‘ಒಡೆಯ’ನ ರಾಜ ದರ್ಬಾರ್ – ದಚ್ಚು ಫ್ಯಾನ್ಸ್​ಗೆ ತ್ರಿಬಲ್ ಧಮಾಕ

0
295

ಸ್ಯಾಂಡಲ್​ವುಡ್​ ‘ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಕ್ಕಾಗಿ ಇಡೀ ಸ್ಯಾಂಡಲ್​ವುಡ್ಡೇ ಕಾಯ್ತಿರುತ್ತೆ. ಅಭಿಮಾನಿಗಳಂತೂ ತಮ್ಮ ‘ಬಾಸ್​’ ಸಿನಿಮಾಕ್ಕಾಗಿ ಜಪ ಮಾಡ್ತಿರ್ತಾರೆ. ಕಳೆದ ವರ್ಷದ ಒಂದೇ ಒಂದು ಸಿನಿಮಾ ಬರದೇ ‘ಮಿಸ್ಟರ್ ಐರಾವತ’ನ ಫ್ಯಾನ್ಸ್​ ಬೇಸರದಲ್ಲಿದ್ರು. ಆ ಬೇಜಾರನ್ನು ಅಭಿಮಾನಿಗಳ ‘ದಾಸ’ ಈ ವರ್ಷ ಹೋಗಲಾಡಿಸಿದ್ದಾರೆ. ವರ್ಷವಿಡೀ ದಚ್ಚು ಸಿನಿಮಾಗಳದ್ದೇ ಕಾರುಬಾರು.
ವರ್ಷಾರಂಭದಲ್ಲಿ ‘ಯಜಮಾನ’ನಾಗಿ ದರ್ಶನ ನೀಡಿದ ‘ಸಾರಥಿ’ ಸದ್ಯ ‘ಕುರುಕ್ಷೇತ್ರ’ದ ಸುಯೋಧನನಾಗಿ ಅಬ್ಬರಿಸುತ್ತಿದ್ದಾರೆ. ಯಜಮಾನ ಸೆಂಚುರಿ ಬಾರಿಸಿದ್ದರೆ, ಕುರಕ್ಷೇತ್ರ ಕೋಟಿ ಕೋಟಿ ಗಳಿಕೆ ಮಾಡುತ್ತಾ ಯಶಸ್ವಿ ಪ್ರದರ್ಶನವನ್ನು ಕಾಣ್ತಿದೆ. ಈ ಬೆನ್ನೆಲ್ಲೇ ‘ಒಡೆಯ’ನ ರಾಜ ದರ್ಬಾರು ಶುರುವಾಗ್ತಿದೆ.

ಈ ಹಿಂದೆ ರಿಲೀಸ್ ಆಗಿದ್ದ ಪೋಸ್ಟರ್​ನಿಂದ ಸಖತ್ ಗಮನ ಸೆಳೆದಿದ್ದ ‘ಒಡೆಯ’ ಮಗು ಎತ್ತಿಕೊಂಡಿರುವ ಮತ್ತೊಂದು ಪೋಸ್ಟರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲೆ ನಿರೀಕ್ಷೆ ಭಾರ ಹೆಚ್ಚಾಗಿದೆ. ಕ್ಲಾಸ್ ಅಂಡ್ ಮಾಸ್ ಲುಕ್​ನಲ್ಲಿ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ‘ಗಜ’ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿ ‘ ಒಡೆಯ’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಡೆಯ ಅಣ್ಣ-ತಮ್ಮಂದಿರ ಸ್ಟೋರಿಯಾಗಿದ್ದು, ದರ್ಶನ್ ಗಜೇಂದ್ರ ಪಾತ್ರದಲ್ಲಿ ನಟಿಸಿದ್ದಾರೆ. ದಚ್ಚುಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಅಭಿನಯಿಸಿದ್ದಾರೆ. ಚಿಕ್ಕಣ್ಣ, ಯಶಸ್ ಸೂರ್ಯ ಮತ್ತಿತರರು ತಾರಾಗಣದಲ್ಲಿದ್ದಾರೆ.

ಎಂ.ಡಿ ಶ್ರೀಧರ್ ನಿರ್ದೇಶನದ ‘ಒಡೆಯ’ನಿಗೆ ಸಂದೇಶ್ ನಾಗರಾಜ್​​ ಬಂಡವಾಳ ಹಾಕಿದ್ದಾರೆ. ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ರೂಪದಲ್ಲಿ ಒಡೆಯ ಮೋಶನ್​ ಪೋಸ್ಟರ್ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ, ಮೋಷನ್ ಪೋಸ್ಟರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಪ್ರೊಡ್ಯೂಸರ್ ಸಂದೇಶ್ ನಾಗರಾಜ್​ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇಂದು ಒಡೆಯನ ಮೋಶನ್ ಪೋಸ್ಟರ್​ಗೆ ವ್ಹೇಟ್ ಮಾಡ್ತಿದ್ದ ಫ್ಯಾನ್ಸ್​ಗೆ ಅಲ್ಪ ನಿರಾಸೆಯಾಗಿದೆ.

ಆದರೆ, ಶೀಘ್ರದಲ್ಲೇ ಮೋಶನ್ ಪೋಸ್ಟರ್ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿಯೂ ಪ್ರೊಡ್ಯೂಸರ್ ಹೇಳಿದ್ದು, ನವೆಂಬರ್​ನಲ್ಲಿ ರಾಜ್ಯೋತ್ಸವಕ್ಕೆ ‘ಒಡೆಯ’ ರಿಲೀಸ್ ಆಗುವ ನಿರೀಕ್ಷೆ ಇರೋದ್ರಿಂದ ಸದ್ಯದಲ್ಲೇ ಮೋಶನ್ ಪೋಸ್ಟರ್, ಟೀಸರ್, ಟ್ರೈಲರ್​ಗಳು ರಿಲೀಸ್ ಆಗಲಿವೆ.

ಇನ್ನು ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಸುತ್ತಾಡಿ, ವನ್ಯಜೀವಿಗಳ ಛಾಯಚಿತ್ರಗಳನ್ನು ಸೆರೆ ಹಿಡಿದು, ಎಂಜಾಯ್ ಮಾಡಿ ವಾಪಸ್​ ಆಗಿರುವ ದರ್ಶನ್ ಸದ್ಯ ರಾಬರ್ಟ್​ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ನವೆಂಬರ್ ಗೆ ಒಡೆಯ ರಿಲೀಸ್ ಆದಲ್ಲಿ ಅಭಿಮಾನಿಗಳಿಗೆ ಈ ವರ್ಷ ತ್ರಿಬಲ್ ಧಮಾಕ.

LEAVE A REPLY

Please enter your comment!
Please enter your name here