Home ದೇಶ-ವಿದೇಶ ಇವ್ರು ಹೆಲ್ಮೆಟ್ ಹಾಕಿಕೊಂಡು ಈರುಳ್ಳಿ ಮಾರುತ್ತಿರೋದು ಯಾಕೆ?

ಇವ್ರು ಹೆಲ್ಮೆಟ್ ಹಾಕಿಕೊಂಡು ಈರುಳ್ಳಿ ಮಾರುತ್ತಿರೋದು ಯಾಕೆ?

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಹಾಕ್ಬೇಕು… ಈ ಬಗ್ಗೆ ಕಟ್ಟು ನಿಟ್ಟಿನ ನಿಯಮ ಕೂಡ ಇದೆ. ಹೆಲ್ಮೆಟ್ ಹಾಕ್ದೆ ಬೈಕ್ ಚಲಾಯಿಸಿದ್ರೆ ದಂಡ ಫಿಕ್ಸ್​. ಆದ್ರೆ, ತರಕಾರಿ ಮಾರಟ ಮಾಡುವಾಗ ಹೆಲ್ಮೆಟ್ ಹಾಕಿಕೊಳ್ಳಬೇಕಾ? ಇಲ್ವಲ್ಲಾ..? ತರಕಾರಿ ಮಾರಾಟಕ್ಕೂ ಹೆಲ್ಮೆಟ್​​ಗೂ ಸಂಬಂಧವೇನು ಅಂತ ಎಲ್ರಿಗೂ ಆಶ್ಚರ್ಯವಾಗುತ್ತೆ. ಆದ್ರೂ ನಂಬ್ಲೇ ಬೇಕು..ಇಲ್ಲಿ ಹೆಲ್ಮೆಟ್ ಹಾಕಿಕೊಂಡೇ ಈರುಳ್ಳಿ ಮಾರುವುದು! ಹಲ್ಮೆಟ್ ಇಲ್ದೆ ಈರುಳ್ಳಿ ಮಾರೋ ಸಾಹಸಕ್ಕೆ ಕೈ ಹಾಕುವುದೇ ಇಲ್ಲ.
ಹೌದು ಈರುಳ್ಳಿ ಸೆಂಚುರಿ ಬಾರಿಸಿರೋದ್ರಿಂದ ಬಿಹಾರ ಸರ್ಕಾರ ಜನ್ರಿಗೆ ಕಷ್ಟ ಆಗ್ದೇ ಇರ್ಲಿ ಅಂತ ಸೊಸೈಟಿ ಮೂಲಕ ಕೆ ಜಿಗೆ 35 ರೂಪಾಯಿಯಂತೆ ಈರುಳ್ಳಿ ಮಾರಾಟ ಮಾಡ್ತಿದೆ. ಆದ್ರೆ ಒಬ್ಬರಿಗೆ 2 ಕೆಜಿ ಮಾತ್ರ. ಹೀಗಾಗಿ ಜನ ಈರುಳ್ಳಿ ಕೊಳ್ಳೋಕೆ ಮುಗಿಬಿದ್ದಿದ್ದಾರೆ. ಗಲಾಟೆ, ಗದ್ದಲ, ನೂಕು-ನುಗ್ಗಲು ಮಾಮೂಲ್ ಆಗ್ಬಿಟ್ಟಿದೆ. ಆದ್ರೆ, ಮಾರಾಟ ಮಾಡಲು ನೇಮಿಸಿರೋ ಸಿಬ್ಬಂದಿಗೆ ಯಾವ್ದೇ ಭದ್ರತೆ ನೀಡಿಲ್ಲ. ಆದ್ದರಿಂದ ತಮ್ಮ ರಕ್ಷಣೆ ತಮ್ಮ ಹೊಣೆ ಅಂತ ಹೆಲ್ಮೆಟ್ ಹಾಕೊಂಡು ಮಾರಾಟ ಮಾಡ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments