈ ಸಂದರ್ಭ ಹಳೇ ಕನಸು ಮತ್ತೆ ಚಿಗುರಿದೆ. ಗಂಡನ ಪ್ರೋತ್ಸಾಹ ಪಡೆದು, ಮಾಡೆಲಿಂಗ್ ಜಗತ್ತಿಗೆ ಇಳಿದೇ ಬಿಟ್ರು.
ಎರಡು ಮಕ್ಕಳಾದ ನಂತ್ರ ಮಾಡೆಲಿಂಗ್ ಆರಂಭಿಸಿದ ಪದ್ಮಾ ಇವಾಗ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಯುನಿವರ್ಸಲ್ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ದೇಹ ದಂಡಿಸಿ, ತರಬೇತಿ ಪಡೆದ ಪದ್ಮಾ ಆಸ್ಟ್ರೇಲಿಯಾದಲ್ಲಿ ಮಿಸೆಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅಮೇರಿಕಾದ ಮೆಕ್ಸಿಕೋ ದಲ್ಲಿ ನಡೆಯೋ ಮಿಸೆಸ್ ಯುನಿವರ್ಸಲ್ ಸ್ಪರ್ಧೆಯಲ್ಲಿ 25 ದೇಶದ ಸ್ಪರ್ಧಾಳುಗಳೊಂದಿಗೆ ಪದ್ಮ ಸ್ಪರ್ಧೆ ಮಾಡಲಿದ್ದಾರೆ.
ಕಳೆದ 11 ವರ್ಷದಿಂದ ಆಸ್ಟ್ರೇಲಿಯಾದ ಬ್ರಿಸ್ಟೇನ್ ನಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸ್ತಾ ಇರೋ ಪದ್ಮ ಗಡಿಯಾರ್ ಅವರು ಹೆಣ್ಣು ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಸಾಧನೆ ಮಾಡಬಹುದು ಉತ್ತಮ ಉದಾಹರಣೆ. ಇವರ ಸಾಧನೆ ಇತರ ಹೆಣ್ಣು ಮಕ್ಕಳಿಗೂ ಸ್ಫೂರ್ತಿ.

LEAVE A REPLY

Please enter your comment!
Please enter your name here