Tuesday, September 27, 2022
Powertv Logo
Homeದೇಶಭಾರತೀಯರ ಆಧಾರ್, ಪಾನ್ ದಾಖಲೆಗಳನ್ನು ಮಾರಾಟಕ್ಕಿಟ್ಟ ಡಾರ್ಕ್ ವೆಬ್!

ಭಾರತೀಯರ ಆಧಾರ್, ಪಾನ್ ದಾಖಲೆಗಳನ್ನು ಮಾರಾಟಕ್ಕಿಟ್ಟ ಡಾರ್ಕ್ ವೆಬ್!

ನವದೆಹಲಿ: ಒಂದು ಲಕ್ಷಕ್ಕಿಂತಲೂ ಅಧಿಕ ಭಾರತೀಯರ ಆಧಾರ್ ಕಾರ್ಡ್, ಪಾನ್ ಹಾಗೂ ಪಾಸ್​ಪೋರ್ಟ್​ನ ಸ್ಕ್ಯಾನ್ ಕಾಪಿಗಳನ್ನು ಡಾರ್ಕ್​ ವೆಬ್​ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್ ಇಂಟೆಲಿಜೆನ್ಸ್ ಸಂಸ್ಥೆ ಸೈಬಲ್ ತಿಳಿಸಿದೆ.

ಈಗ ಲೀಕ್ ಆಗಿರುವ ದಾಖಲೆಗಳಾವುದೂ ಸರ್ಕಾರಿ ಮೂಲದಿಂದ ಲೀಕ್ ಆಗಿಲ್ಲ. ಬದಲಾಗಿ ಥರ್ಡ್ ಪಾರ್ಟಿಯಿಂದ ಲೀಕ್ ಆಗಿದೆ ಎಂದು ಪಿಟಿಐ ವರದಿ ಮೂಲಕ ತಿಳಿದು ಬಂದಿದೆ. ಡಾರ್ಕ್​ ನೆಟ್​ನಲ್ಲಿ ಒಬ್ಬ ವ್ಯಕ್ತಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತನ್ನ ಬಳಿ ಒಂದು ಲಕ್ಷಕ್ಕೂ ಅಧಿಕ ಮಂದಿಯ ದಾಖಲೆಗಳು ಇದೆ ಎಂದು ಹೇಳಿದ್ದಾನೆ.

ಈ ದಾಖಲೆಗಳನ್ನು ಕಂಪೆನಿಗಳು ನೀಡುವ ಕೆವೈಸಿಯಿಂದ ಕದಿಯಲಾಗಿದ್ದು, ಈ ರೀತಿ ಸಾರ್ವಜನಿಕರ ಮಾಹಿತಿಯನ್ನು ಕದ್ದು ಫೋನ್ ಕಾಲ್​ಗಳನ್ನು ಮಾಡಿ ಅವರಿಗೆ ಮೋಸ ಮಾಡುವ ಸಾಧ್ಯತೆಯೂ ಇರುತ್ತದೆ ಎಂದು ಸೈಬಲ್ ಸಂಸ್ಥೆ ತಿಳಿಸಿದೆ. ಹಾಗಾಗಿ ತಮ್ಮ ವಿವರಗಳನ್ನು ಅದರಲ್ಲೂ ಹಣಕಾಸಿನ ಮಾಹಿತಿಗಳನ್ನು ಫೋನ್, ಇಮೇಲ್ ಅಥವಾ ಎಸ್​ಎಂಎಸ್ ಮೂಲಕ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ.

ಸದ್ಯ ಸೈಬಲ್ ಸಂಸ್ಥೆ ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತಿದೆ. ಕಳೆದ ತಿಂಗಳು 7.65 ಭಾರತೀಯರ ವೈಯಕ್ತಿಕ ಡೇಟಾವು ಡಾರ್ಕ್ ವೆಬ್​ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ತಿಳಿಸಿದೆ. 

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments