ಒಂದು ಕಡೆ ಕುರಿ ಉಣ್ಣೆಯ ಕಂಬಳಿಗಳನ್ನ ನೇಯುತ್ತಿರೋ ವಯೋ ವೃದ್ದರು, ಮತ್ತೋಂದು ಕಡೆ ಕಂಬಳಿ ನೇಯಲು ಮಗ್ಗವನ್ನ ಸಿದ್ದಪಡಿಸಿತ್ತೀರೋ ಕುಶಲ ಕರ್ಮಿಗಳು, ಗ್ರಾಮದಲ್ಲಿ ಬಹುತೇಕ ಜನರು ಇದೇ ಕಸಬನ್ನು ನಂಬಿಕೊಂಡವರ ಸಂಖ್ಯೆ ಹೆಚ್ಚು,ಇಂತಹ ದೃಶ್ಯಗಳಿಗೆ ಸಾಕ್ಷಿ ಆಗಿರೋದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಉಡೇವೂ ಗಡಿ ಗ್ರಾಮದಲ್ಲಿ,ಹಲವಾರು ದಶಕಗಳಿಂದ ಉತ್ತಮವಾದ ಗುಣಮಟ್ಟದ ಕುರಿ ಉಣ್ಣೆಯ ಕಂಬಳಿಗಳನ್ನು ಸಿದ್ದಪಡಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಇವರ ಜೀವನ ದುಸ್ತರವಾಗಿದೆ.
ಹೊಸ ತಂತ್ರ ಜ್ಞಾನದ ಉಪಕರಣಗಳ ಯಂತ್ರದಿಂದ ಸಿದ್ದವಾಗೋ ಕಂಬಳಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ನಾವು ಸಿದ್ದಪಡಿಸೋ ಕಂಬಳಿಗಳು ಉತ್ತಮ ಗುಣಮಟ್ಟದಿಂದ ಇದ್ದರೂ ನಮಗೆ ಮಾರುಕಟ್ಟೆ ಇಲ್ಲ,ಹಾಗು ಪಕ್ಕದ ಆಂದ್ರ ರಾಜ್ಯದಲ್ಲಿ ಪ್ರತಿ ನೇಕಾರರಿಗೆ ಹೊಸ ರೀತಿಯ ಮಗ್ಗದ ಯಂತ್ರಗಳನ್ನು ಕೊಳ್ಳಲು 25 ಸಾವಿರ ಸಹಾಯ ಧನ ನೀಡುತ್ತಾರೆ. ಆದ್ರೆ ನಮ್ಮ ರಾಜ್ಯದಲ್ಲಿ 2 ಸಾವಿರ ಪ್ರೋತ್ಸಹ ದನ ನೀಡುತ್ತಾರೆ ಹೀಗೆ ಆದ್ರೆ ನಮ್ಮ ಈ ಕಸಬು ಈ ಕಲೆ ಮೂಲೆಗುಂಪಾಗುತ್ತೆ ಅಂತ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ .
ಹೀಗೆ ಚಳಿಕಾಲ ಬಂತು ಅಂದ್ರೆ ಸಾಕು ಜನರು ಬೆಚ್ಚಗೆ ಇರಲು ನಮ್ಮ ಕುರಿ ಉಣ್ಣೆಯ ಕಂಬಳಿಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಈ ಕಸಬು ಒಂದು ಉದ್ಯಮವಾಗಿದೆ. ದೊಡ್ಡ ದೊಡ್ಡ ಯಂತ್ರಗಳಿಂದ ತಯಾರು ಆಗೋ ಕಂಬಳಿಗೆ ಡಿಮ್ಯಾಂಡ್ ಬಂದಿದೆ. ನಾವು ತಯಾರು ಮಾಡೋ ಕಂಬಳಿಗಳಿಗೆ ಮಾರುಕಟ್ಟೆ ಕುಸಿದಿದೆ. ಲಾಕ್ ಡೌನ್ ಸಮಯದಲ್ಲೂ ನಾವು ಮನೆಯಲ್ಲಿ ಕುಳಿತು ಕಂಬಳಿಗಳನ್ನ ಸಿದ್ದಪಡಿಸಿದ್ದೆವೆ. ಆದ್ರೂ ಕೂಡ ಎನು ಪ್ರಯೋಜವಾಗಿಲ್ಲ. ಕಷ್ಟ ಪಟ್ಟು ಕಂಬಳಿ ಸಿದ್ದ ಮಾಡಿದ್ರೆ ಹೊಟ್ಟೆ ತುಂಬುವಷ್ಟು ಆದಾಯ ಸಿಗುತ್ತಿಲ್ಲ ಅಂತ ನೇಕಾರರು ತಮ್ಮ ಸಂಕಷ್ಟವನ್ನು ಹೊರ ಹಾಕಿದ್ದಾರೆ.
ಒಟ್ಟಾರೆ ಹಲವಾರು ದಶಕಗಳಿಂದ ಪಾರಂಪರಿಕ ಪದ್ದತಿಯಲ್ಲಿ ಸಿದ್ದವಾಗುತ್ತಿದ್ದ ಕುರಿಉಣ್ಣೆಯ ಕಂಬಳಿಗಳಿಗೆ ಇದೀಗ ಮಾರುಕಟ್ಟೆ ಇಲ್ಲದಂತಾಗುತ್ತಿದೆ. ಇನ್ನಾದ್ರೂ ಸರಕಾರ ಈ ನೇಕಾರರ ಬದುಕಿಗೆ ನೇರವಾಗಲಿ ಅನ್ನೋದೆ ನಮ್ಮ ಆಶಯ.