ನವದೆಹಲಿ: ವಿಶ್ವಾದ್ಯಂತ ಕಾಲಿಟ್ಟ ಕೊರೋನಾ ವೈರಸ್ ನಮ್ಮ ಭಾರತಕ್ಕೆ ಲಗ್ಗೆ ಇಟ್ಟು ಕೆಲವು ದಿನಗಳಷ್ಠೆ ಆಗಿದೆ. ಆದರೆ ಅದರ ತೀವ್ರತೆ ಮಾತ್ರ ಅತಿಯಾಗಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಭಯ ಹುಟ್ಟಿಸುತ್ತಿರುವ ಡೆಡ್ಲಿ ಕೊರೋನಾ ವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ನೂರರ ಗಡಿ ದಾಟಿ 108 ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ 9 ಗಂಟೆಯವರೆಗೆ 93 ರಷ್ಟಿದ್ದ ಸೋಂಕಿತರ ಸಂಖ್ಯೆ ತಕ್ಷಣಕ್ಕೆ 108 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲೇ ಒಟ್ಟು 31 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇನ್ನು ಕೇರಳದಲ್ಲಿ 22 ಸೋಂಕಿತರು ಹಾಗೂ ಉತ್ತರ ಪ್ರದೇಶದಲ್ಲಿ 11 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಒಬ್ಬ ವಿದೇಶಿಗನಾಗಿದ್ದಾನೆ. ಇನ್ನುಳಿದಂತೆ ದೆಹಲಿ 7, ಹರಿಯಾಣ 14(ವಿದೇಶಿಗರು), ರಾಜಸ್ಥಾನ 2(ವಿದೇಶಿಗರು), ಲಡಾಖ್ 3, ತಮಿಳುನಾಡು 1, ಜಮ್ಮು ಕಾಶ್ಮೀರ 2, ಪಂಜಾಬ್ 1, ಕರ್ನಾಟಕ 6 ಹಾಗೂ ಆಂಧ್ರಪ್ರದೇಶ 1 ಸೋಂಕಿತರು ಪತ್ತೆಯಾಗಿದ್ದಾರೆ. ಹಾಗಾಗಿ ದೇಶದಲ್ಲಿ ಈವರೆಗೆ ಒಟ್ಟು 108 ಸೋಂಕಿತರ ಪ್ರಕರಣಗಳು ದಾಖಲಾಗಿದೆ.