ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಉರಿಯುತ್ತಿರುವ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪುತ್ರಿ ಮಾಡಿರೋ ಪೋಸ್ಟ್ ಚರ್ಚೆಗೆ ಕಾರಣವಾಗಿದೆ. ಮಗಳ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೌರವ್ ಗಂಗೂಲಿ, ನನ್ನ ಮಗಳನ್ನು ವಿವಾದಕ್ಕೆ ಎಳೆದು ತರಬೇಡಿ ಅಂತ ಮನವಿ ಮಾಡಿದ್ದಾರೆ.
‘ಪ್ಲೀಸ್ ಸನಾಳನ್ನು ಈ ವಿಚಾರದಿಂದ ದೂರವಿಡಿ. ಈ ಪೋಸ್ಟ್ ಸತ್ಯಕ್ಕೆ ದೂರವಾದುದು. ರಾಜಕೀಯವನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವಳಲ್ಲ’ ಅಂತ ಗಂಗೂಲಿ ಟ್ವೀಟ್ ಮಾಡಿದ್ದಾರೆ.
ಖ್ಯಾತ ಲೇಖಕ ಖುಶ್ವಂತ್ ಸಿಂಗ್ ಬರೆದ ‘ದಿ ಎಂಡ್ ಆಫ್ ಇಂಡಿಯಾ’ (ಭಾರತದ ಅಂತ್ಯ) ಪುಸ್ತಕದ ಸಾಲುಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಸನಾ ಶೇರ್ ಮಾಡಿದ್ದು, ಸದ್ಯ ಆ ಪೋಸ್ಟ್ ವೈರಲ್ ಆಗುತ್ತಿದೆ.
‘ದಿ ಎಂಡ್ ಆಫ್ ಇಂಡಿಯಾ’ : ಚರ್ಚೆ ಹುಟ್ಟುಹಾಕಿದ ಸೌರವ್ ಗಂಗೂಲಿ ಪುತ್ರಿ ಪೋಸ್ಟ್!