ಸೋಶಿಯಲ್ ಮೀಡಿಯಾದಲ್ಲಿ ‘ಒಡೆಯ’ನದ್ದೇ ದರ್ಬಾರ್!

0
600

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಒಡೆಯ’. ಸಿನಿಮಾ ಟೈಟಲ್ ಅನೌನ್ಸ್ ಆದಗಲೇ ದಚ್ಚು ಅಭಿಮಾನಿಗಳ ಕ್ರೇಜ್​ ಜೋರಾಗಿತ್ತು. ಸಿನಿಮಾ ಸೆಟ್ಟೇರಿದಮೇಲೆ ಕೇಳ್ಬೇಕಾ? ಡಿ.ಬಾಸ್ ಅಭಿಮಾನಿಗಳ ಖುಷಿ ಡಬಲ್ ಆಯ್ತು. ಸಿನಿಮಾ ಪೋಸ್ಟರ್ ರಿಲೀಸ್ ಆದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ‘ಒಡೆಯ’ನದ್ದೇ ರಾಜ್ಯಭಾರ. ಪೋಸ್ಟರ್​ಗೆ ಫಿದಾ ಆದ ಅಭಿಮಾನಿಗಳು ‘ಒಡೆಯ’ನ ಪೋಸ್ಟರ್​ ವೈರಲ್ ಮಾಡಿ ಸಂಭ್ರಮಿಸಿದ್ರು.

 ಹೀಗೆ ಸಿನಿಮಾ ಪೋಸ್ಟರೇ ಆ ಮಟ್ಟಿಗೆ ಸದ್ದು ಮಾಡಿದ್ದಾಗ ಟೀಸರ್ ಕೇಳ್ಬೇಕಾ? ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ ಬಿಟ್ಟಿತ್ತು. ಅಕ್ಟೋಬರ್ 31ಕ್ಕೆ ರಿಲೀಸ್ ಆದ ಟೀಸರ್ ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ದರ್ಬಾರ್ ಬಲು ಜೋರಾಗಿದೆ.

ಈ ಟೀಸರ್ ದರ್ಬಾರು ನಡುವೆಯೇ ಟೈಟಲ್ ಟ್ರಾಕ್ ಕಾರುಬಾರು ಆರಂಭವಾಗಿದೆ. ಈಗಲೇ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿರುವ ಒಡೆಯ ಈ ವಿಡಿಯೋ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಒಡೆಯ ಹೇ ಒಡೆಯ ಅನ್ನೋ ಲಿರಿಕಲ್ ಸಾಂಗ್ ಇಂದು ಬೆಳಗ್ಗೆ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀವ್ಸ್ ಪಡೆದಿದೆ.

ಯೆಸ್ ಒಡೆಯ ಟೀಮ್ನಿಂದ ಇಂದು ಮತ್ತೊಂದು ಗಿಫ್ಟ್ ಸಿಕ್ಕಿದೆ. ಒಡೆಯನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾನೆ. ಒಡೆಯನ ಸಾಂಗ್​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಎಲ್ಲೆಲ್ಲೂ ‘ಒಡೆಯ ಹೇ ಒಡೆಯ.. ಬಾ ಒಡೆಯ… ಸಿಡಿಲಿವನು..ದಾರಿಬಿಡಿ.. ಗುಡುಗಿವನು ನೀ ದೂರ ನಡಿ’ ಅನ್ನೋ ಸಾಲಿನದ್ದೇ ಸದ್ದು.

 ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಈ ಸಾಂಗ್ ಹೊಸ ಇತಿಹಾಸವನ್ನೇ ಸೃಷ್ಠಿ ಮಾಡೋ ಸಾಧ್ಯತೆ ಹೆಚ್ಚಿದ್ದು, ವಾವ್ಹ್​ ಸಾಂಗೇ ಈ ಲೆವೆಲ್​ಗೆ ಇರ್ಬೇಕಂದ್ರೆ ಸಿನಿಮಾ ಇನ್ನು ಯಾವ ರೇಂಜಿಗಿರ್ಬೇಡ ಗುರೂ ಅಂತ ಫ್ಯಾನ್ಸ್ ಒಡೆಯನ ಅಸಲಿ ದರ್ಶನಕ್ಕೆ ವ್ಹೇಟ್ ಮಾಡ್ತಿದ್ದಾರೆ.

