Home ರಾಜ್ಯ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಗೋದು ಡೌಟ್..!

ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಗೋದು ಡೌಟ್..!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ತನ್ನ ಆರ್ಭಟವನ್ನು ಮುಂದುವರೆಸಿದೆ. ಮುಂದಿನ ದಿನಗಳಲ್ಲಿ ಬಹುತೇಕರಿಗೆ ಆಕ್ಸಿಜನ್ ಸಿಗೋದು ಡೌಟ್. ಕೆಲವೇ ದಿನಗಳಲ್ಲಿ 50 ಸಾವಿರ ಆಕ್ಸಿಜನ್ ಬೆಡ್ ಅಗತ್ಯದ ನಿರೀಕ್ಷೆ ಇದೆ. ಸದ್ಯ ಈಗ ಪ್ರತಿದಿನ 800 ಟನ್ ಆಕ್ಸಿಜನ್ ಅಗತ್ಯ ಇದೆ.

ಆದರೆ ರಾಜ್ಯದಲ್ಲಿನ ಪ್ಲಾಂಟ್ ಗಳಿಗೆ ಕೇವಲ 600 ಟನ್ ಉತ್ಪಾದನೆ ಸಾಮರ್ಥ ಇದೆ. ಈಗ ರಾಜ್ಯಕ್ಕೆ ಸುಮಾರು 200 ಟನ್ ಆಕ್ಸಿಜನ್ ಕೊರತೆ ಇದೆ. ಮುಂದಿನ ದಿನಗಳಲ್ಲಿ 1,300 ಕ್ಕೂ ಹೆಚ್ಚು ಟನ್ ಆಕ್ಸಿಜನ್ ಅಗತ್ಯತೆ ಇದೆ. ಈ ಬಗ್ಗೆ ಸ್ಟೇಟ್ ಡ್ರಗ್ಸ್ ಕಂಟ್ರೋಲ್ ಅಂದಾಜು ಮಾಡಿದೆ.

ಪೀಣ್ಯದ ಯುನಿವರ್ಸಲ್ ಗ್ಯಾಸ್ ಕಂಪನಿಯಿಂದ 30 ಟನ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿತ್ತು. ಕೊವಿಡ್ ಗೆ ಮೊದಲು ಕೇವಲ 7 ಟನ್ ಮಾತ್ರ ಆಸ್ಪತ್ರೆಗೆ ಸರಬರಾಜು ಮಾಡಲಾಗುತ್ತಿತ್ತು. ಕೊವಿಡ್ ಆರಂಭದಲ್ಲಿ 9 ಟನ್ ಮಾತ್ರ ಆಸ್ಪತ್ರೆಗೆ ಸರಬರಾಜು ಮಾಡಲಾಗುತ್ತಿತ್ತು. 1 ತಿಂಗಳ ಹಿಂದೆ ಕೇವಲ 14 ಟನ್ ಆಕ್ಸಿಜನ್ ನಿತ್ಯ ಪೂರೈಕೆಯಾಗುತ್ತಿತ್ತು. ಆದರೆ 15 ದಿನಗಳ ಹಿಂದೆ ನಿತ್ಯ 20 ಆಕ್ಸಿಜನ್ ಉತ್ಪಾಧನೆ ಏರಿಕೆಯಾಗಿದೆ. ಇದೀಗ ಪ್ರತಿನಿತ್ಯ ಸೋಂಕಿತರಿಗೆ 30 ಟನ್ ಆಕ್ಸಿಜನ್ ಪೂರೈಕೆ ಅವಶ್ಯಕತೆ ಇದೆ. ಹೆಚ್ಚಿನ ಆಕ್ಸಿಜನ್ ಗೆ ಡಿಮ್ಯಾಂಡ್ ಇದೆ. ಆದರೆ ಆಕ್ಸಿಜನ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಗದೇ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.  

LEAVE A REPLY

Please enter your comment!
Please enter your name here

- Advertisment -

Most Popular

ತನಗೆ ಪಾಸಿಟಿವ್ ಬಂದಿದೆ ಎಂದು ಬೆದರಿದ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ..!  

ಶಿವಮೊಗ್ಗ: ತನಗೆ ಪಾಸಿಟಿವ್ ಬಂದಿದೆ ಎಂದು ಹೆದರಿ, ಸೋಂಕಿತ ವ್ಯಕ್ತಿಯೊಬ್ಬ ಭತ್ತದ ಗದ್ದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಘಟನೆ ಇಂದು ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ ಎನ್.ಹೆಚ್. ಆಸ್ಪತ್ರೆ ಆವರಣದಲ್ಲಿಯೇ ಈ ಅಪರೂಪದ ಘಟನೆ ನಡೆದಿದ್ದು, ಬೇರೆ ಯಾವುದೋ...

‘ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧಿಕಾರ ಸ್ವೀಕಾರ’

ತಮಿಳುನಾಡು: ಅನುಭವಿಗಳಲ್ಲಿ ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೆ ಮುರುಗನ್ ಅವರಿಗೆ ಜಲಸಂಪನ್ಮೂಲ, ಕೆ.ಎನ್.ನೆಹರೂ ಅವರಿಗೆ ನಗರಾಡಳಿತ, ಐ. ಪೆರಿಯಾಸ್ವಾಮಿ ಅವರಿಗೆ ಸಹಕಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೊಸಬರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಮಾಜಿ...

ಕಲಬುರಗಿಯಲ್ಲಿ ಕೊವಿಡ್ ರೋಗಿಗಳಿಗೆ ಫ್ರೀ ಆಟೋ ಸರ್ವಿಸ್..!

ಕಲಬುರಗಿ : ಕೊವಿಡ್-19 ಸೊಂಕಿತರನ್ನ ಆಸ್ಪತ್ರೆಗೆ ಕರೆದ್ಯೋಯಲು ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿರುವ ಬೆನ್ನಲ್ಲೆ, ಕಲಬುರಗಿ ನಗರದಲ್ಲಿ ಆಟೋ ಚಾಲಕನೋರ್ವ ಮಾನವೀಯತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸೇರಿದಂತೆ ಯಾವುದೇ ತುರ್ತು ವೈದ್ಯಕೀಯ ಸಂದರ್ಭದಲ್ಲಿ ...

ಈ ವ್ಯಕ್ತಿ ಅಧಿಕಾರಿಗಳ ಮುಂದೆ ತಲೆ ಕೆಳಗೆ ಮಾಡಿ ನಿಂತಿದ್ದು ಯಾಕೆ ಗೊತ್ತಾ?

ಶಿವಮೊಗ್ಗ: ಒಂದು ಕಡೆ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.  ಮತ್ತೊಂದು ಕಡೆ ಮಾಸ್ಕ್ ಸ್ಯಾನಿಟೈಸರ್ ಬಳಕೆ ಕೂಡ ಕಡ್ಡಾಯ ಮಾಡಲಾಗಿದೆ.  ಆದರೆ ಇಲ್ಲೊಬ್ಬರು ಕೊರೋನಾನೆ ಇಲ್ಲ.  ಆರೋಗ್ಯವಂತರು ಮಾಸ್ಕ್ ಹಾಕಬೇಕೇಂದೇನೂ...

Recent Comments