ಡೈರೆಕ್ಟರ್, ಆ್ಯಕ್ಟರ್ ಎಂ ಜಿ ಶ್ರೀನಿವಾಸ್ ಗೊತ್ತಲ್ವಾ? ಅರೆ, ಶ್ರೀನಿವಾಸ್ ಗೊತ್ತಿಲ್ದೆ ಏನ್ರಿ? ಶ್ರೀನಿವಾಸ ಕಲ್ಯಾಣ, ಬೀರ್ಬಲ್ ಸಿನಿಮಾಗಳ ಹೀರೋ, ನಿರ್ದೇಶಕ ಶ್ರೀನಿ ಅವ್ರಲ್ವಾ? ಇಡೀ ಕರ್ನಾಟಕಕ್ಕೆ ಗೊತ್ತು… ಶ್ರೀನಿ ಗೊತ್ತಲ್ವಾ ಅಂತ ಕೇಳ್ತಿದ್ದೀರಲ್ಲಾ ಅಂತ ನೀವು ಹೇಳ್ತಿದ್ದೀರಾ ಅಲ್ವಾ? ಹ್ಞೂಂ ಅದೇ ಶ್ರೀನಿವಾಸ್ ಅವ್ರು ‘ಓಲ್ಡ್ ಮಂಕ್’ ಇಟ್ಕೊಂಡ್ ನಿಮ್ಗಾಗಿ ವ್ಹೇಟ್ ಮಾಡ್ತಿದ್ದಾರೆ.
ಹೌದು, ಶ್ರೀನಿವಾಸ್ ನಿರ್ದೇಶಿಸಿ, ನಟಿಸುತ್ತಿರೋ ಹೊಸ ಚಿತ್ರ ಓಲ್ಡ್ ಮಂಕ್. ಈ ಚಿತ್ರಕ್ಕಾಗಿ ಶ್ರೀನಿ ಕಲಾವಿದರನ್ನು ಹುಡುಕುತ್ತಿದ್ದಾರೆ. ಹೀಗಾಗಿ ಆಡಿಷನ್ ಮಾಡ್ತಿದ್ದಾರೆ. ಡಿಸೆಂಬರ್ 28ರಂದು ಮೈಸೂರಿನ ಮಹಾರಾಣಿ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜಲ್ಲಿ ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಎಂಇಎಸ್ ಕಾಲೇಜಲ್ಲಿ ಡಿಸೆಂಬರ್ 29ರಂದು ಆಡಿಷನ್ ನಡೆಯಲಿದೆ. 7 ವರ್ಷದಿಂದ 15 ವರ್ಷದ ಮಕ್ಕಳು ಹಾಗೂ 18ರಿಂದ 50ರ ವಯೋಮಾನದ ಪುರುಷ ಮತ್ತು ಮಹಿಳೆಯರು ಪಾಲ್ಗೊಳ್ಳಬಹುದು.
zithromax 1gm
buy zithromax 250 mg