ಒಡಿಶಾದಲ್ಲಿ ಬಿಎಸ್​ಪಿಯಿಂದ ತೃತೀಯಲಿಂಗಿ ಕಣಕ್ಕೆ..!

0
109

ಭುವನೇಶ್ವರ: ಒಡಿಶಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕೊರೈ ಕ್ಷೇತ್ರದಿಂದ ತೃತೀಯಲಿಂಗಿ ಕಾಜಲ್​ ನಾಯಕ್​ ಅವರನ್ನು ಕಣಕ್ಕಿಳಿಸಲು ಬಿಎಸ್​ಪಿ ನಿರ್ಧರಿಸಿದೆ.

ಜಜ್​ಪುರ ಪ್ರದೇಶದ ಸಮಾಜಿಕ ಕಾರ್ಯಕರ್ತೆಯಾಗಿರುವ ಕಾಜಲ್​ ಈ ಕುರಿತು ಪ್ರತಿಕ್ರಿಯಿಸಿ, “ಚುನಾವಣೆಯಲ್ಲಿ ಸ್ಪರ್ಧಿಸಲು ಬಿಎಸ್​ಪಿ ನನಗೆ ಟಿಕೆಟ್​ ನೀಡಲು ನಿರ್ಧರಿಸಿರುವುದು ಖುಷಿ ತಂದಿದೆ. ಈ ಮೊದಲು ನಾನು ಹಲವು ಪಕ್ಷಗಳ ಬಳಿ ಟಿಕೆಟ್ ಕೇಳಿ ಹೋಗಿದ್ದೆ. ಆದರೆ ಯಾರೂ ನನಗೆ ಪ್ರೋತ್ಸಾಹ ನೀಡಿರಲಿಲ್ಲ. ನನ್ನ ಮೇಲೆ ಹಾಗೂ ತೃತೀಯ ಲಿಂಗಿಗಳ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಬಿಎಸ್​ಪಿಗೆ ಧನ್ಯವಾದಗಳು” ಅಂತ ಹೇಳಿದ್ದಾರೆ.

ಜಜ್​ಪುರ ತೃತೀಯ ಲಿಂಗಿಗಳ ಸಂಘಟನೆಯ ಅಧ್ಯಕ್ಷೆಯಾಗಿರುವ ಕಾಜಲ್, ತೃತೀಯಲಿಂಗಿಗಳ ಹಕ್ಕುಗಳಿಗಾಗಿ, ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಒಡಿಶಾದಲ್ಲಿ ಒಟ್ಟು 147 ವಿಧಾನಸಭಾ ಕ್ಷೇತ್ರಗಳಿದ್ದು, ಎಪ್ರಿಲ್​11ರಿಂದ ಆರಂಭಿಸಿ ಲೋಕಸಭಾ ಚುನಾವಣೆಯ ಜೊತೆ ಜೊತೆಗೇ ನಾಲ್ಕು ಹಂತದಲ್ಲಿ ಮತದಾನ ನಡೆಯಲಿದೆ.

LEAVE A REPLY

Please enter your comment!
Please enter your name here