ಪುಲ್ವಾಮ ಕರಾಳ ದಿನಕ್ಕೆ ಒಂದು ವರ್ಷ! ಅಂದು ಏನೆಲ್ಲಾ ಆಗಿತ್ತು…

0
229

ಫೆಬ್ರವರಿ ಅಂದ್ರೆ ಎಲ್ಲರಿಗೂ ಥಟ್ ಅಂತ ನೆನಪಾಗೋದು ವ್ಯಾಲಂಟೈನ್ಸ್ ಡೇ. ಆದರೆ ಕಳೆದ ವರ್ಷದಿಂದ ಭಾರತಕ್ಕೆ ಈ ದಿನ  ಕರಾಳ ದಿನ.

ಒಂದು ವರ್ಷದ ಹಿಂದಿನ ಈ ದಿನ ಎಲ್ಲರೂ ಸಂಭ್ರಮದಲ್ಲಿರುವ ಹೊತ್ತಲ್ಲಿ ಬಂದ ಒಂದು ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಂದು ದೇಶವೇ ಸಂಭ್ರಮದಲ್ಲಿ ಮುಳುಗಿತ್ತು. ಆದರೆ ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು.  ಪುಲ್ವಾಮಾದ ದಾಳಿ ವಿಚಾರ ಕೇಳಿದ ಕೂಡಲೇ ಎಲ್ಲರ ಖುಷಿ ಕಣ್ಣೀರಲ್ಲಿ ಕೊಚ್ಚಿ ಹೋಯ್ತು.

ಹೌದು,  2019ರ ಫೆಬ್ರವರಿ 14ರಂದು ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಉಗ್ರರ ದುಷ್ಕೃತ್ಯಕ್ಕೆ ಭಾರತದ 40 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. 

ಪಾಕಿಸ್ತಾನ ಪೋಷಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಭದ್ರತಾ ಸಿಬ್ಬಂದಿಯ ವಾಹನದ ಮೇಲೆ ಬಾಂಬ್​ ದಾಳಿ ನಡೆಸಿ ರಕ್ತದೋಕುಳಿಯನ್ನು ನಡೆಸಿತ್ತು. ಆ ದಾಳಿಗೆ ಇಂದು ವರ್ಷದ ಕಹಿ ನೆನಪು.

ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತ ಫೆಬ್ರವರಿ 16ರಂದು ಪಾಕ್​ ನ ಉಗ್ರ ನೆಲೆಗಳಾದ ಬಾಲಾಕೋಟ್​, ಮುಜಾಫರಬಾದ್​ ಮತ್ತು ಚಾಕೋಟಿ ಮೇಲೆ ದಾಳಿ ನಡೆಸಿದ್ದನ್ನು ಕೂಡ ಸ್ಮರಿಸಬಹುದು.

LEAVE A REPLY

Please enter your comment!
Please enter your name here