ಹಾಸನ: ಅಧಿಕಾರಿ ಸಿಬ್ಬಂದಿಗಳ ಜಟಾಪಟಿಯಲ್ಲಿ ಸರಕಾರಿ ಕಚೇರಿಗೆ ಬೀಗ್ ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ.
ನಿನ್ನೆ ಸಂಜೆ ಸಿಡಿಪಿಓ ಜೈಕಿರಣ್ ಹಾಗೂ ಕುಟುಂಬ ಸದಸ್ಯರಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಹಿನ್ನಲೆಯಲ್ಲಿ ಕಚೇರಿಯ ಸಿಸಿ ಕ್ಯಾಮರಾ ಡಿಲೀಟ್ ಆಗುವ ಭೀತಿಯಿಂದ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಚಂದ್ರಶೇಖರ್ ಕಚೇರಿಗೆ ಬೀಗ ಹಾಕಿದ್ದಾರೆ. ಅನುಮತಿ ಇಲ್ಲದೇ ಬಾಗಿಲು ತೆರೆಯುವಂತಿಲ್ಲ ಸೂಚನೆ ಅಂಟಿಸಿ ಕಚೇರಿಗೆ ಬೀಗ ಹಾಕಲಾಗಿದೆ.
ಕಚೇರಿ ಬೀಗ ಹಾಕಿರುವ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಮಹಿಳಾ ಸಿಬ್ಬಂದಿಗಳು ಹೊರಗೆ ನಿಂತುಕೊಂಡಿದ್ದಾರೆ.