ಯೂಟ್ಯೂಬ್​ನಲ್ಲೀಗ ‘ಒಡೆಯ’ನದ್ದೇ ದರ್ಬಾರ್!

0
475

ಸದ್ಯ ಯೂಟ್ಯೂಬ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ಒಡೆಯ’ ಸಿನಿಮಾದ್ದೇ ದರ್ಬಾರು. ಒಡೆಯನ ಡೈಲಾಗ್​ಗೆ ಅಭಿಮಾನಿಗಳು ಕಳೆದೋಗಿದ್ದಾರೆ. ‘ನಮ್ಮ ಜೊತೆ ಇರೋರನ್ನು ನಾವು ಚೆನ್ನಾಗಿ ನೋಡ್ಕೊಂಡ್ರೆ, ಮೇಲ್ಗಡೆ ಇರೋನು ನಮ್ಮನ್ನು ಚೆನ್ನಾಗಿ ನೋಡಿಕೊಳ್ತಾನೆ’ ಅನ್ನೋ ಡೈಲಾಗಂತೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಾಟ್ಸ್​ಆ್ಯಪ್, ಫೇಸ್​ಬುಕ್​ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಡೈಲಾಗ್​ನದ್ದೇ ಸದ್ದು.
ನಿನ್ನೆಯಷ್ಟೇ ಬಿಡುಗಡೆಯಾಗಿರೋ ಟ್ರೈಲರ್ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದ್ದು, ಈಗಾಗಲೇ 14 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದ್ದು, ಅಭಿಮಾನಿಗಳಿಗೆ ‘ಒಡೆಯ’ ಇಷ್ಟವಾಗಿದ್ದಾನೆ.
ಇನ್ನು ಎಂ ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳಿರೋ ಚಿತ್ರ ಇದಾಗಿದ್ದು, ಅರ್ಜುನ್ ಜನ್ಯಾ ಸಂಗೀತದ ಬಲವಿದೆ. ಸಂದೇಶ್ ನಾಗರಾಜ್ ಬಂಡವಾಳ ಹಾಕಿದ್ದು, ಡಿಸೆಂಬರ್ 12ರಂದು ತೆರೆಗೆ ಬರಲಿದೆ.

LEAVE A REPLY

Please enter your comment!
Please enter your name here