Home ದೇಶ-ವಿದೇಶ  ವಿಶ್ವದಾದ್ಯಂತ 3 ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿವೆ : ಕೇಂದ್ರ

 ವಿಶ್ವದಾದ್ಯಂತ 3 ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿವೆ : ಕೇಂದ್ರ

ನವದೆಹಲಿ : ಇಡೀ ವಿಶ್ವ ಕೊರೋನಾ ಲಸಿಕೆ ಕಂಡು ಹಿಡಿಯುವಲ್ಲಿ ಶ್ರಮಿಸುತ್ತಿದೆ . ಭಾರತ ಕೂಡ ಈ ನಿಟ್ಟಿನಲ್ಲಿ ಮಹತ್ವದ  ಪಾತ್ರವಹಿಸುತ್ತಿದೆ. ವಿಶ್ವದಲ್ಲಿ ಇದುವರೆಗೆ ಅನೇಕ ಔಷಧಗಳನ್ನು ಕಂಡು ಹಿಡಿಯಲಾಗಿದ್ದು, ಅವೆಲ್ಲಾ ಸದ್ಯ ಬೇರೆ ಬೇರೆ ಹಂತದ ಪ್ರಯೋಗದಲ್ಲಿವೆ. ಆದರೆ ಇಡೀ ವಿಶ್ವದಲ್ಲಿಅಂತಿಮ ಹಂತದ ಪ್ರಯೋಗದಲ್ಲಿರುವುದು ಮೂರೇ ಲಸಿಕೆಗಳು ಮಾತ್ರ ..!

ಹೌದು ಯುಎಸ್​ಎ,  ಯುಕೆ (ಆಕ್ಸ್​ಫರ್ಡ್​​​ ವಿವಿ) ಹಾಗೂ ಚೀನಾದ ಲಸಿಕೆಗಳು ಕೊನೆಯ ಹಂತದ ಪರೀಕ್ಷೆಯಲ್ಲಿವೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. 24 ವ್ಯಾಕ್ಸಿನ್​​ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿವೆ . 141 ವ್ಯಾಕ್ಸಿನ್​ ಪ್ರಯೋಗಕ್ಕೆ ಮೊದಲ ಹಂತದ ಪರೀಕ್ಷೆಯಲ್ಲಿವೆ. ಮೂರನೇ, ಅಂದ್ರೆ ಅಂತಿಮ ಹಂತದ ಪ್ರಯೋಗದಲ್ಲಿರುವ ವ್ಯಾಕ್ಸಿನ್​ ಸಕ್ಸಸ್​ ಆಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆಗೊಂಡು ಎಲ್ಲೆಡೆ ಬಿಡುಗಡೆಯಾಗಲಿವೆ ಎಂದು ಕೇಂದ್ರ ಹೇಳಿದೆ. ಭಾರತ ಕೂಡ ಕೊವಿಡ್ ಔಷಧಕ್ಕಾಗಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ 1,81,90,000 ಕೊವಿಡ್​​ ಟೆಸ್ಟ್ ನಡೆಸಲಾಗಿದ್ದು, ಸಾವಿನ ಪ್ರಮಾಣ ಶೇ 2.21ರಷ್ಟಿದೆ. ಚೇತರಿಕೆ ಪ್ರಮಾಣ ದೆಹಲಿಯಲ್ಲಿ ಶೇ 88, ಲಡಾಖ್​ನಲ್ಲಿ ಶೇ 80, ಹರಿಯಾಣ ಶೇ 78, ಅಸ್ಸೋಂ ಶೇ 76, ತೆಲಂಗಾಣ ಶೇ 74, ತಮಿಳುನಾಡು ಹಾಗೂ ಗುಜರಾತ್ ಶೇ 73, ರಾಜಸ್ಥಾನ ಶೇ 70, ಮಧ್ಯಪ್ರದೇಶ ಶೇ 69, ಗೋವಾ ಶೇ 68ರಷ್ಟಿದೆ ಎಂದು ಕೇಂದ್ರ ತಿಳಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments