ಹೆಸರಿಗಷ್ಟೇ ಸ್ಮಾರ್ಟ್​ ಸಿಟಿ, ಸ್ವಚ್ಛತೆ ಮಾರು ದೂರ..!

0
140

ದಾವಣಗೆರೆ: ಬೆಣ್ಣೆನಗರಿಗೆ ಸ್ಮಾರ್ಟ್ ಸಿಟಿ ಅನ್ನೋ ಪಟ್ಟ ಬಿರುದಿಗಷ್ಟೇ ಸೀಮಿತವಾಗಿದೆ. ಸ್ವಚ್ಛತೆ ಮಾತ್ರ ಮಾರು ದೂರವಿದೆ. ಊರಿನ ಪಾಲಿಗೆ ಹೆಸರಿಗಷ್ಟೇ ಸ್ಮಾರ್ಟ್‌ ಸಿಟಿ ಕಿರೀಟವಿದ್ದು, ಇಂದಿಗೂ ಜನರು ಕೊಳಚೆ ನೀರು, ಚರಂಡಿ ವಾಸನೆ ನಡುವೆ ಜೀವನ ನಡೆಸುತ್ತಿದ್ದಾರೆ. ತಮ್ಮೂರು ಸ್ಮಾರ್ಟ್​ ಸಿಟಿ ಆದ್ರೂ ಇಲ್ಲಿನ ಮಂದಿ ನರಕ ಅನುಭವಿಸುತ್ತಲೇ ಇದ್ದಾರೆ.

ಬೇತೂರು ರಸ್ತೆ 5ನೇ ಕ್ರಾಸ್, ಮುದ್ದಬಾವಿ ಕಾಲನಿಯೇ ನರಕವಾಗಿದ್ದು, ಈ ಬಾರಿ ಮತ ಕೇಳುವುದಕ್ಕೂ ಅಭ್ಯರ್ಥಿ ಅಲ್ಲಿಗೆ ಬಂದಿಲ್ಲ. ಸ್ಮಾರ್ಟ್ ಸಿಟಿ ಅನ್ನೋ ಬಿರುದು ಪಡ್ಕೊಂಡು ಕೆಲಸ ಮಾಡದೇ ಮಹಾನಗರ ಪಾಲಿಕೆ ಮೈ ಮರೆತಿದ್ಯಾ ಅನ್ನೋ ಸಂದೇಹ ಮೂಡುತ್ತದೆ. ಜನರಿಗಿಂತ ಇಲ್ಲಿ ಹಂದಿ, ಸೊಳ್ಳೆಗಳದ್ದೇ ಸಾಮ್ರಾಜ್ಯ ವ್ಯಾಪಿಸಿದ್ದು, ಜನಪ್ರತಿನಿಧಿಗಳು ಮಾತ್ರ ಜನರ ಈ ದುಸ್ಥಿತಿ ಕಂಡೂ ಕಾಣದಂತಿದ್ದಾರೆ.

LEAVE A REPLY

Please enter your comment!
Please enter your name here