ಮೀನುಗಾರರ ಪತ್ತೆಗಾಗಿ ಮತ್ತೊಂದು ಪ್ರತಿಭಟನೆ ಎಚ್ಚರಿಕೆ

0
181

ಉಡುಪಿ: ಮೀನುಗಾರರ ಪತ್ತೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಮತ್ತೊಮ್ಮೆ ಬೃಹತ್ ಪ್ರತಿಭಟನೆ ಮಾಡುವುದಾಗಿ ನಾಪತ್ತೆಯಾದ ಮೀನುಗಾರನ ಸಹೋದರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಮೇತ ಏಳು ಜನ ಮೀನುಗಾರರು ನಾಪತ್ತೆಯಾಗಿ ಸುಮಾರು 50 ದಿನಗಳು ಕಳೆದಿದೆ. ಉಡುಪಿ ಉಸ್ತುವಾರಿ ಸಚಿವೆ ಜಯಮಾಲ ಅವರಿಂದ ಹಿಡಿದು ಗೃಹ ಸಚಿವ ಎಂ.ಬಿ.ಪಾಟೀಲ್, ಮೀನುಗಾರಿಕಾ ಸಚಿವ ವೆಂಕಟ್ರಾವ್ ನಾಡಗೌಡ ಮೀನುಗಾರರ ಮನೆಗಳಿಗೆ ಭೇಟಿ ನೀಡಿದ್ದು ಬಿಟ್ರೆ ಇಲ್ಲಿವರೆಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಮೀನುಗಾರರ ಮಿಸ್ಸಿಂಗ್ ಕುರಿತು ದಿನಕ್ಕೊಂದು ಕಥೆ ವೈರಲ್ ಆಗುತ್ತಿದೆ. ಮೀನುಗಾರರು ಸಿಕ್ಕಿದ್ದಾರೆ. ಶ್ರೀಲಂಕಾದಲ್ಲಿದ್ದಾರೆ, ಪತ್ತೆಯಾದರು ಮೀನುಗಾರರು ಎನ್ನುವ ಫೇಕ್ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಹೀಗಾಗಿ ಆದಷ್ಟು ಬೇಗ ನಾಪತ್ತೆಯಾದ ಮೀನುಗಾರರ ಪತ್ತೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here