Sunday, June 26, 2022
Powertv Logo
Homeದೇಶಆತಂಕ ಸೃಷ್ಠಿಸಿದ ಹೊಸ ರೂಪಾಂತರಿ ವೈರಸ್

ಆತಂಕ ಸೃಷ್ಠಿಸಿದ ಹೊಸ ರೂಪಾಂತರಿ ವೈರಸ್

ಕೊರೊನಾ.. ಕೊರೊನಾ.. ಕೊರೊನಾ..ಈ ಪದವನ್ನ ಇತ್ತೀಚೆಗೆ ನಾವೆಲ್ಲಾ ಕೇಳೊದು ಕಮ್ಮಿಯಾಗಿತ್ತು. ಯಾಕಂದ್ರೆ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಯ್ತು ಮತ್ತು ಕೊರೋನಾ ಲಸಿಕೆಯನ್ನ ಬಹುತೇಕರು ತೆಗೆದುಕೊಂಡಿದ್ದರು. ಹೀಗೆ ಎಲ್ಲವೂ ಓಕೆ ಕೊರೊನಾದಿಂದ ತಪ್ಪಿಸಿಕೊಂಡಿದ್ದೀವಿ ಅನ್ನೋ ಲೆಕ್ಕಾಚಾರದಲ್ಲಿರುವಾಗ್ಲೆ, ಎರಡು ವರ್ಷದ ಹಿಂದೆ ಅಲೆ ಅಲೆಯಾಗಿ ಬಂದ ಕೊರೊನಾದ ರೂಪಾಂತರಿ ವೈರಸ್​ಗಳು ಕಂಡುಬರ್ತಿದ್ದು ಮತ್ತಷ್ಟು ಆತಂಕ ಹುಟ್ಟುಹಾಕಿದೆ.

ಹೌದು ಆಫ್ರಿಕಾ ರಾಷ್ರಗಳಲ್ಲಿ ಹೊಸ ರೂಪಾಂತರಿ ವೈರಸ್‌ ಕಂಡು ಬಂದಿದ್ದು ಇಡೀ ಜಗತ್ತೆ ಬೆಚ್ಚಿಬಿದ್ದಿದೆ. ಇದು ಅತೀ ವೇಗವಾಗಿ ಹರಡಲಿರುವ ಕೊರೋನಾ ರೂಪಾಂತರಿ ತಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಈ ಮೂಲಕ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಹಾಗಾದ್ರೆ ಯಾವುದು ಈ ಹೊಸ ರೂಪಾಂತರಿ ವೈರಸ್‌..? ಅನ್ನೋದ್ರ ಮಾಹಿತಿ ಇಲ್ಲಿದೆ.

ಸಧ್ಯ ಭಾರಿ ಆತಂಕ ಸೃಷ್ಟಿಸಿರುವ ಈ ವೈರಸ್ ಹೆಸರು B.1.1529 ಎಂದು ಈ ವೈರಸ್ ಅನ್ನು ಒಮಿಕ್ರಾನ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ವಿಶ್ವದಲ್ಲಿ 87 ಒಮಿಕ್ರಾನ್ ರೂಪಾಂತರಿ ಪ್ರಕರಣಗಳು ಪತ್ತೆಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರಲ್ಲಿ ರೂಪಾಂತರಿ ವೈರಸ್‌ನ ಲಕ್ಷಣ ಪತ್ತೆ ಕಂಡುಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ 22 ಮಂದಿಯಲ್ಲಿ ಹೊಸ ವೈರಸ್‌ ಪತ್ತೆಯಾಗಿದೆ. ಹೀಗಾಗಿ ಅಮೆರಿಕ, ಕೆನಡಾ ದೇಶಗಳು ದಕ್ಷಿಣ ಆಫ್ರಿಕಾ ಸೇರಿ 7 ರಾಷ್ಟ್ರಗಳಿಗೆ ನವೆಂಬರ್‌ 29ರಿಂದ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಲಿದೆ.

ಜಗತ್ತಿನಾದ್ಯಾಂತ ತಲ್ಲಣ ಸೃಷ್ಠಿಸಿರೋ ಒಮಿಕ್ರಾನ್ ವೈರಸ್‌ ಪತ್ತೆಯಾಗುತ್ತಿದ್ದಂತೆ ಭಾರತದಲ್ಲೂ ಹೈ ಅಲರ್ಟ್‌ ಘೋಷಣೆ ಮಡಲಾಗಿದೆ. ಹಾಗು B.1.1529 ರೂಪಾಂತರಿ ಅಬ್ಬರಿಸುತ್ತಿದ್ದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ . ವಿದೇಶಿ ಪ್ರಯಾಣಿಕರ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಕೊರೋನಾ ಪಾಸಿಟಿವ್‌ ಬಂದರೆ ಪ್ರತ್ಯೇಕವಾಗಿ ಇರಿಸಬೇಕು, ಪರೀಕ್ಷೆ ಮಾದರಿ ಜೆನೋಮ್‌ ಸೀಕ್ವನ್ಸಿಂಗ್​ಗೆ ಕಳಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ನೀಡಿದೆ. ಅಷ್ಟೇ ಅಲ್ಲದೆ ಯೂರೋಪ್‌ ದೇಶಗಳು, ದಕ್ಷಿಣ ಆಫ್ರಿಕಾ, ಬ್ರೆಸಿಲ್‌, ಬಾಂಗ್ಲಾ, ಬೋಟ್ಸ್‌ವಾನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌, ಹಾಂಕಾಂಗ್‌, ಇಸ್ರೆಲ್‌ನಿಂದ ಬರುವವರ ಮೇಲೆ ಹೆಚ್ಚಿನ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.

20 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments