ಬೆಂಗಳೂರು: ಸೇಫ್ ಸಿಟಿ ಟೆಂಡರ್ ನಲ್ಲಿ ಡಿ.ರೂಪಾ ಹಸ್ತಕ್ಷೇಪ ವಿಚಾರವಾಗಿ ಐಪಿಎಸ್ ಅಧಿಕಾರಿ ಡಿ.ರೂಪಾಗೆ ನಿಂಬಾಳ್ಕರ್ ಅವರು ತಿರುಗೇಟು ನೀಡಿದ್ದಾರೆ.
619ಕೋಟಿ ರೂ. ಟೆಂಡರ್ ಸಂಬಂಧ ಪತ್ರ ಬರೆದಿದ್ದೇನೆ. ಪತ್ರದಲ್ಲಿ ನಾನೂ ಏನೂ ಹೇಳಿಲ್ಲ, ತನಿಖೆಗೆ ಮಾತ್ರ ಕೇಳಿದ್ದೇನೆ. ವೈಯಕ್ತಿಕವಾದ ಯಾವುದೇ ಟೀಕೆ ಮಾಡಿಲ್ಲ. ವಿವಾದದ ಬಗ್ಗೆ ಸ್ಪಷ್ಟನೆ ಕೊಡಬೇಕಿದಿದ್ದು, ನನ್ನ ಕರ್ತವ್ಯ. ಟೆಂಡರ್ ಪ್ರಕ್ರಿಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಹಾಗೇ ಮಾಹಿತಿ ಸೋರಿಕೆ ಬಗ್ಗೆ ಊಹಾಪೂಹಗಳು ಎದ್ದಿವೆ ಎಂದು ಹೇಳಿದ್ದಾರೆ.
ಟೆಂಡರ್ ವಿಚಾರದಲ್ಲಿ ಐಪಿಎಸ್ ಅಧಿಕಾರಿಗಳ ಬಿಗ್ ಫೈಟ್ ನಡೆಯುತ್ತಿದೆ. ನಿನ್ನೆ ಕಾರ್ಯಕ್ರಮ ಒಂದರಲ್ಲಿ ಡಿ.ರೂಪಾ ಹಾಡಿನ ಮೂಲಕ ಹೇಮಂತ ನಿಂಬಾಳ್ಕರ್ ಅವರಿಗೆ ಟಾಂಗ್ ಕೋಟ್ಟಿದ್ದಾರೆ. ಹಾಡಿನ ಕೊನೆಯಲ್ಲಿ ಡಿ.ರೂಪಾ ಅವರು ಅರ್ಥವಾಗುವವರಿಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.