Saturday, May 28, 2022
Powertv Logo
Homeರಾಜ್ಯಕಾನೂನಿಗಿಂತ ಯಾರೂ ದೊಡ್ಡವರಲ್ಲ : ಮಾಜಿ ಸಚಿವ ಎಂ.ಬಿ.ಪಾಟೀಲ್

ಕಾನೂನಿಗಿಂತ ಯಾರೂ ದೊಡ್ಡವರಲ್ಲ : ಮಾಜಿ ಸಚಿವ ಎಂ.ಬಿ.ಪಾಟೀಲ್

ಬಾಗಲಕೋಟೆ : ಪಿಎಫ್ಐ ಜೊತೆಗೆ ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, & ಭಜರಂಗದಳ ಜೊತೆ ಸನಾತನ ಧಮ೯ ಬ್ಯಾನ್ ಮಾಡಬೇಕು ಎಂದು ಬಾಗಲಕೋಟೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ.

ಒಬ್ಬನು ಯಾವನೋ ಸ್ಟೇಟಸ್ ಹಾಕಿದ್ದರಿಂದ ಹುಬ್ಬಳ್ಳಿ ಗಲಾಟೆಯಾಯ್ತು. ಪ್ರಚೋದನೆ ಆಯ್ತು ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಕೈಯಲ್ಲಿ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ.ತಪ್ಪಿತಸ್ಥರು ಯಾರೇ ಇರಲಿ ನಿಧಾ೯ಕ್ಷಣ್ಯ ಕ್ರಮ ಆಗಬೇಕು. ನಿರಪರಾಧಿಗಳನ್ನ ಹರ್ಯಾಶಮೆಂಟ್ ಮಾಡಬೇಡಿ. ಎಸ್.ಡಿ.ಪಿ.ಐ ಸಂಘಟನೆ ಕೂಡಲೇ ಬ್ಯಾನ್ ಮಾಡಿ. ಪಿಎಫ್ಐ ಬ್ಯಾನ್ ಮಾಡಿ. ಇದರೊಟ್ಟಿಗೆ RSS, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮಸೇನೆ ಸಹಿತ ಬ್ಯಾನ್ ಮಾಡಿ ಎಂದರು.

ಯಾರೂ ಕೋಮುಭಾವನೆ ಕೆರಳಿಸುತ್ತಾರೋ ಅವರನ್ನ ಬ್ಯಾನ್ ‌ಮಾಡಿ, ನಮ್ಮ ಅಭ್ಯಂತರವಿಲ್ಲ. ಕಾಂಗ್ರೆಸ್ ಪಕ್ಷ ಬ್ಯಾನ್ ಮಾಡಲು ಸಪೋಟ೯ ಮಾಡುತ್ತೇ. ಎರಡನ್ನೂ ಬ್ಯಾನ್ ಮಾಡಿ. ಆರ್.ಎಸ್.ಎಸ್. ದೇಶಭಕ್ತಿ ಸಂಘಟನೆ ಎನ್ನುವ ವಿಚಾರ. ನೋಡಿ RSS ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಇವರೆಲ್ಲಾ ಬ್ರಿಟಿಷ್ ರ ಏಜೆಂಟ್ ರಾಗಿದ್ರು…ಇಡೀ ಜಗತ್ತಿಗೆ ಗೊತ್ತಿದೆ. ಸಾವರಕರ್ ಇತಿಹಾಸ ಗೊತ್ತಿದೆಯಾ ತಮಗೆ. ಸಾವರಕರ್ 3 ಸಾರಿ ಕ್ಷಮೆ ಕೋರಿ ಪತ್ರ ಬರೆದಿದ್ದರು. ಬಿಜೆಪಿ, ಆರ್.ಎಸ್.ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ.

ಕೋಮು ಭಾವನೆ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. ಜನರಿಗೂ ಸ್ವಲ್ಪ ದಿನದಲ್ಲಿ ಸತ್ಯ ಗೊತ್ತಾಗುತ್ತೆ. ನಮ್ಮದು ಸವ೯ ಜನಾಂಗದ ಶಾಂತಿಯ ತೋಟ. ಅದನ್ನು ಮಾಡಲು ಬಿಡ್ತಿಲ್ಲ. ತಮ್ಮ ತಪ್ಪು ವೈಫಲ್ಯ, ೪೦ ಪಸೆ೯ಂಟ್ ಮುಚ್ಚಿಕೊಳ್ಳಲು ಹಿಜಾಬ್, ಹಲಾಲ್ ತರುತ್ತಿದ್ದಾರೆಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

- Advertisment -

Most Popular

Recent Comments