Homeಲೈಫ್ ಸ್ಟೈಲ್ಅಡುಗೆದೇಶಕ್ಕೆ ನೊರೊ ವೈರಸ್ ಎಂಟ್ರಿ : ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನವಿರಲಿ

ದೇಶಕ್ಕೆ ನೊರೊ ವೈರಸ್ ಎಂಟ್ರಿ : ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನವಿರಲಿ

ಕೊರೊನ ಕೊರೊನಾ ..ಅಂತ ಭಯ ಪಡ್ತಾಯಿದ್ದ ಜನ ಕೊರೋನಾ ಪಾಸಿಟಿವ್ ಪ್ರಕರಣಗಳು ಕಮ್ಮಿಯಾಗ್ತಾಯಿದ್ದಂತೆ ಸ್ವಲ್ಪ ಸಮಾಧಾನದಲ್ಲಿದ್ದಾರೆ ಆದ್ರೆ ಆ ಸಮಾಧಾನಕ್ಕೆ ಕೇರಳದ ವೈಯ್ನಾಡಲ್ಲಿ ಪತ್ತೆಯಾಗಿರೋ ಹೊಸ ವೈರಸ್ ಕೊಳ್ಳಿಯಿಟ್ಟಂತ್ತೆ ಕಾಣ್ತಿದೆ.

ಹೌದು ಕೇರಳದ ವೈಯ್ನಾಡಿನಲ್ಲಿ ನೊರೊ ವೈರಸ್ ಎಂಬ ಹೊಸ ವೈರಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸದ್ಯ ನೊರೊ ವೈರಸ್ ಹಿನ್ನೆಲೆ ಮೈಸೂರು ಜಿಲ್ಲೆಯ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ನ್ಯೂರೋ ವೈರಸ್ ಮಾರಣಾಂತಿಕವಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಕಾರಿಗಳು ತಿಳಿಸಿದ್ದಾರೆ.

ನೊರೊ ವೈರಸ್ ಎಂದ್ರೇನು..?

ನೊರೊ ವೈರಸ್ ಅನ್ನು ವಿಂಟರ್ ವಾಮಿಟಿಂಗ್ ಬಗ್ ಎಂದು ಕರೆಯಲಾಗುತ್ತೆ. ಇದು ಹೊಟ್ಟೆಯಲ್ಲಿ ನಾವು ತಿನ್ನುವ ಆಹಾರ ಮತ್ತು ಕಲುಷಿತವಾದ ನೀರಿನಿಂದ ಸಮಸ್ಯೆ ಉಂಟುಮಾಡಿ ವಾಂತಿ ಮತ್ತು ಅತಿಸಾರದ ವನ್ನು ಉಂಟಾಗುತ್ತೆ ನಂತರ ದೇಹದ ಶಕ್ತಿ ಕುಂದಿ ಸೋಂಕಿತರಲ್ಲಿ ಅತಿಯಾದ ಸುಸ್ತು ಕಂಡುಬರುವಂತೆ ಮಾಡುತ್ತೆ.
ನೊರೊ ವೈರಸ್ ಬೇರೆ ವೈರಸ್‍ನಂತೆ ಅಷ್ಟು ಮಾರಕವಲ್ಲ. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಸ್ಪರ್ಶ ಮತ್ತು ಗಾಳಿಯಿಂದ ಸ್ಪ್ರೆಡ್ ಆಗಲ್ಲ ಅನ್ನೋ ವಿಚಾರ ಆರೋಗ್ಯ ಇಲಾಖೆಗೆ ಮಾತ್ರ ವಲ್ಲದೆ ಜನರಲ್ಲೂ ಸಮಧಾನ ತಂದಿದೆ. ಸ್ಪರ್ಶದಿಂದ ಹರಡುವ ವೈರಸ್ ಆಗಿದ್ದರೆ ದುಷ್ಪರಿಣಾಮ ಮತ್ತಷ್ಟು ಹೆಚ್ಚಾಗುತ್ತಿತ್ತು.

ಗಾಳಿಯಿಂದ, ಸ್ಪರ್ಶದಿಂದ ಹರಡೋದಿಲ್ಲ ಅಂತ ನೆಗ್ಲೆಟ್ ಮಾಡುವಂತೆಯೂ ಇಲ್ಲ ಯಾಕಂದ್ರೆ ಕಲುಷಿತ ನೀರನ್ನ ಕುಡಿಯೋದ್ರಿಂದ ಮತ್ತು ವೈರಸ್ ತಗುಲಿದ ವ್ಯಕ್ತಿ ಕುಡಿದ ಮತ್ತು ತಿಂದ ಪದಾರ್ಥಗಳನ್ನು ನೀವು ಸೇವಿಸೋದ್ರಿಂದ ನಿಮ್ಮ ದೇಹವನ್ನೂ ಈ ವೈರಸ್ ಪ್ರವೇಶಿಸುತ್ತೆ.

ಸ್ವಚ್ಚವಿಲ್ಲದ ಜಾಗ ಅಥವ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಈ ವೈರಸ್ ನಿಮ್ಮ ದೇಹವನ್ನು ಹೊಕ್ಕುವ ಸಾಧ್ಯತೆ ಇದೆ. ಹೀಗಾಗಿ ಕೋವಿಡ್ ನಿಮಯಗಳನ್ನ ಪಾಲಿಸೋದನ್ನ ಮರೆಯದಿರಿ.

ಕೇರಳದ ವೈಯ್ನಾಡಲ್ಲಿ ಕಳೆದ ಎರಡು ದಿನದ ಹಿಂದಷ್ಟೇ ಹೊಸ ವೈರಸ್ ಪತ್ತೆಯಾಗಿರುವುದರಿಂದ ಇನ್ನು ಆ ವೈರಸ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ. ಸದ್ಯಕ್ಕೆ ವಾಂತಿ ಮತ್ತು ಅತಿಯಾಗಿ ಸುಸ್ತಾಗೋದು ಈ ವೈರಸ್ ನ ಲಕ್ಷಣಗಳು ಎಂದು ಹೇಳಲಾಗಿದ್ದು, ಯಾವುದೇ ಆತಂಕ ಪಡದೆ ವೈಯಕ್ತಿಕ ಸ್ವಚ್ಚತೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ತಜ್ಞರು ಸಲಹೆ ಕೊಟ್ಟಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments