ಅಹಮದಾಬಾದ್ : ನೀವು ನಾಯಿ ಸಾಕಿದ್ದೀರಾ? ನಿಮ್ ಮನೆಯ ನಾಯಿಗೆ ನಿಮ್ಮ ಅಕ್ಕ-ಪಕ್ಕದವ್ರೆಂದ್ರೆ ಆಗಲ್ವಾ? ಅದು ಕಚ್ಚುತ್ತಾ? ಹಾಗಾದ್ರೆ ನೀವು ಸ್ವಲ್ಪ ಹುಷಾರಾಗಿರಿ..ನಿಮ್ಗೆ ಜೈಲು ಶಿಕ್ಷೆ ಆದ್ರೂ ಆಗ್ಬಹುದು..!
ಅಲ್ಲಾ ಸ್ವಾಮಿ, ನಾಯಿ ಕಚ್ಚಿದ್ರೆ ಜೈಲಾ? ಅಚ್ಚರಿ ಆಗುತ್ತೆ ಅಲ್ವಾ? ಅಚ್ಚರಿ ಆದ್ರೂ ನೀವು ಇದನ್ನು ನಂಬ್ಲೇ ಬೇಕು.. ಯಾಕಂದ್ರೆ ಇದು ಅಂತೆ-ಕಂತೆ ಸ್ಟೋರಿಯಲ್ಲ.. ರಿಯಲ್ ಸ್ಟೋರಿ! ಗುಜುರಾತ್ನ ಗೋದಾಸರ್ ನಿವಾಸಿ ಭರೇಶ್ ಪಾಂಡ್ಯ ಅನ್ನೋರು ಡಾಬರ್ಮನ್ ನಾಯಿಯನ್ನು ಸಾಕಿದ್ರು. ಅದು ಪಕ್ಕದ ಮನೆಯ ಅವಿನಾಶ್ ಅನ್ನೋರಿಗೆ ಕಚ್ಚಿತ್ತು. ಈ ಬಗ್ಗೆ ಕಂಪ್ಲೇಂಟ್ ದಾಖಲಾಗಿತ್ತು. ಸದ್ಯ ಅದರ ವಿಚಾರಣೆ ಮುಗಿದಿದ್ದು, ನ್ಯಾಯಾಲಯ ನಾಯಿ ಮಾಲೀಕ ಭರೇಶ್ ಪಾಂಡ್ಯ ಅವರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಹೌದು 2014ರಲ್ಲಿ ಭರೇಶ್ ಮನೆಯ ನಾಯಿ ಅವಿನಾಶ್ ಅವರಿಗೆ ಕಚ್ಚಿದೆ. ಒಂದ್ ಕಡೆ ನಾಯಿ ಕಚ್ಚಿದ ಗಾಯವಾದ್ರೆ, ಇನ್ನೊಂದೆಡೆ ಅದ್ರಿಂದ ತಪ್ಪಿಸಿಕೊಳ್ಳಲು ಹೋದಾಗ ಕೆಳಗೆ ಬಿದ್ದು ಮೂಳೆ ಮುರಿದುಕೊಂಡಿದ್ರು. ಹೀಗಾಗಿ ಇಸಾನ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.
ಅಷ್ಟೇ ಅಲ್ಲದೆ 2012 ರಿಂದ 2014ರ ಅವಧಿಯಲ್ಲಿ ತನ್ನನ್ನೂ ಒಳಗೊಂಡಂತೆ ತನ್ನ ಮಗ ಜೈ, ಅಣ್ಣನ ಮಕ್ಕಳಾದ ತಕ್ಷೀಲ್, ವ್ಯೋಮ್ ಕಯಾಸ್ತ್ಗೂ ಕಚ್ಚಿತ್ತು ಅಂತ ದೂರಿನಲ್ಲಿ ತಿಳಿಸಿದ್ರು.
ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಈ ಬಗ್ಗೆ ಸರ್ಕಾರದ ಅಭಿಪ್ರಾಯ ಕೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸರ್ಕಾರ, ಇಂಥಾ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಬೇಕು. ಬೇರೆಯವ್ರ ಜೀವವನ್ನು ಅಪಾಯಕ್ಕೆ ದಬ್ಬಿದ ಪಾಂಡ್ಯಗೆ 2 ವರ್ಷ ಜೈಲು ಶಿಕ್ಷೆ ನೀಡ್ಬೇಕು ಅಂತ ಹೇಳಿತ್ತು. ಅಂತಿಮವಾಗಿ ಕೋರ್ಟ್ 1 ವರ್ಷ ಶಿಕ್ಷಿ ವಿಧಿಸಿ ತೀರ್ಪು ನೀಡಿದೆ.
zithromax for std
azithromycin (zithromax)