Home ರಾಜ್ಯ ಆಂತರಿಕ ಭದ್ರತಾ ಪೊಲೀಸರ ಕಾರ್ಯಾಚರಣೆ  ಸ್ಪೋಟಕ ವಸ್ತುಗಳ ವಶ: ಆರೋಪಿ ಬಂಧನ

ಆಂತರಿಕ ಭದ್ರತಾ ಪೊಲೀಸರ ಕಾರ್ಯಾಚರಣೆ  ಸ್ಪೋಟಕ ವಸ್ತುಗಳ ವಶ: ಆರೋಪಿ ಬಂಧನ

ಶಿವಮೊಗ್ಗ: ತನ್ನ ಮನೆ ಮುಂಭಾಗದ ವರಾಂಡದಲ್ಲಿ ಸ್ಪೋಟಕ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು, ಶಿವಮೊಗ್ಗ ಆಂತರಿಕ ಭದ್ರತಾ ಪೊಲೀಸರ ತಂಡ ದಾಳಿ ನಡೆಸಿ ಬಂಧಿಸಿದೆ.  ಅಲ್ಲದೇ, ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  

ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದ್ದು, ಈ ವೇಳೆ, ಮನೆಯಲ್ಲಿದ್ದ ಪಟಾಕಿಗಳು, ಮತ್ತು ಸ್ಪೋಟಕ ವಸ್ತುಗಳು ಪತ್ತೆಯಾಗಿವೆ.  ಸಾಗರ ತಾಲೂಕಿನ ಆನಂದಪುರ ಹೋಬಳಿಯ ಮಲ್ಲಂದೂರು ಗ್ರಾಮದಲ್ಲಿರುವ ಗಾಣಿಗನ ಕೆರೆ ಏರಿಯಾ ಬಳಿಯ ಮನೆಯಲ್ಲಿ ಈ ಸ್ಪೋಟಕಗಳು ಪತ್ತೆಯಾಗಿವೆ.  ಈ ವೇಳೆ ಅಬ್ದುಲ್ ಖಾದರ್ ಅಲಿಯಾಸ್ ಗರ್ನಲ್ ಬಾಬಣ್ಣ (63) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. 

ಇನ್ನೂ ವಶಕ್ಕೆ ಪಡೆಯಲಾದ ಸ್ಪೋಟಕಗಳು ಬಂದೂಕಿಗೆ ಉಪಯೋಗಿಸುವುದಾಗಿದ್ದು, ಪರವಾನಿಗೆ ಇಲ್ಲದೇ ಇರುವುದರಿಂದ ವಶಕ್ಕೆ ಪಡೆಯಲಾಗಿದೆ. ಈ ಸ್ಪೋಟಕ ವಸ್ತುಗಳ ಮೌಲ್ಯ ಸುಮಾರು 39 ಸಾವಿರ ರೂ. ಎಂದು ತಿಳಿದು ಬಂದಿದ್ದು, ಕಲಂ 286 IPC ಮತ್ತು ಕಲಂ 9 (B) Explosive Act 1884 Act ರೀತ್ಯಾ ಕೇಸು ದಾಖಲಿಸಿಕೊಳ್ಳಲಾಗಿದೆ. ಗರ್ನಲ್ ಬಾಬಣ್ಣ (63) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. 

ಇನ್ನೂ ಆರೋಪಿ ಅಬ್ದುಲ್ ಖಾದರ್ ನನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.  ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅದರಂತೆ, ಗರ್ನಲ್ ಬಾಬಣ್ಣ ಈ ಭಾಗದಲ್ಲಿ ಫೇಮಸ್ ಆಗಿದ್ದು, ಈತ ಸ್ಥಳೀಯ ಮದುವೆಗಳಿಗೆ ಪಟಾಕಿ ಸಿಡಿಸಲು ಮತ್ತು ಮಂಗಗಳಿಗೆ ಓಡಿಸಲು ಗರ್ನಲ್ ಗಳನ್ನು ನೀಡುತ್ತಿದ್ದನಂತೆ.  ಆದರೆ, ಪರವಾನಿಗೆ ಇಲ್ಲದೇ ಇರುವುದರಿಂದಾಗಿ, ಇಂದು ಈ ರೈಡ್ ನಡೆದಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಕೃಷಿ ಕಾಯ್ದೆಯನ್ನು ರದ್ದು ಮಾಡುವುದಿಲ್ಲ: ನರೇಂದ್ರ ಸಿಂಗ್ ತೋಮರ್

ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಒಂದೂವರೆ ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರೊಟೆಸ್ಟ್ ನಡೆಸುತ್ತಿವೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದೇಶದ ಹೆಚ್ಚಿನ ರೈತರು...

‘ನಾಳೆ ಸಿಎಂ ಯಡಿಯೂರಪ್ಪ ಉಡುಪಿ ಪ್ರವಾಸ’

ಬೆಂಗಳೂರು: ನಾಳೆ ನಾಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಪ್ರವಾಸ ಮಾಡಲಿದ್ದಾರೆ. ನಾಳೆ ಸಂಜೆ ಮಧ್ಯಾಹ್ನ 3 ಗಂಟೆಗೆ ಹೆಚ್ ಎ ಎಲ್ ನಿಂದ ಪ್ರಯಾಣ ಬೆಳೆಸಿ, ಸಂಜೆ 5 ಗಂಟೆಗೆ ಪರ್ಯಾಯ...

‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ’

ಬೆಂಗಳೂರು: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು,  ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ  ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಈ ವಿಷಯ ಪ್ರಕಟಿಸಿದೆ. ಇನ್ನೂ...

‘ರೈತರ ಹೋರಾಟ ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕಲು ಕೈ ರಣತಂತ್ರ’​

ಬೆಂಗಳೂರು: ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವರಿ 20 ರಂದು ಬೆಂಗಳೂರು ಸ್ತಬ್ಧ ಮಾಡುಲು ಪ್ಲಾನ್ ಮಾಡಿಕೊಂಡಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 20 ರಂದು...

Recent Comments