ಒಳ್ಳೆಯತನ ನಮ್ಮ ದೌರ್ಬಲ್ಯವಲ್ಲ: ತೆಂಡೂಲ್ಕರ್

0
204

ಮುಂಬೈ: ಗಡಿ ನಿಯಂತ್ರಣ ರೇಖೆಯಲ್ಲಿ ಜೈಷ್​ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ಏರ್ ಸರ್ಜಿಕಲ್​ ಸ್ಟ್ರೈಕ್​ಗೆ ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಯೋಧರನ್ನು​ ಅಭಿನಂದಿಸಿದ್ದಾರೆ. ಹಾಗೆಯೇ ನಮ್ಮ ಒಳ್ಳೆಯತನ ಯಾವತ್ತೂ ನಮ್ಮ ದೌರ್ಬಲ್ಯವಲ್ಲಅಂತ ಪಾಕ್​ಗೆ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.

ಕ್ರಿಕೆಟಿಗ ಸುರೇಶ್​ ರೈನಾ ಅವರೂ ಟ್ವೀಟ್ ಮಾಡಿ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಾಯುಸೇನೆಯ ಶೌರ್ಯಕ್ಕೆ ನನ್ನ ಸೆಲ್ಯೂಟ್​. ಇದು ಪಾಕಿಸ್ತಾನದ ಹೇಡಿತನಕ್ಕೆ ಸರಿಯಾದ ಉತ್ತರ ಅಂತ ಟ್ವೀಟ್​ ಮಾಡಿದ್ಧಾರೆ.

ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು, ಭಯೋತ್ಪಾದನೆ ವಿರುದ್ಧ ಸರಿಯಾದ ಸಂದೇಶ ರವಾನಿಸಿದ್ದೀರಿ ಅಂತ ಯೋಧರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಭಾರತೀಯ ವಾಯುಪಡೆ ಭಯೋತ್ಪಾದನೆ ವಿರುದ್ಧ ಸ್ಪಷ್ಟ ಸಂದೇಶ ರವಾನಿಸಿದೆ. ಜೈ ಹಿಂದ್ ಅಂತ ಟ್ವೀಟ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here