ಸಚಿವೆಯ ಸೊಂಟಕ್ಕೆ ಕೈ ಹಾಕಿದ ಸಚಿವ

0
260

ಅಗರ್ತಲಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿಪ್ಲವ್ ಕುಮಾರ್ ದೇವ್​ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವರೊಬ್ಬರು ಮಹಿಳಾ ಸಹುದ್ಯೋಗಿಯ ಸೊಂಟ ಮುಟ್ಟಿದ ವಿಡಿಯೋ ಫುಲ್ ವೈರಲ್ ಆಗಿದೆ.

ತ್ರಿಪುರಾದ ಅಗರ್ತಲಾದಲ್ಲಿ ಪ್ರಧಾನಿಯಿದ್ದ ವೇದಿಕೆಯಲ್ಲಿ ತ್ರಿಪುರಾದ ಸಚಿವ ಮನೋಜ್ ಕಾಂತಿ ದೇಬ್​ ಅವರು ಸಚಿವೆಯೊಂದಿಗೆ ಅಸಭ್ಯವಾಗಿ ವರ್ತಿಸಿರೋ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಮಾಜ ಕಲ್ಯಾಣ ಹಾಗೂ ಸಾಮಾಜಿಕ ಶಿಕ್ಷಣ ಸಚಿವೆ ಸಂತನಾ ಚಕ್ಮ ಅವರು ಈ ಘಟನೆಯಿಂದ ಸಾರ್ವಜನಿಕವಾಗಿ ಮುಜುಗರಕ್ಕೊಳಗಾಗಿದ್ದಾರೆ. ಇದೇ ಅಸ್ತ್ರವನ್ನ ಉಪಯೋಗಿಸಿಕೊಂಡ ವಿರೋಧ ಪಕ್ಷಗಳು ಸಚಿವ ಮನೋಜ್ ಸಚಿವೆಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನೂ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮನೋಜ್​ ಅವರು ಇದು ತಮ್ಮ ವಿರುದ್ಧ ಹೆಣೆದಿರುವ ಷಡ್ಯಂತ್ರ ಅಂತ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here