ಬೆಂಗಳೂರು : ರಾಜ್ಯದಲ್ಲಿ ‘ಒಮಿಕ್ರಾನ್‌ ರೂಪಾಂತರಿ ವೈರಸ್‌ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಸಾಧ್ಯತೆ ಇದೆಯಾ ಅನ್ನೋ ಜನಸಮಾನ್ಯರ ಗೊಂದಲಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಸ್ಪಷ್ಟನೆ ನೀಡಿದ್ದಾರೆ.

ಲಾಕ್​ಡೌನ್ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದಿರುವ ಬೊಮ್ಮಾಯಿಯವರು ‘ಒಮಿಕ್ರಾನ್‌’ ರೂಪಾಂತರಿಗೆ ಬಗ್ಗೆ ಎಲ್ಲಾ ಕಡೆ ಗಮನಿಸುತ್ತಿದ್ದೇವೆ. ಸದ್ಯ ಜನಜೀವನ ಹೇಗಿದೆಯೋ ಹಾಗೆಯೇ ನಡೆಯುತ್ತದೆ , ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರನಿಗಾ ಇರಿಸಲಾಗಿದೆ .ರಾಜ್ಯದ ಗಡಿಯಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಿದ್ದೇವೆ ಅದ್ರಲ್ಲೂ ವಿಶೇಷವಾಗಿ ಕ್ಲಸ್ಟರ್‌ ಪ್ರದೇಶದಲ್ಲಿ ತೀವ್ರ ನಿಗಾವಹಿಸಿದ್ದೇವೆ ಎಂದಿದ್ದಾರೆ.

ಇನ್ನೂ ಲಾಕ್​ಡೌನ್ ಬಗ್ಗೆ ಯಾವುದೇ ಊಹಾಪೋಹಗಳಿಗೆ ಜನರು ಕಿವಿಕೊಡಬಾರದು, ಸಂಘ-ಸಂಸ್ಥೆಗಳು ಕೊವಿಡ್‌ ರೂಲ್ಸ್ ಪಾಲಿಸಬೇಕು ಆದ್ರೆ ಸದ್ಯಕ್ಕಂತೂ ಯಾವುದೇ ಕಠಿಣ ನಿಯಮಗಳು ಜಾರಿ ಇಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

14 COMMENTS

LEAVE A REPLY

Please enter your comment!
Please enter your name here