Sunday, June 26, 2022
Powertv Logo
Homeದೇಶಜೂನ್​ 1 ರಿಂದ ರೈಲು ಸಂಚಾರ : ರೈಲು ಪ್ರಯಾಣಕ್ಕೆ ಇಂದಿನಿಂದ ಆನ್​ಲೈನ್ ಟಿಕೆಟ್...

ಜೂನ್​ 1 ರಿಂದ ರೈಲು ಸಂಚಾರ : ರೈಲು ಪ್ರಯಾಣಕ್ಕೆ ಇಂದಿನಿಂದ ಆನ್​ಲೈನ್ ಟಿಕೆಟ್ ಬುಕ್ಕಿಂಗ್ ಆರಂಭ

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ಜೂನ್ 1 ರಿಂದ ಪ್ರಮುಖ ನಗರಗಳಲ್ಲಿ 200 ವಿಶೇಷ ರೈಲುಗಳು ಸಂಚರಿಸಲಿವೆ. ವಿಶೇಷ ರೈಲುಗಳಲ್ಲಿ ಪ್ರಯಾಣಿಸಲು ಇಂದಿನಿಂದ ಆನ್​ಲೈನ್ ಬುಕ್ಕಿಂಗ್ ಪ್ರಾರಂಭವಾಗಿದೆ.

ದೆಹಲಿ,ಮುಂಬೈ, ಕೊಲ್ಕತ್ತಾ, ಪಾಟ್ನಾ ,ಜೈಪುರ, ವಾರಣಾಸಿ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಸಿಕಂದರಬಾದ್ ಹಾಗೂ ತಿರುವನಂತಪುರಂ ಸೇರಿದಂತೆ ಪ್ರಮುಖ ನಗರಗಳಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದ್ದು, ಪ್ರತಿದಿನ 200 ರೈಲುಗಳು ಸಂಚರಿಸಲಿವೆ. ಎಸಿ ರಹಿತ 5 ಡ್ಯೂರೆಂಟೊ, ಎಸಿ ರಹಿತ ಹಾಗೂ ಎಸಿ ಎರಡೂ ಬೋಗಿಗಳು ಇರುವ ರೈಲುಗಳು ಸಂಚಾರ ಮಾಡಲಿವೆ. ಇನ್ನು ದೆಹಲಿಯ ಪ್ರತಿದಿನ ಒಟ್ಟ 34 ರೈಲುಗಳು ಸಂಚರಿಸಲಿವೆ. ಮುಂಬೈನಿಂದ 12 ರೈಲುಗಳು, ಹೌರಹ್ ಮತ್ತು ಸೀಲ್​ದಾಹ್​ನಿಂದ 11 ರೈಲುಗಳು ಹಾಗೂ ಬಿಹಾರದಿಂದ 24 ಜೋಡಿ ರೈಲು ಹಾಗೂ ಉತ್ತರಪ್ರದೇಶದಿಂದ 16 ಜೋಡಿ ರೈಲು ಸಂಚರಿಸಲಿವೆ.

ಇಂದಿನಿಂದ ಆನ್​ಲೈನ್​ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಲಾಕ್​ಡೌನ್​ಗಿಂತ ಮೊದಲಿಗಿದ್ದ ಸಮಯದ ಪ್ರಕಾರವೇ ರೈಲುಗಳು ಸಂಚರಿಸಲಿದೆ. ಪುರುಷೋತ್ತಮ ಎಕ್ಸ್​ಪ್ರೆಸ್, ಬ್ರಹ್ಮಪುತ್ರ ಮೇಲ್ ಹಾಗೂ ಸಂಪೂರ್ಣ ಕ್ರಾಂತಿ ಎಕ್ಸ್​ಪ್ರೆಸ್​ಗಳ ಮಾದರಿಯಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುವುದು. 22 ಶತಾಬ್ದಿ ಎಕ್ಸ್​ಪ್ರೆಸ್ ರೈಲುಗಳು ಓಡಾಡಲಿವೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಜನ ಸಂದಣಿಯಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಐಆರ್​ಸಿಟಿಸಿ ಮೊಬೈಲ್​ ಆ್ಯಪ್​ನಲ್ಲಿ ಮುಂಗಡ ಟಿಕೆಟ್​ ಅನ್ನು ಬುಕ್ ಮಾಡುವ ಅವಕಾಶ ಮಾಡಿಕೊಡಲಾಗಿದ್ದು, 30 ದಿನಕ್ಕಿಂತ ಮುಂಚಿತವಾಗಿಯೇ ಪ್ರಯಾಣಿಕರು ಸೀಟನ್ನು ಕಾಯ್ದಿರಿಸಬಹುದಾಗಿದೆ.

ಇನ್ನು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಮೊದಲು ಸ್ಕ್ರೀನಿಂಗ್ ಟೆಸ್ಟ್​ಗೆ ಒಳಪಡಿಸಿ ಬಳಿಕವೇ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಅಲ್ಲದೆ ಸೀಮಿತ ರೈಲಿನಲ್ಲಿ ಮಾತ್ರ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಹಾಗಾಗಿ ಪ್ರಯಾಣಿಕರೇ ಬೆಡ್​ಶೀಟ್, ಆಹಾರ ಮತ್ತು ನೀರಿನ ವ್ಯವಸ್ಥೆ​ಗಳನ್ನು ಮಾಡಿಕೊಳ್ಳಬೇಕೆಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.  

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments