Sunday, June 26, 2022
Powertv Logo
Homeದೇಶರಾಜ್ಯದ 5 ಮಂದಿಸೇರಿ 112 ಸಾಧಕರಿಗೆ ಪದ್ಮ ಪ್ರಶಸ್ತಿ

ರಾಜ್ಯದ 5 ಮಂದಿಸೇರಿ 112 ಸಾಧಕರಿಗೆ ಪದ್ಮ ಪ್ರಶಸ್ತಿ

ರಾಜ್ಯದ 5 ಮಂದಿ ಸೇರಿದಂತೆ 112 ಮಂದಿ ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. 4 ಮಂದಿಗೆ ಪದ್ಮವಿಭೂಷಣ, 14 ಮಂದಿಗೆ ಪದ್ಮಭೂಷಣ ಮತ್ತು 94 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಾಲುಮರದ ತಿಮ್ಮಕ್ಕ, ಪ್ರಭುದೇವಾ, ರೋಹಿಣಿ ಗೋಡಬೋಲೆ, ಶಾರದಾ ಶ್ರೀನಿವಾಸನ್, ರಾಜೀವ್​ ತಾರಾನಾಥ್​ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜ್ಯಕ್ಕೆ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ಲಭಿಸಿಲ್ಲ. ಇನ್ನುಳಿದಂತೆ ಕ್ರಿಕೆಟಿಗ ಗೌತಮ್ ಗಂಭೀರ್​, ಫುಟ್​ಬಾಲ್ ಪ್ಲೇಯರ್​ ಸುನೀಲ್ ಚೆಟ್ರಿ, ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್​ ಗಾಯಕ ಶಂಕರ್​ ಮಹದೇವನ್, ಡ್ರಮ್ಮರ್ ಶಿವಮಣಿ , ನಟ ಮನೋಜ್ ಬಾಜಪೇಯಿ ಸೇರಿದಂತೆ 94 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ತೀಜನ್ ಬಾಯಿ, ಇಸ್ಮಾಯಿಲ್ ಒಮರ್ ಗುವೆಲೆಹ್, ಅನಿಲ್ ಕುಮಾರ್ ಮಣಿಭಾಯ್ ನಾಯ್ಕ್. ಬಲ್ವಂತ್ ಮೊರೇಶ್ವರ್ ಪುರಂದರೆ ಅವರು ಪದ್ಮವಿಭೂಷಣಕ್ಕೆ ಭಾಜನರಾಗಿದ್ದಾರೆ.
ಜಾನ್ ಚೇಂಬರ್ಸ್, ಸುಖದೇವ್ ಸಿಂಗ್ ಧಿಂಡ್ಸಾ, ಪ್ರವೀಣ್ ಗೋರ್ಧನ್, ಮಹಾಶೇ ಧರಣಂ ಪಾಲ್ ಗುಲಾಟಿ, ಅಶೋಕ್ ಲಕ್ಷ್ಮಣರಾವ್ ಕುಕೇಡೆ, ಕರಿಯಾ ಮುಂಡಾ, ಬುಧಾದಿತ್ಯ ಮುಖರ್ಜಿ, ಮೋಹನ್ ಲಾಲ್, ಎಸ್ ನಂಬಿ ನಾರಾಯಣ್ , ಕುಲ್ದಿಪ್ ನಯ್ಯರ್ (ಮರಣೋತ್ತರ), ವಿ. ಕೆ. ಶುಂಗ್ಲು, ಹುಕುಮ್ದೇವ್ ನಾರಾಯಣ್ ಯಾದವ್ , ಬಚೇಂದ್ರಿ ಪಾಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಒಲಿದಿದೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments