HomeP.Cricketಇಂಟರ್ ನ್ಯಾಷನಲ್‘ಸಿಲಿಂಡರ್ ಡೆಲಿವರಿ ಬಾಯ್​ಗೆ ‘ಡೆಲಿವರಿ ಚಾರ್ಜ್‘ ನೀಡಬೇಕಿಲ್ಲ‘

‘ಸಿಲಿಂಡರ್ ಡೆಲಿವರಿ ಬಾಯ್​ಗೆ ‘ಡೆಲಿವರಿ ಚಾರ್ಜ್‘ ನೀಡಬೇಕಿಲ್ಲ‘

ಹೈದರಾಬಾದ್: ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್​ಗಳು 30,40,50 ರೂ.ಗಳನ್ನು ‘ಡೆಲಿವರಿ ಚಾರ್ಜ್ ಎಂದು ಹೇಳಿ ಪಡೆಯುವುದು ಮಾಮೂಲು. ಆದರೆ ಗ್ರಾಹಕರು ಡೆಲಿವರಿ ಬಾಯ್​ಗಳಿಗೆ ಈ ಹಣ ಕೊಡುವ ಅವಶ್ಯಕತೆ ಇಲ್ಲ‘ ಎಂದುಹಿಂದುಸ್ತಾನ ಪೆಟ್ರೋಲಿಯಂ ಕಾರ್ಪೋರೆಷನ್ (ಎಚ್​ಪಿಸಿಎಲ್​) ಕಂಪನಿ ಹೇಳಿದೆ.

ಕರೀಂ ಅನ್ಸಾರಿ ಎಂಬ ಹೈದರಾಬಾದ್ ನಿವಾಸಿ ಎಚ್​ಪಿಸಿಎಲ್​ಗೆ ಇತ್ತೀಚೆಗೆ ಮಾಹಿತಿ ಹಕ್ಕು (ಆರ್​ಟಿಐ) ಮೂಲಕ ಅರ್ಜಿ ಸಲ್ಲಿಸಿ,‘ನನಗೆ ಸಿಲಿಂಡರ್ ಡೆಲಿವರಿ ವೇಳೆ ಡೆಲಿವರಿ ಬಾಯ್​ ಹೆಚ್ಚು ಹಣ ಕೇಳಿದ. ಇದು ನಿಯಮದಲ್ಲಿದೆಯೇ? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಎಚ್​ಪಿಸಿಎಲ್​,‘ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿ.

ಕಟ್ಟಡ,ಅಪಾರ್ಟ್​ಮೆಂಟ್,ಫ್ಲಾಟ್ ಯಾವುದೇ ಅಂತಸ್ತಿನಲ್ಲಿ ಇರಲಿ ಡೆಲಿವರಿ ಬಾಯ್​ಗಳು ಯಾವುದೇ ಹೆಚ್ಚುವರಿ ಹಣ ಪಡೆಯದೇ ತಲುಪಿಸಬೇಕು. ಕೇವಲ ಬಿಲ್​ನಲ್ಲಿರುವಷ್ಟು ಹಣ ಮಾತ್ರ ಪಡೆಯಬೇಕು. ಒಂದು ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದರೆ ನಿರಾಕರಿಸಬಹುದು ಎಂದು ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments