ಫಿಲಿಪೈನ್ಸ್ ಅಭಿಮಾನಿಯ ಆಸೆಯನ್ನು ಈಡೇರಿಸಿದ ರಾಕಿಂಗ್ ಸ್ಟಾರ್ ಯಶ್!

0
455

ಬೆಂಗಳೂರು : ಸ್ಯಾಂಡಲ್​ವುಡ್ ನಟ ರಾಕಿಂಗ್​ ಸ್ಟಾರ್ ಯಶ್​ಗೆ ವಿಶ್ವಮಟ್ಟದಲ್ಲೂ ಅಭಿಮಾನಿಗಳಿದ್ದಾರೆ ಅನ್ನೋದು ಗೊತ್ತೇ ಇದೆ. ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ರಿಲೀಸ್ ಆದ್ಮೇಲೆ ಯಶ್ ನ್ಯಾಷನಲ್ ಸ್ಟಾರ್ ಆಗಿಬಿಟ್ರು. ಇದೀಗ ಯಶ್ ಅವರನ್ನು ಭೇಟಿ ಮಾಡಲು ಫಿಲಿಪೈನ್ಸ್​ನಿಂದ ಅಭಿಮಾನಿಯೊಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ. ಯಶ್ ಆ ಅಭಿಮಾನಿಯ ಬಹು ದಿನದ ಆಸೆಯನ್ನು ಈಡೇರಿಸಿದ್ದಾರೆ.
ಹೌದು, ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ ಯಶ್ ಅವರನ್ನು ಭೇಟಿಯಾಗಲು ಫಿಲಿಪೈನ್ಸ್​ನಿಂದ ಬೆಂಗಳೂರಿಗೆ ಬಂದಿದ್ದಾರೆ.

ಯಶ್​ ಅವರನ್ನು ನೋಡ್ಬೇಕು ಸಹಾಯ ಮಾಡಿ ಅಂತ ಆತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಲ್ಲದೆ ಮಾಧ್ಯಮಗಳು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ರು. ವಿಷಯ ತಿಳಿದ ಯಶ್ ವಿದೇಶದಿಂದ ಬಂದ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.
ಏರ್ ಫೋರ್ಟ್ ನರ್ಸ್ ಆಗಿ ಕೆಲಸ ಮಾಡ್ತಿರೋ ಪೇಟೆ ಅಶೋಕ್ ಜೋರ್ನಲ್, ಸಿನಿಮಾದಲ್ಲಿನ ಯಶ್ ಅಭಿನಯ ಮತ್ತು ಯಶೋಮಾರ್ಗದ ಮೂಲಕ ಯಶ್ ಮಾಡುತ್ತಿರೋ ಕೆಲಸಗಳನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲದೆ ಯಶ್​​ಗಾಗಿ ಕನ್ನಡವನ್ನೂ ಕಲಿತಿದ್ದಾರೆ. ಅಭಿಮಾನಿಯನ್ನು ಭೇಟಿಯಾಗಿ ಮಾತನಾಡಿದ ಯಶ್ ಕೂಡ ಫುಲ್ ಖುಷಿಯಾಗಿದ್ದಾರೆ. ಇದೇ ತಿಂಗಳು 20ರಂದು ಪೇಟೆ ಅಶೋಕ್ ಜೋರ್ನಲ್ ಫಿಲಿಪೈನ್ಸ್ ಗೆ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here