Saturday, October 1, 2022
Powertv Logo
Homeದೇಶಚುನಾವಣಾ ಪ್ರಣಾಳಿಕೆ ಭರವಸೆ ಈಡೇರಿಸದಿದ್ದರೆ ದಂಡ ವಿಧಿಸಲಾಗದು: ಹೈಕೋರ್ಟ್​

ಚುನಾವಣಾ ಪ್ರಣಾಳಿಕೆ ಭರವಸೆ ಈಡೇರಿಸದಿದ್ದರೆ ದಂಡ ವಿಧಿಸಲಾಗದು: ಹೈಕೋರ್ಟ್​

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು (Election Promises) ಈಡೇರಿಸಲು ವಿಫಲವಾದರೆ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಲು ಆಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಅಭಿಪ್ರಾಯಪಟ್ಟಿದೆ. ಈ ವಿಷಯದಲ್ಲಿ ಎರಡು ಕೆಳ ನ್ಯಾಯಾಲಯಗಳು ನೀಡಿದ ಆದೇಶವನ್ನು ಪ್ರಶ್ನಿಸಿ ಮಾರ್ಚ್ 2 ರಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರ ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ, ‘‘ಯಾವುದೇ ರಾಜಕೀಯ ಪಕ್ಷವು ಪ್ರಕಟಿಸುವ ಚುನಾವಣಾ ಪ್ರಣಾಳಿಕೆಯು ಚುನಾವಣೆಯ ಸಮಯದಲ್ಲಿ, ಅವರ ನೀತಿ, ದೃಷ್ಟಿಕೋನ, ಭರವಸೆ ಮತ್ತು ಪ್ರತಿಜ್ಞೆಯ ಹೇಳಿಕೆಯಾಗಿರುತ್ತದೆ. ನ್ಯಾಯಾಲಯಗಳ ಮೂಲಕ ಅದನ್ನು ಕಾರ್ಯಗತಗೊಳಿಸಲಾಗುವುದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದಲ್ಲಿ ರಾಜಕೀಯ ಪಕ್ಷಗಳನ್ನು ಕಾನೂನಿನಡಿಯಲ್ಲಿ ತಂದು ದಂಡ ವಿಧಿಸುವ ಯಾವುದೇ ಅವಕಾಶಗಳಿಲ್ಲ’’ ಎಂದು ಹೇಳಿದೆ. ಪ್ರಕರಣದ ಕುರಿತು ಗುರುವಾರ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಈ ತೀರ್ಪಿನಿಂದ ರಾಜಕೀಯ ಪಕ್ಷಗಳಲ್ಲಿ ಉತ್ಸಾಹ ಗರಿಗೆದರಿದೆ ಎಂದು ಭಾವಿಸಬಹುದು. ಏಕೆಂದರೆ ಇನ್ನು ಮುಂದೆ ಬಿಂದಾಸಾಗಿ ನೀವು ಚುನಾವಣಾ ಪ್ರಣಾಳಿಕೆಯಲ್ಲಿ ಎಷ್ಟಾದರೂ ಸುಳ್ಳನ್ನು ಸೇರಿಸಿ ಜನರನ್ನು ಮೋಸ ಮಾಡಬಹುದು. ಇದು ಕಾನೂನು ಬದ್ಧ. ನಮ್ಮ ಜನಪದರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಸೃಷ್ಟಿ ಮಾಡಿರುವುದು ಇದೇ ಕಾರಣಕ್ಕೆ ಅಲ್ಲವೆ?

- Advertisment -

Most Popular

Recent Comments