ಪಾಕ್​ ವಿರುದ್ಧ ಕ್ರಿಕೆಟ್​ ಮಾತ್ರಲ್ಲ, ಯಾವ್ದೇ ಆಟ ಆಡಬಾರದು..!

0
185

ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಇಡೀ ದೇಶ ಪ್ರತೀಕಾರವನ್ನು ತೀರಿಸಿಕೊಳ್ಳಲು ಬಯಸುತ್ತಿದೆ. ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್​ ಆಡಬಾರದು. ವಿಶ್ವಕಪ್​ನಲ್ಲಿ ಮುಖಾಮುಖಿಯಾದರೆ ಪಾಪಿಗಳ ವಿರುದ್ಧ ಆಡಲ್ಲ ಅಂತ ಮ್ಯಾಚ್​ ಅನ್ನು ಬಹಿಷ್ಕರಿಸಿಬೇಕು ಎನ್ನುವ ಕೂಗು ಕೇಳಿಬರುತ್ತಿದೆ.
ಇದೀಗ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇದಕ್ಕೆ ಧ್ವನಿ ಗೂಡಿಸಿದ್ದಾರೆ. ಕ್ರಿಕೆಟ್ ಮಾತ್ರವಲ್ಲ ಪಾಕ್ ವಿರುದ್ಧ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿತಗೊಳಿಸಿಕೊಳ್ಳಬೇಕು ಅಂತ ಬಂಗಾಳದ ಹುಲಿ ಹೇಳಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ, ಫುಟ್ಬಾಲ್, ಹಾಕಿ ಹೀಗೆ ಯಾವ್ದೇ ಕ್ರೀಡೆಗಳನ್ನು ಆಡಬಾರದು ಅನ್ನೋದು ದಾದಾ ಅಭಿಪ್ರಾಯ. ಪಾಕ್​ ವಿರುದ್ಧ ಆಡದೇ ಇದ್ರೆ ಭಾರತಕ್ಕೇನು ನಷ್ಟವಿಲ್ಲ. ಆಡದೇ ಸರಿಯಾಗಿ ಬಿಸಿ ಮುಟ್ಟಿಸಬೇಕು ಅಂದಿದ್ದಾರೆ ಗಂಗೂಲಿ.

LEAVE A REPLY

Please enter your comment!
Please enter your name here