 ವರ್ಷದ ಆರಂಭದಲ್ಲಿ ‘ಯಜಮಾನ’ನಾಗಿ ಸಖತ್ ಸಕ್ಸಸ್ ಕಂಡಿದ್ದ ದರ್ಶನ್ ಬಳಿಕ ‘ಕುರುಕ್ಷೇತ್ರ’ದ ಸುಯೋಧನನ ಅವತಾರದಲ್ಲಿ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಸಿನಿಮಾ 100 ಕೋಟಿ ಕ್ಲಬ್ ಸೇರಿದ ಹಿನ್ನೆಲೆಯಲ್ಲಿ ಮಹಿಳಾ ಅಭಿಮಾನಿಗಳು ಪ್ರೀತಿಯಂದ ‘ ಶತಕೋಟಿ ಸರದಾರ’ ಎಂಬ ಹೊಸ ಬಿರುದು ಕೊಟ್ಟು ಗೌರವಿಸಿದ್ರು.

ಇನ್ನು ಒಡೆಯ ತಮಿಳಿನ ವೀರಂ ರಿಮೇಕ್. ಎಂ ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳಿರೋ ಒಡೆಯಗೆ. ಸಂದೇಶ್​ ನಾಗರಾಜ್​ ಬಂಡವಾಳ ಹಾಕಿದ್ದಾರೆ. ಸಾನ ತಿಮ್ಮಯ್ಯ ದಚ್ಚುಗೆ ನಾಯಕಿಯಾಗಿ ನಟಿಸಿದ್ದಾರೆ. ದೇವರಾಜ್, ರವಿಶಂಕರ್, ಶರತ್ ಲೋಹಿತಾಶ್ವ, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಗಣ ಒಡೆಯನೊಡನಿದೆ.

 ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ಅರ್ಜುನ್ ಜನ್ಯಾ ಸಂಗೀತದ ಬಲ ತುಂಬಿದ್ದಾರೆ. ವ್ಯಾಸರಾಜ್ ಹಾಡಿಗೆ ಧ್ವನಿಯಾಗಿದ್ದಾರೆ. ಒಟ್ನಲ್ಲಿ ಒಡೆಯನ ಟೀಮ್ ಸಿಕ್ಕಾಪಟ್ಟೆ ಪವರ್ ಫುಲ್ ಆಗಿದ್ದು, ಚಿತ್ರ ಡಿಸೆಂಬರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ವರ್ಷದಲ್ಲಿ ಈಗಾಗಲೇ ರಿಲೀಸ್ ಆಗಿರುವ ಎರಡು ಸಿನಿಮಾಗಳ ಸಕ್ಸಸ್ ಖುಷಿಯಲ್ಲೇ ‘ಒಡೆಯ’ ನ ಆಗಮನವೂ ಆಗ್ತಿದ್ದು, ವರ್ಷದ ಸತತ 3ನೇ ಬಿಗ್ ಸಕ್ಸಸ್ ಸಂಭ್ರಮಿಸಲು ಕಾತುರರಾಗಿದ್ದಾರೆ. ಅಭಿಮಾನಿಗಳು ಮತ್ತೊಂದು ಸಿನಿ ಹಬ್ಬ ಸವಿಯಲು ಉತ್ಸುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿರುವ ಒಡೆಯ ಥಿಯೇಟರ್​ಗೆ ಅಸಲಿ ಆಟಕ್ಕೆ ಲಗ್ಗೆ ಇಟ್ಟ ಮೇಲೆ ಎಂಥಾ ಮೋಡಿ ಮಾಡ್ತಾನೇ ಅನ್ನೋದನ್ನು ಕಾದು ನೋಡ್ಬೇಕು.

-ಚರಿತ ಪಟೇಲ್

LEAVE A REPLY

Please enter your comment!
Please enter your name here