Home ಸಿನಿ ಪವರ್ ಅಧಿಕಾರದ ಆಸೆಯಿಂದ ಬಂದಿಲ್ಲ ಎಂದ 'ಒಡೆಯ' ದರ್ಶನ್..!

ಅಧಿಕಾರದ ಆಸೆಯಿಂದ ಬಂದಿಲ್ಲ ಎಂದ ‘ಒಡೆಯ’ ದರ್ಶನ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾನು ಅಧಿಕಾರದ ಆಸೆಯಿಂದ ಬಂದಿಲ್ಲ ಎಂದು ಹೇಳಿದ್ದಾರೆ. ಅರೆ, ದಚ್ಚು ಯಾಕಾಗಿ ಈ ಮಾತು ಹೇಳಿದ್ರು? ಎಲ್ಲಿ ಹೇಳಿದ್ರು ಅಂತ ಯೋಚ್ನೆ ಮಾಡ್ತಿದ್ದೀರಾ..? ಬಹುಶಃ ನೀವು ಒಡೆಯ ಟೀಸರ್ ನೋಡಿದ್ರೆ ಈ ಪ್ರಶ್ನೆನಾ ಕೇಳ್ತಿರ್ಲಿಲ್ಲ!
ಹೌದು ದಚ್ಚು ಅಭಿನಯದ ಒಡೆಯ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ರಾಜ್ಯೋತ್ಸವದ ಸಂಭ್ರಮದಲ್ಲಿ ಒಡೆಯನ ದರ್ಶನವಾಗಿದೆ. ‘ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆಪಟ್ಟು ನನ್ನ ಇಲ್ಲಿ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರನೂ ನಂದೇನೆ, ಆಜ್ಞೆನೂ ನಂದೆನೇ. ನನ್ನ ಫೇಸ್ ಮಾಡ್ಬೇಕು ಅಂದ್ರೆ ಗುಂಡಿಗೇಲಿ ಧಮ್ ಇರ್ಬೇಕು ಎಂಬ ಒಡೆಯನ ಡೈಲಾಗಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಇನ್ನು ಒಡೆಯ ಎಂ ಡಿ ಶ್ರೀಧರ್ ನಿರ್ದೇಶನದ ಸಿನಿಮಾವಾಗಿದ್ದು, ಎನ್ ಸಂದೇಶ್ ಬಂಡವಾಳ ಹಾಕಿದ್ದಾರೆ. ರಾಘವಿ ತಿಮ್ಮಯ್ಯ ದರ್ಶನ್​ಗೆ ಜೋಡಿಯಾಗಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಸಂಸದೆ ಸುಮಲತಾ ಬೇಜವಾಬ್ದಾರಿ ನಡವಳಿಕೆ : ಬಿಸಿಯೂಟ ನೌಕರರ ಆಕ್ರೋಶ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ನಡೆಗೆ ಅಸಮಾಧಾನಗೊಂಡಿರುವ ಮಂಡ್ಯದ ಬಿಸಿಯೂಟ ನೌಕರರು, ಸಂಸದೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಮಂಡ್ಯ ಜಿಲ್ಲಾ...

ಸಕ್ಕರೆ ಕಾರ್ಖಾನೆಯನ್ನ ಖಾಸಗಿಯವರಿಗೆ ಲೀಸ್ ಕೊಡಲು ನಿರ್ಧಾರ : ರೈತ ಮುಖಂಡರ ಆಕ್ರೋಶ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಿಮ್ಮಾಪುರದ ರನ್ನ ಶುಗರ್ ಕಾರ್ಖಾನೆ ರೈತರಿಂದಲೇ  ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿಕೊಂಡು ರೈತರ ಹಿತಕಾಪಾಡಿಕೊಂಡು ಬಂದಿತ್ತು. ಪ್ರತಿವರ್ಷ  ರೈತರ ಹಿತ ಕಾಪಾಡಿಕೊಂಡು ಬರ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆಡಳಿತ...

ಸಿದ್ಧರಾಮಯ್ಯ ಟ್ವೀಟ್​ಗೆ ಕಿಡಿ ಕಾರಿದ ಈಶ್ವರಪ್ಪ..!

ಶಿವಮೊಗ್ಗ: ಬೆಂಗಳೂರು ಗಲಭೆ ಸಂಬಂಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ. ಹಿಂದೂ ಗುರುಗಳು, ಮುಸ್ಲಿಂ ಹಿರಿಯರು ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿ ಎಂದು ಸಿದ್ಧರಾಮಯ್ಯ...

ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರ ಚಳುವಳಿ..!

ಕೊಪ್ಪಳ : ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳು ತಡೆಗೆ ಕಾಯ್ದೆ ರೂಪಿಸಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಪತ್ರಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ. ಪದೇ ಪದೇ ಪತ್ರಕರ್ತರ ಮೇಲೆ ಒಂದಲ್ಲ ಒಂದು ರೀತಿಯ ಹಲ್ಲೆಗಳು...

Recent Comments