Tuesday, September 27, 2022
Powertv Logo
Homeರಾಜ್ಯ7ನೇ ತರಗತಿ ವರೆಗೆ ಆನ್​ಲೈನ್​ ಶಿಕ್ಷಣ ರದ್ದು

7ನೇ ತರಗತಿ ವರೆಗೆ ಆನ್​ಲೈನ್​ ಶಿಕ್ಷಣ ರದ್ದು

ಬೆಂಗಳೂರು : ರಾಜ್ಯದಲ್ಲಿ ಪುಟ್ಟ ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್​ಕೆಜಿಯಿಂದ ಹಿಡಿದು ಪ್ರಾಥಮಿಕ ಹಂತದ  7 ನೇ ತರಗತೆ ವರೆಗಿಉನ ವಿದ್ಯಾರ್ಥಿಗಳಿಗೆ  ಆನ್​ಲೈನ್​ ಶಿಕ್ಷಣವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.

ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ  ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ ಮಾಧುಸ್ವಾಮಿ ಈ ನಿರ್ಣಯವನ್ನು ಹೇಳಿದ್ದಾರೆ. “ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆನ್​ಲೈನ್​ ಶಿಕ್ಷಣದ ಕುರಿತಂತೆ ಚರ್ಚೆ ನಡೆಸಲಾಗಿದೆ. ಈಗಿರುವ 5 ನೇ ತರಗತಿ ವರೆಗೆ ಬದಲು 7ನೇ ತರಗತಿ ವರೆಗೆ ರದ್ದುಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

 ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್​​ಕುಮಾರ್​​​ ನಿನ್ನೆಯಷ್ಟೇ 5ನೇ ತರಗತಿವರೆಗೆ ಆನ್​ಲೈನ್​ ಶಿಕ್ಷಣವನ್ನು ರದ್ದು ಮಾಡುವ ವಿಚಾರ ತಿಳಿಸಿದ್ದರು. ಇಂದು ಆ ನಿರ್ಧಾರವನ್ನು ಮರುಪರಿಶೀಲಿಸಿ, 7ನೇ ತರಗತಿ ವರೆಗೆ ಆನ್​ಲೈನ್​ ಶಿಕ್ಷಣವನ್ನು ರದ್ದು ಮಾಡಿ ಸರ್ಕಾರ ನಿರ್ಧಾರ ಪ್ರ ಕಟಿಸಿದೆ.

ಇನ್ನು ಶಾಲಾ ಶುಲ್ಕಕ್ಕಾಗಿ ಹೆತ್ತವರನ್ನು ಒತ್ತಾಯಿಸುವ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಸುರೇಶ್​ ಕುಮಾರ್​ ಎಚ್ಚರಿಕೆ ನೀಡಿದ್ದರು.

 

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments